IND vs ENG: ಇಂಗ್ಲೆಂಡ್​ನಲ್ಲಿ ಮತ್ತೊಮ್ಮೆ ದಾಖಲೆಯ ಶತಕ ಸಿಡಿಸಿದ ರಿಷಬ್ ಪಂತ್! ಸಾಥ್ ನೀಡಿದ ಜಡೇಜಾ

IND vs ENG: ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್ ಹ್ಯಾಮ್ ಟೆಸ್ಟ್​ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.

IND vs ENG: ಇಂಗ್ಲೆಂಡ್​ನಲ್ಲಿ ಮತ್ತೊಮ್ಮೆ ದಾಖಲೆಯ ಶತಕ ಸಿಡಿಸಿದ ರಿಷಬ್ ಪಂತ್! ಸಾಥ್ ನೀಡಿದ  ಜಡೇಜಾ
Follow us
TV9 Web
| Updated By: ಪೃಥ್ವಿಶಂಕರ

Updated on:Jul 01, 2022 | 10:44 PM

ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ (Rishabh Pant) ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್ ಹ್ಯಾಮ್ ಟೆಸ್ಟ್​ನಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಶುಕ್ರವಾರ ಜುಲೈ 1 ರಂದು ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನವೇ ಪಂತ್ ದಾಖಲೆಯ ಶತಕ ಬಾರಿಸುವ ಮೂಲಕ ಹೊಸ ದಾಖಲೆಗಳನ್ನು ಬರೆದುಕೊಂಡಿದ್ದಲ್ಲದೆ, ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಮತ್ತೊಮ್ಮೆ ಉತ್ತಮ ಸ್ಥಿತಿಗೆ ತಂದರು. ದಿನದ ಮೂರನೇ ಸೆಷನ್​ನಲ್ಲಿ ಕೇವಲ 89 ಎಸೆತಗಳಲ್ಲಿ ಪಂತ್ ತಮ್ಮ ಟೆಸ್ಟ್ ವೃತ್ತಿಜೀವನದ ಐದನೇ ಶತಕವನ್ನು ಪೂರ್ಣಗೊಳಿಸಿದರು. ಶತಕ ಗಳಿಸುವುದರೊಂದಿಗೆ ಪಂತ್ ರವೀಂದ್ರ ಜಡೇಜಾ (Ravindra Jadeja) ಅವರೊಂದಿಗೆ 150 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯೊಂದಿಗೆ ಭಾರತ ತಂಡದ ಸ್ಥಿತಿಯಲ್ಲಿ ಅದ್ಭುತ ಸುಧಾರಣೆಯನ್ನು ಮಾಡಿದರು.

ಎರಡನೇ ಸೆಷನ್ ಆರಂಭದಲ್ಲಿ ಭಾರತ ತಂಡ ಕೇವಲ 98 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಪಂತ್ ಎರಡನೆ ಸೆಷನ್ ಮುಗಿಯುವವರೆಗೂ ಪ್ರತಿದಾಳಿ ನಡೆಸಿ ತಂಡವನ್ನು ನಿಭಾಯಿಸಿದರು, ಇದರಲ್ಲಿ ಜಡೇಜಾ ಅವರಿಂದಲೂ ಉತ್ತಮ ಬೆಂಬಲ ಸಿಕ್ಕಿತು. ಟಿ-ಬ್ರೇಕ್ ತನಕ, ಪಂತ್ 51 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ವಿರಾಮದ ನಂತರ ಮೂರನೇ ಸೆಷನ್ ಆರಂಭವಾದಾಗ ಪಂತ್ ತಮ್ಮ ಗೇರ್ ಬದಲಾಯಿಸಿ ರನ್​ಗಳ ವೇಗವನ್ನು ಹೆಚ್ಚಿಸಿ ಕೇವಲ ಒಂದು ಗಂಟೆಯಲ್ಲಿ 50 ರನ್ ಗಳಿಸಿ ಶತಕ ದಾಖಲಿಸಿದರು.

ವೇಗದ ಶತಕ ಸಿಡಿಸಿದ ಭಾರತದ ವಿಕೆಟ್ ಕೀಪರ್

ಇದನ್ನೂ ಓದಿ
Image
IND vs SL: ಮಿಂಚಿದ ಕ್ಯಾಪ್ಟನ್; ಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ!
Image
IND vs ENG: ಭಾರತ ವಿರುದ್ಧದ ಏಕದಿನ, ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ! ಯಾರಿಗೆಲ್ಲ ಚಾನ್ಸ್?
Image
IND vs ENG: ಭಾರತದ ವಿರುದ್ಧ ಇಂಗ್ಲೆಂಡ್‌ನಲ್ಲಿ ಸೂಪರ್ ಸೆಂಚುರಿ ಸಿಡಿಸಿದ ಜೇಮ್ಸ್ ಆಂಡರ್ಸನ್..!

ಪಂತ್, ಟೀಮ್ ಇಂಡಿಯಾದ ಐದು ವಿಕೆಟ್ ಉರುಳಿಸಿದ್ದ ಇಂಗ್ಲೆಂಡ್ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಮ್ಯಾಥ್ಯೂ ಪಾಟ್ಸ್ ಅವರನ್ನು ತೀವ್ರವಾಗಿ ದಂಡಿಸಿದರು. ಎಡಗೈ ಸ್ಪಿನ್ನರ್ ಜಾಕ್ ಲೀಚ್ ವಿರುದ್ಧ ಪಂತ್ ಅದೇ ರೀತಿ ಮಾಡಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆದರು. ಸ್ಟುವರ್ಟ್ ಬ್ರಾಡ್ ಅವರ ಓವರ್‌ನ ಮೊದಲ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ಪಂತ್ ತಮ್ಮ ಐದನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಪಂತ್ ಅವರ ಶತಕವು ಕೇವಲ 89 ಎಸೆತಗಳಲ್ಲಿ ಬಂದಿತು, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ಭಾರತೀಯ ವಿಕೆಟ್‌ಕೀಪರ್‌ನ ವೇಗದ ಶತಕವಾಗಿದೆ.

ಪಂತ್ ದಾಖಲೆಗಳು

ಇದಲ್ಲದೆ, ಪಂತ್ ಈ ಅದ್ಭುತ ಶತಕದೊಂದಿಗೆ ಇತರ ಕೆಲವು ದಾಖಲೆಗಳು ಮತ್ತು ಸಾಧನೆಗಳನ್ನು ಮಾಡಿದರು. ಇದು ಇಂಗ್ಲೆಂಡ್ ವಿರುದ್ಧ ಪಂತ್ ಅವರ ಒಟ್ಟು ಮೂರನೇ ಶತಕವಾಗಿದೆ. ಅವರ ಐದು ಶತಕಗಳಲ್ಲಿ ಮೂರನೆಯದು ಇಂಗ್ಲೆಂಡ್ ವಿರುದ್ಧ. ಅದೇ ಸಮಯದಲ್ಲಿ, ಈ ಐದರಲ್ಲಿ 4 ಶತಕಗಳು ವಿದೇಶದಲ್ಲಿ ಮಾತ್ರ ಬಂದಿವೆ. ಏಷ್ಯಾದ ಹೊರಗಿನ ಭಾರತದ ಟೆಸ್ಟ್ ಇತಿಹಾಸದಲ್ಲಿ, ಪಂತ್ ಹೊರತುಪಡಿಸಿ, ಇತರ ವಿಕೆಟ್ ಕೀಪರ್‌ಗಳು ಕೇವಲ 3 ಶತಕಗಳನ್ನು ಗಳಿಸಿದ್ದಾರೆ, ಆದರೆ ಪಂತ್ ಮಾತ್ರ ನಾಲ್ಕು ಶತಕಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲ, ಇಂಗ್ಲೆಂಡ್‌ನಲ್ಲಿ ಎರಡು ಟೆಸ್ಟ್ ಶತಕಗಳನ್ನು ಬಾರಿಸಿದ ಏಕೈಕ ಭಾರತೀಯ ವಿಕೆಟ್‌ಕೀಪರ್ ಪಂತ್. ಪಂತ್ ಇಂಗ್ಲೆಂಡ್ ಹೊರತಾಗಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲೂ ಶತಕ ಬಾರಿಸಿದ್ದಾರೆ. ಅಲ್ಲದೆ, ಅವರ ಪ್ರಬಲ ಇನ್ನಿಂಗ್ಸ್‌ನಲ್ಲಿ, ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 2000 ರನ್‌ಗಳನ್ನು ಪೂರೈಸಿದರು.

Published On - 10:14 pm, Fri, 1 July 22