OnePlus TV 50 Y1S Pro: ಹೊಸ ಟಿವಿ ಬೇಕಿದ್ದರೆ ಇಂದೇ ನೋಡಿ: ಮೊದಲ ಸೇಲ್​ನಲ್ಲಿ ಒನ್‌ ಪ್ಲಸ್​ನ ಈ ಟಿವಿಗೆ ಭರ್ಜರಿ ರೆಸ್ಪಾನ್ಸ್

ಒನ್​​ ಪ್ಲಸ್ ಕಂಪನಿ ಮೊನ್ನೆಯಷ್ಟೆ ದೇಶದಲ್ಲಿ ಹೊಸ ಒನ್​ಪ್ಲಸ್ ಟಿವಿ 50 ಇಂಚಿನ ವೈ1ಎಸ್ ಪ್ರೊ (OnePlus TV 50 Y1S Pro) ಅನ್ನು ಲಾಂಚ್ ಮಾಡಿತ್ತು. ಈ ಸ್ಮಾರ್ಟ್‌ಟಿವಿಯು ಇಂದು ಅಮೆಜಾನ್‌ ಹಾಗೂ ಒನ್‌ಪ್ಲಸ್‌.ಇನ್‌ ತಾಣಗಳಲ್ಲಿ ಮಾರಾಟ ಪ್ರಾರಂಭಿಸಿದೆ.

OnePlus TV 50 Y1S Pro: ಹೊಸ ಟಿವಿ ಬೇಕಿದ್ದರೆ ಇಂದೇ ನೋಡಿ: ಮೊದಲ ಸೇಲ್​ನಲ್ಲಿ ಒನ್‌ ಪ್ಲಸ್​ನ ಈ ಟಿವಿಗೆ ಭರ್ಜರಿ ರೆಸ್ಪಾನ್ಸ್
OnePlus TV 50 Y1S Pro
Follow us
TV9 Web
| Updated By: Vinay Bhat

Updated on: Jul 07, 2022 | 2:44 PM

ಭಾರತದ ಮಾರುಕಟ್ಟೆಯಲ್ಲಿ ಕೇವಲ ಸ್ಮಾರ್ಟ್​ಫೋನ್​ಗಳಿಂದ ಮಾತ್ರವಲ್ಲದೆ ಸ್ಮಾರ್ಟ್​ ಟಿವಿಗಳಿಂದಲೂ ಯಶಸ್ಸು ಸಾಧಿಸಿರುವ ಪ್ರಸಿದ್ಧ ಒನ್​​ ಪ್ಲಸ್ (OnePlus) ಕಂಪನಿ ಮೊನ್ನೆಯಷ್ಟೆ ದೇಶದಲ್ಲಿ ಹೊಸ ಒನ್​ಪ್ಲಸ್ ಟಿವಿ 50 ಇಂಚಿನ ವೈ1ಎಸ್ ಪ್ರೊ (OnePlus TV 50 Y1S Pro) ಅನ್ನು ಲಾಂಚ್ ಮಾಡಿತ್ತು. ಈ ಸ್ಮಾರ್ಟ್‌ಟಿವಿಯು ಇಂದು (ಜುಲೈ 7) ಇ ಕಾಮರ್ಸ್‌ ತಾಣ ಅಮೆಜಾನ್‌ (Amazon) ಹಾಗೂ ಒನ್‌ಪ್ಲಸ್‌.ಇನ್‌ ತಾಣಗಳಲ್ಲಿ ಮಾರಾಟ ಪ್ರಾರಂಭಿಸಿದೆ. ಹೊಸ ಟಿವಿ ಖರೀದಿಸುವ ಪ್ಲಾನ್​ನಲ್ಲಿ ನೀವಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ. ಮಧ್ಯಮ ಬೆಲೆಯ ಟಿವಿ ಇದು ಆಗಿದ್ದು ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ. ಜೆಲ್-ಲೆಸ್ ವಿನ್ಯಾಸ, 4K ಡಿಸ್‌ಪ್ಲೇ, ಮೀಡಿಯಾ ಟೆಕ್ ಪ್ರೊಸೆಸರ್ ಮತ್ತು ಡಾಲ್ಬಿ ಆಡಿಯೊದಿಂದ ಟ್ಯೂನ್ ಮಾಡಲಾದ 24W ಸ್ಪೀಕರ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳು ಇದರಲ್ಲಿದೆ.

ಒನ್‌ ಪ್ಲಸ್‌ TV 50 Y1S ಪ್ರೊ ಸ್ಮಾರ್ಟ್‌ಟಿವಿ ಬೆಲೆ 32,999 ರೂ. ಆಗಿದ್ದು, ಅಮೆಜಾನ್‌ ಮತ್ತು ಒನ್‌ ಪ್ಲಸ್‌.ಇನ್‌ ಮೂಲಕ ಆನ್‌ಲೈನ್‌ನಲ್ಲಿ ಇಂದಿನಿಂದ ಖರೀದಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಒನ್‌ ಪ್ಲಸ್‌ ಎಕ್ಸ್‌ಪಿರಿಯನ್ಸ್‌ ಸ್ಟೋರ್‌ಗಳು, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮತ್ತು ಇತರ ಆಫ್‌ಲೈನ್ ಪಾಲುದಾರ ಅಂಗಡಿಗಳ ಮೂಲಕ ಲಭ್ಯವಿರುತ್ತದೆ. ಲಾಂಚ್‌ ಆಫರ್‌ನಲ್ಲಿ 3,000ರೂ.ವರೆಗೆ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಒಳಗೊಂಡಿದೆ. ಇದು ಆಕ್ಸಿಸ್ ಬ್ಯಾಂಕ್ ಕಾರ್ಡ್‌ ಬಳಸಿ ಖರೀದಿ ಮಾಡುವವರಿಗೆ ದೊರೆಯಲಿದೆ. ಇದರ ಜೊತೆಗೆ ಒಂಬತ್ತು ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

Cyberdog: ಭಾರತಕ್ಕೆ ಬಂತು ಶವೋಮಿಯ ಸೈಬರ್ ಡಾಗ್ ರೋಬೋಟ್: ಬೆಲೆ ಎಷ್ಟು..?

ಇದನ್ನೂ ಓದಿ
Image
Best Laptops: ಭಾರತದಲ್ಲಿ 40,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಲ್ಯಾಪ್​ಟಾಪ್​ಗಳು ಇಲ್ಲಿದೆ ನೋಡಿ
Image
Instagram, Facebook messenger down: ಸ್ಥಗಿತಗೊಂಡ ಇನ್​ಸ್ಟಾಗ್ರಾಮ್-ಫೇಸ್​ಬುಕ್ ಮೆಸೇಜಿಂಗ್​ ಆ್ಯಪ್
Image
Best 5G Smartphone: ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ 5G ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ
Image
Reliance Jio: ರಿಲಯನ್ಸ್ ಜಿಯೋದಿಂದ ಉಚಿತ ನೆಟ್​ಫ್ಲಿಕ್ಸ್​ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ

ಒನ್‌ ಪ್ಲಸ್‌ ಟಿವಿ 50 Y1S ಪ್ರೊ HDR10+ ಬೆಂಬಲದೊಂದಿಗೆ 50-ಇಂಚಿನ ಸ್ಕ್ರೀನ್ ಅನ್ನು ಹೊಂದಿದೆ. ಇದು ರಿಯಲ್‌ ಟೈಂನಲ್ಲಿ ಇಮೇಜ್‌ ಗುಣಮಟ್ಟವನ್ನು ಹೆಚ್ಚಿಸಲು ಗಾಮಾ ಎಂಜಿನ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ HDR10+, HDR10, ಮತ್ತು HLG ಫಾರ್ಮ್ಯಾಟ್ ಬೆಂಬಲ ಪಡೆದುಕೊಂಡಿದೆ. ಈ ಟಿವಿಯು ಪ್ರೀಮಿಯಂ ಮತ್ತು ಸೊಗಸಾದ ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿದ್ದು, 24Wನ ಸಂಯೋಜಿತ ಆಡಿಯೊ ಔಟ್‌ಪುಟ್ ಅನ್ನು ನೀಡುವ ಎರಡು ಫುಲ್‌-ರೇಂಜ್‌ ಸ್ಪೀಕರ್‌ಗಳನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ಸ್ಮಾರ್ಟ್ ಟಿವಿಯನ್ನು ಹೋಮ್ ಎಂಟರ್ಟೈನ್ಮೆಂಟ್ ಹಬ್ ಆಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ವಿಶೇಷವಾಗಿ ಮಕ್ಕಳಿಗಾಗಿ ಕಿಡ್ಸ್ ಮೋಡ್ ಎಂಬ ಆಯ್ಕೆ ಕೂಡ ಇದೆ. ಜೊತೆಗೆ ಇದು ಒನ್‌ ಪ್ಲಸ್‌ ಕನೆಕ್ಟ್ 2.0 ತಂತ್ರಜ್ಞಾನವನ್ನು ಒಳಗೊಂಡಿದೆ. ಅಲ್ಲದೆ ಒನ್‌ ಪ್ಲಸ್‌ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ನೇರವಾಗಿ ಟಿವಿಗೆ ಕನೆಕ್ಟ್‌ ಮಾಡುವುದಕ್ಕೆ ಅನುಮತಿಸುತ್ತದೆ.

ಒನ್‌ ಪ್ಲಸ್‌ TV 50 Y1S ಪ್ರೊ ಒಂದು ಗೇಮ್ ಮೋಡ್‌ನೊಂದಿಗೆ ಬರುತ್ತದೆ. ಇದು ಬಳಕೆದಾರರಿಗೆ HDMI ಮೂಲಕ ಗೇಮಿಂಗ್ ಕನ್ಸೋಲ್ ಅನ್ನು ಕನೆಕ್ಟ್‌ ಮಾಡುವುದಕ್ಕೆ ಮತ್ತು ಸ್ಪೀಡ್‌ ರೆಸ್ಪಾನ್‌ ಮತ್ತು ಸುಗಮ ಗೇಮಿಂಗ್ ಅನುಭವವನ್ನು ಸಕ್ರಿಯಗೊಳಿಸಲು ಆಟೋ ಲೋ ಲೇಟೆನ್ಸಿ ಮೋಡ್ (ALLM) ಅನ್ನು ಸಕ್ರಿಯಗೊಳಿಸುತ್ತದೆ. ಇದರೊಂದಿಗೆ ಮಕ್ಕಳು ಆರೋಗ್ಯಕರ ವಿಷಯವನ್ನು ಆನಂದಿಸಲು ಅನುವು ಮಾಡಿಕೊಡುವ ಕಿಡ್ಸ್ ಮೋಡ್ ಸಹ ನೀಡಲಾಗಿದೆ.  ಅಲ್ಲದೆ ಅಂತರ್ನಿರ್ಮಿತ ಗೂಗಲ್ ಅಸಿಸ್ಟೆಂಡ್, Google Chromecast ಬೆಂಬಲ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಪೂರ್ವ-ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ.

Asus ROG Phone 6: ನಂಬರ್ ಒನ್ ಪ್ರೊಸೆಸರ್, 6000mAh ಬ್ಯಾಟರಿ, 50MP ಕ್ಯಾಮೆರಾ: ಏಸಸ್ ರಾಗ್ ಫೋನ್ 6 ಸರಣಿ ಬಿಡುಗಡೆ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್