Best Laptops: ಭಾರತದಲ್ಲಿ 40,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಲ್ಯಾಪ್ಟಾಪ್ಗಳು ಇಲ್ಲಿದೆ ನೋಡಿ
ಕೆಲ ಲ್ಯಾಪ್ಟಾಪುಗಳಲ್ಲಿ ನಿಮಗೆ ಬೇಕಾದ ಎಲ್ಲ ಫೀಚರುಗಳು ಇರಲ್ಲ. ಹಾಗೆಯೇ ಎಲ್ಲವೂ ಇದ್ದರೆ ಬೆಲೆ ಸಿಕ್ಕಾಪಟ್ಟೆ ಜಾಸ್ತಿ ಇರುತ್ತದೆ. ಇಂಥ ಸಂದರ್ಭದಲ್ಲಿ ನೀವು 40,000 ರೂ. ಒಳಗೆ ಸಿಗುತ್ತಿರುವ ಈ ಒಳ್ಳೆಯ ಲ್ಯಾಪ್ಟಾಪ್ಗಳತ್ತ ಖಂಡಿತವಾಗಿಯೂ ಗಮನಹರಿಸಬಹುದು.
ಲ್ಯಾಪ್ಟಾಪ್ (Laptop) ಖರೀದಿಸುವುದಕ್ಕೆ ಮೊದಲೆಲ್ಲ ಬಳಕೆದಾರರಿಗೆ ಬೆಲೆಯೇ ಒಂದು ದೊಡ್ಡ ವಿಚಾರವಾಗಿರುತ್ತಿತ್ತು. ಆದರೆ ಕಾಲಕ್ರಮೇಣ ಟ್ರೆಂಡ್ (trend) ಬದಲಾಗುತ್ತಾ ಬಂದಿದ್ದು ಈಗಂತು ಅತ್ಯಂತ ಕಡಿಮೆ ಬೆಲೆಯಲ್ಲಿ ಲ್ಯಾಪ್ಟಾಪ್ಗಳನ್ನು ಖರೀದಿಸಬಹುದು. ಅಲ್ಲದೆ ಕೊರೊನಾ (Corona) ಕಾರಣದಿಂದ ಹೆಚ್ಚಿನವರು ಮನೆಯಿಂದ ಕೆಲಸ ಮಾಡುತ್ತಿರುವುದರಿಂದ ಲ್ಯಾಪ್ಟಾಪ್ ತಯಾರಿಕೆ ಮಾಡುವ ಕಂಪನಿಗಳು ಕೂಡ ಜನರಿಗೆ ಕೈಗೆಟಕುವ ಬೆಲೆಗಳಲ್ಲಿ ತಮ್ಮ ಬ್ರಾಂಡೆಡ್ ಲ್ಯಾಪ್ಟಾಪ್ಗಳನ್ನು ಮಾರಾಟ ಮಾಡುತ್ತಿವೆ. ಆದರೆ, ಕೆಲ ಲ್ಯಾಪ್ಟಾಪುಗಳಲ್ಲಿ ನಿಮಗೆ ಬೇಕಾದ ಎಲ್ಲ ಫೀಚರುಗಳು ಇರಲ್ಲ. ಹಾಗೆಯೇ ಎಲ್ಲವೂ ಇದ್ದರೆ ಬೆಲೆ ಸಿಕ್ಕಾಪಟ್ಟೆ ಜಾಸ್ತಿ ಇರುವುದರಿಂದ ಕಕ್ಕಾಬಿಕ್ಕಿಯಾಗುವಂತಾಗುತ್ತದೆ. ಇಂಥ ಸಂದರ್ಭದಲ್ಲಿ ನೀವು 40,000 ರೂ. ಒಳಗೆ ಸಿಗುತ್ತಿರುವ ಈ ಒಳ್ಳೆಯ ಲ್ಯಾಪ್ಟಾಪ್ಗಳತ್ತ ಖಂಡಿತವಾಗಿಯೂ ಗಮನಹರಿಸಬಹುದು.
ಏಸಸ್ ವಿವೊಬುಕ್ 14 ಲ್ಯಾಪ್ಟಾಪ್ ನಿಮ್ಮ ಎಲ್ಲಾ ದೈನಂದಿನ ಕೆಲಸದ ಅಗತ್ಯಗಳನ್ನು ಪೂರೈಸಬಲ್ಲದು. ಇದು 35.56 ಸೆಂಮೀ ಎಲ್ಇಡಿ – ಬ್ಯಾಕ್ಲಿಟ್ ಎಲ್ಸಿಡಿ ಹೊಂದಿದೆ. ಇಂಟೆಲ್ ಪೆಂಟಿಯಮ್ ಸಿಲ್ವರ್ N5030 ಪ್ರೊಸೆಸರ್ ಮತ್ತು 4GB RAM ಮತ್ತು 256GB ಸ್ಟೋರೇಜ್ ಹೊಂದಿದೆ. ತುಂಬಾ ತೆಳುವಾದ ಮತ್ತು ಕಡಿಮೆ ತೂಕದ ಲ್ಯಾಪ್ಟಾಪ್ ಇದಾಗಿದೆ. ಇದರಲ್ಲಿ, ನಿಮಗೆ ಪ್ರಿ ಲೋಡೆಡ್ ಆಗಿರುವ, ಲೈಫ್ ಟೈಮ್ ವ್ಯಾಲಿಡಿಟಿ ಹೊಂದಿರುವ ವಿಂಡೋಸ್ 10 ಹೋಮ್, ಎಂಎಸ್ ಆಫೀಸ್ ಹೋಮ್ ಸಾಫ್ಟ್ವೇರ್ಗಳು ಸಿಗುತ್ತವೆ. ಇದರ ಬೆಲೆ 31,990 ರೂ. ಆಗಿದೆ.
Instagram, Facebook messenger down: ಸ್ಥಗಿತಗೊಂಡ ಇನ್ಸ್ಟಾಗ್ರಾಮ್-ಫೇಸ್ಬುಕ್ ಮೆಸೇಜಿಂಗ್ ಆ್ಯಪ್
ಲೆನೋವಾ ಐಡಿಯಾಪ್ಯಾಡ್ C340 (81N60042IN) ಲ್ಯಾಪ್ಟಾಪ್ ನಿಮಗೆ 39,990 ರೂಪಾಯಿ ಬೆಲೆಗೆ ಸಿಗುತ್ತದೆ. ವಿಶೇಷ ಎಂದರೆ ಇದು ಟಚ್ ಸ್ಕ್ರೀನ್ ಲ್ಯಾಪ್ಟಾಪ್ ಆಗಿದೆ. ಇದರಲ್ಲಿ AMD Ryzen 3 3200U CPU ಜೊತೆಗೆ 4GB RAM ಮತ್ತು 256GB SSD ಇರುತ್ತದೆ. ಇದು 14-ಇಂಚಿನ IPS LCD ಟಚ್ ಸ್ಕ್ರೀನ್ ಜೊತೆಗೆ FHD ರೆಸಲ್ಯೂಷನ್ ಇರುತ್ತದೆ. ಹಾಗಾಗಿ ಪೋರ್ಟೇಬಲ್ ಮತ್ತು ಕೈಗೆಟುಕುವ ಬೆಲೆಯ ಟಚ್ ಸ್ಕ್ರೀನ್ ವ್ಯವಸ್ಥೆ ಲ್ಯಾಪ್ ಟಾಪ್ ನಲ್ಲಿ ಇರುತ್ತದೆ.
ಈ ಹೆಚ್ಪಿ ಕ್ರೋಮ್ ಬುಕ್ ಲ್ಯಾಪ್ಟಾಪ್ ಟಚ್ ಸ್ಕ್ರೀನ್ ಹೊಂದಿರುವ ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ ಆಗಿದೆ. ಇದರಲ್ಲಿ ವಾಯ್ಸ್ ಎನೆಬಲ್ಡ್ ಗೂಗಲ್ ಅಸಿಸ್ಟೆಂಟ್ ಸಹ ಇರುವುದರಿಂದ ನೀವು ನಿಮ್ಮ ಕೈಗಳಿಂದ ಕಂಪ್ಯೂಟರ್ ಟಚ್ ಮಾಡದೆಯೇ ಯಾವುದೇ ಕಮಾಂಡ್ ನೀಡಬಹುದು. ಇದರಲ್ಲಿ, ರಿಮೈಂಡರ್ಗಳನ್ನು ಸೆಟ್ ಮಾಡಬಹುದು ಹಾಗೂ ನಿಮ್ಮ ಸ್ಮಾರ್ಟ್ ಹೋಂ ವ್ಯವಸ್ಥೆಯನ್ನು ಕೂಡ ನೀವಿದರ ಮೂಲಕ ನಿಯಂತ್ರಿಸಬಹುದು. 40 ಸಾವಿರ ರೂಪಾಯಿ ಬಜೆಟ್ ಒಳಗಡೆ ಸಿಗುತ್ತಿರುವ ಈ ಲ್ಯಾಪ್ಟಾಪ್ ನಲ್ಲಿ 14 ಇಂಚಿನ ಸ್ಕ್ರೀನ್, 4GB RAM ಮತ್ತು 64GB SSD ಸ್ಟೋರೇಜ್ ಇದೆ. ನೀವು ವರ್ಕ್ ಫ್ರಂ ಹೋಂ ಮಾಡುತ್ತಿದ್ದರೆ ಈ ಲ್ಯಾಪ್ಟಾಪ್ ನಿಮ್ಮ ಕೆಲಸವನ್ನು ಸಾಕಷ್ಟು ಹಗುರಗೊಳಿಸುತ್ತದೆ.
ಮೈಕ್ರೋ ಸಾಫ್ಟ್ ಸರ್ಫೇಸ್ ಗೋ (MHN-00015) ಲ್ಯಾಪ್ಟಾಪ್ ಇಂಟೆಲ್ ಪ್ರೀಮಿಯಂ ಗೋಲ್ಡ್ ಪ್ರೊಸೆಸರ್ ಜೊತೆಗೆ 4GB RAM ಮತ್ತು 64GB eMMC ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಈ ಮಾಡೆಲ್ ಕಾಂಪ್ಯಾಕ್ಟ್ 10-ಇಂಚಿನ ಟಚ್ ಸ್ಕ್ರೀನ್ ಹೊಂದಿದೆ ಮತ್ತು ಇದರ ಬೆಲೆ 29,990 ರೂಪಾಯಿ. ಇದನ್ನು ಸ್ಟ್ಯಾಂಡ್ ಅಲೋನ್ ಟ್ಯಾಬ್ಲೆಟ್ ನಂತೆ ಇದನ್ನು ಬಳಕೆ ಮಾಡಬಹುದು ಅಥವಾ ಎಕ್ಸ್ಟರ್ನಲ್ ಕೀಬೋರ್ಡ್ ಫೋಲಿಯೋವನ್ನು ಈ ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು.
ಡೆಲ್ 15 (2021) ಲ್ಯಾಪ್ಟಾಪ್ನಲ್ಲಿ ನಿಮಗೆ 8GB RAM ಮತ್ತು 256GB ಸ್ಟೋರೇಜ್ ಸಾಮರ್ಥ್ಯ ಸಿಗುತ್ತಿದೆ. ಈ ಫುಲ್ ಎಚ್ಡಿ ಲ್ಯಾಪ್ ಟಾಪ್ 11ನೇ ಜನರೇಶನ್ ಇಂಟೆಲ್ ಕೋರ್ i3-1115G4 ಪ್ರೊಸೆಸರ್ ಹೊಂದಿರುವುದರಿಂದ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. 15.6-ಇಂಚಿನ ಸ್ಕ್ರೀನ್ ಆಂಟಿ-ಗ್ಲೇರ್ ಮತ್ತು UHD ಗ್ರಾಫಿಕ್ಸ್ ಫೀಚರ್ಗಳನ್ನು ಒಳಗೊಂಡಿದೆ. ಇದರ ಬೆಲೆ 40,690 ರೂ. ಆಗಿದೆ.
Best 5G Smartphone: ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ 5G ಸ್ಮಾರ್ಟ್ಫೋನ್ಗಳು ಇಲ್ಲಿದೆ ನೋಡಿ