AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix Note 12 5G: ಭಾರತದಲ್ಲಿ 108MP ಕ್ಯಾಮೆರಾದ ಹೊಸ ಫೋನ್ ಬಿಡುಗಡೆ: ಬೆಲೆ ಕೇವಲ 17,999 ರೂ.

Infinix Note 12 Pro 5G: ಇದೀಗ ಇನ್ಫಿನಿಕ್ಸ್‌ ನೋಟ್‌ 12 ಸರಣಿಯನ್ನು ಹೊಸ 5G ಅವತಾರದಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಬರೋಬ್ಬರಿ 108 ಮೆಗಾಫಿಕ್ಸೆಲ್​ನ ಆಕರ್ಷಕ ಕ್ಯಾಮೆರಾ (108MP Camera), ಡಿಸ್‌ಪ್ಲೇ, ಭರ್ಜರಿ ಬ್ಯಾಟರಿ ಹಾಗೂ ಪ್ರೊಸೆಸರ್‌ ಒಳಗೊಂಡ ಈ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಗೆ ಲಭ್ಯವಿರುವುದು ವಿಶೇಷ.

Infinix Note 12 5G: ಭಾರತದಲ್ಲಿ 108MP ಕ್ಯಾಮೆರಾದ ಹೊಸ ಫೋನ್ ಬಿಡುಗಡೆ: ಬೆಲೆ ಕೇವಲ 17,999 ರೂ.
Infinix Note 12 5G series
TV9 Web
| Edited By: |

Updated on: Jul 09, 2022 | 11:54 AM

Share

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಇನ್ಫಿನಿಕ್ಸ್‌ (Infinix) ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಹೆಸರುವಾಸಿ. ಇದಕ್ಕಾಗಿಯೆ ಮಾರುಕಟ್ಟೆಯಲ್ಲಿ ಈ ಕಂಪನಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗಷ್ಟೆ ಇನ್ಫಿನಿಕ್ಸ್‌ ಮೊಬೈಲ್ ಕಂಪನಿ ಭಾರತದಲ್ಲಿ ಇನ್ಫಿನಿಕ್ಸ್‌ ನೋಟ್‌ 12 ಸರಣಿ (Infinix Note 12 series) ಅನಾವರಣಮಾಡಿತ್ತು. ಇದರಲ್ಲಿ ಇನ್ಫಿನಿಕ್ಸ್‌ ನೋಟ್‌ 12 ಮತ್ತು ಇನ್ಫಿನಿಕ್ಸ್‌ ನೋಟ್‌ 12 ಪ್ರೊ ಸ್ಮಾರ್ಟ್‌ಫೋನ್​ಗಳಿದ್ದವು. ಇದೀಗ ಇನ್ಫಿನಿಕ್ಸ್‌ ನೋಟ್‌ 12 ಸರಣಿಯನ್ನು ಹೊಸ 5G ಅವತಾರದಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಬರೋಬ್ಬರಿ 108 ಮೆಗಾಫಿಕ್ಸೆಲ್​ನ ಆಕರ್ಷಕ ಕ್ಯಾಮೆರಾ (108MP Camera), ಡಿಸ್‌ಪ್ಲೇ, ಭರ್ಜರಿ ಬ್ಯಾಟರಿ ಹಾಗೂ ಪ್ರೊಸೆಸರ್‌ ಒಳಗೊಂಡ ಈ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಗೆ ಲಭ್ಯವಿರುವುದು ವಿಶೇಷ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್​ಗಳಿವೆ ಎಂಬುದನ್ನು ನೋಡೋಣ.

ಇನ್ಫಿನಿಕ್ಸ್‌ ನೋಟ್‌ 12 5G ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಬಲದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 33W ಟೈಪ್-ಸಿ ಫಾಸ್ಟ್ ಚಾರ್ಜಿಂಗ್‌ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿ ಕೂಡ ಇದೆ.

Realme C35: ಭಾರತದಲ್ಲಿ ರಿಯಲ್ ಮಿ C35 6GB, 128GB ಸ್ಟೋರೆಜ್ ಬಿಡುಗಡೆ: ಇದು ಬಜೆಟ್ ಬೆಲೆಯ ಬೆಸ್ಟ್​ ಫೋನ್

ಇದನ್ನೂ ಓದಿ
Image
ಹೊಸ ಟಿವಿ ಬೇಕಿದ್ದರೆ ಇಂದೇ ನೋಡಿ: ಮೊದಲ ಸೇಲ್​ನಲ್ಲಿ ಒನ್‌ ಪ್ಲಸ್​ನ ಈ ಟಿವಿ
Image
Cyberdog: ಭಾರತಕ್ಕೆ ಬಂತು ಶವೋಮಿಯ ಸೈಬರ್ ಡಾಗ್ ರೋಬೋಟ್: ಬೆಲೆ ಎಷ್ಟು..?
Image
ನಂಬರ್ ಒನ್ ಪ್ರೊಸೆಸರ್, 6000mAh ಬ್ಯಾಟರಿ, 50MP ಕ್ಯಾಮೆರಾ
Image
ಭಾರತದಲ್ಲಿ 40,000 ರೂ. ಒಳಗೆ ಲಭ್ಯವಿರುವ ಬೆಸ್ಟ್ ಲ್ಯಾಪ್​ಟಾಪ್​ಗಳು

ಇತ್ತ ಇನ್ಫಿನಿಕ್ಸ್‌ 12 ಪ್ರೊ 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. 6nm ಮೀಡಿಯಾ ಟೆಕ್ ಡೈಮೆನ್ಸಿಟಿ 810 5G ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದು Quad LED ಫ್ಲ್ಯಾಷ್ ಒಳಗೊಂಡಿದೆ. ಇದಲ್ಲದೆ 16ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ ಡ್ಯುಯಲ್ LED ಫ್ಲ್ಯಾಷ್‌ ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ಟೈಪ್-ಸಿ ಫಾಸ್ಟ್ ಚಾರ್ಜರ್‌ ಬೆಂಬಲಿಸಲಿದೆ. ಒಂದು ಗಂಟೆ 30 ನಿಮಿಷಗಳ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳುತ್ತದೆ.

ಭಾರತದಲ್ಲಿ ಇನ್ಫಿನಿಕ್ಸ್‌ ನೋಟ್‌ 12 5G ಸ್ಮಾರ್ಟ್‌ಫೋನ್‌ ಬೆಲೆ 14,999 ರೂ. ಆಗಿದೆ. ಇನ್ಫಿನಿಕ್ಸ್‌ ನೋಟ್‌ 12 ಪ್ರೊ 5G ಸ್ಮಾರ್ಟ್‌ಫೋನ್‌ 17,999 ರೂ. ಬೆಲೆಯನ್ನು ಹೊಂದಿದೆ. ಈ ಎರಡೂ ಫೋನ್‌ಗಳು ಭಾರತದಲ್ಲಿ ಜುಲೈ 14 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಾಗಲಿವೆ. ಪ್ರಿ ಬುಕ್ಕಿಂಗ್‌ ಮಾಡಿದರೆ 1,000 ರೂಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಆಕ್ಸಿಸ್‌ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿ ಮಾಡುವ ಗ್ರಾಹಕರು 1,500 ರೂ. ಆಫರ್‌ ಪಡದುಕೊಳ್ಳಬಹುದಾಗಿದೆ.

Amazon Prime Day Sale 2022: ಅಮೆಜಾನ್​ನಿಂದ ಬಹುನಿರೀಕ್ಷಿತ ಪ್ರೈಮ್ ಡೇ ಸೇಲ್ ಘೋಷಣೆ: ಯಾವಾಗ?, ಏನು ಆಫರ್?

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ಗವಿಸಿದ್ದೇಶ್ವರ ಶ್ರೀ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಚೆನ್ನೈ ಮೆಟ್ರೋದಲ್ಲಿ ಪ್ರಧಾನಿ ಮೋದಿ–ಸಿಎಂ ವಿಜಯ್ ಪ್ರಯಾಣ
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
ಮಾಗಡಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಸ ಕಂಡು ಗರಂ ಆದ್ರು ಸಚಿವ ಬಾಲಕೃಷ್ಣ!
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
Live: ಮೈಸೂರು ದಸರಾ ಉದ್ಘಾಟನೆ ನೇರಪ್ರಸಾರ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು ದಸರಾಗೆ ಕ್ಷಣಗಣನೆ: ಗವಿಸಿದ್ದೇಶ್ವರ ಶ್ರೀಗಳಿಂದ ನಾಡಹಬ್ಬಕ್ಕೆ ಚಾಲನೆ