Realme C35: ಭಾರತದಲ್ಲಿ ರಿಯಲ್ ಮಿ C35 6GB, 128GB ಸ್ಟೋರೆಜ್ ಬಿಡುಗಡೆ: ಇದು ಬಜೆಟ್ ಬೆಲೆಯ ಬೆಸ್ಟ್ ಫೋನ್
ರಿಯಲ್ ಮಿ ಕಂಪನಿ ಭಾರತದಲ್ಲಿ ಕಳೆದ ಮಾರ್ಚ್ನಲ್ಲಿ ತನ್ನ ಬಹುನಿರೀಕ್ಷಿತ ಬಜೆಟ್ ಸ್ಮಾರ್ಟ್‌ಫೋನ್ ರಿಯಲ್ ಮಿ ಸಿ35 (Realme C35) ಅನ್ನು ಬಿಡುಗಡೆ ಮಾಡಿತ್ತು. ಇದೀಗ ನೂತನ ಸ್ಟೋರೆಜ್ ಆಯ್ಕೆಯೊಂದಿಗೆ ಮತ್ತೆ ರಿಲೀಸ್ ಆಗಿದೆ.
ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ವಿಭಿನ್ನ ಸ್ಮಾರ್ಟ್ಫೋನ್ಗಳನ್ನು (Smartphone) ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ರಿಯಲ್ ಮಿ ಕಂಪನಿ ಭಾರತದಲ್ಲಿ ಕಳೆದ ಮಾರ್ಚ್ನಲ್ಲಿ ತನ್ನ ಬಹುನಿರೀಕ್ಷಿತ ಬಜೆಟ್ ಸ್ಮಾರ್ಟ್‌ಫೋನ್ ರಿಯಲ್ ಮಿ ಸಿ35 (Realme C35) ಅನ್ನು ಬಿಡುಗಡೆ ಮಾಡಿತ್ತು. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಸೂಪರ್ ಪವರ್ ಸೇವಿಂಗ್ ಮೋಡ್, 5,000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಕೂಡಿರುವ ಈ ಫೋನ್ ಇದೀಗ ನೂತನ ಸ್ಟೋರೆಜ್ ಆಯ್ಕೆಯೊಂದಿಗೆ ಮತ್ತೆ ರಿಲೀಸ್ ಆಗಿದೆ. 4GB RAM, 64GB, 128GB ಸ್ಟೋರೆಜ್ನೊಂದಿಗೆ ಅನಾವರಣಗೊಂಡಿದ್ದ ರಿಯಲ್ ಮಿ C35 ಇದೀಗ 6GB RAM+ 128GB ಸ್ಟೋರೆಜ್ ಆಯ್ಕೆಯಲ್ಲಿ ಸಿಗುತ್ತಿದೆ.
ಈ ಮೂಲಕ ರಿಯಲ್ ಮಿ C35 ಭಾರತದಲ್ಲಿ ಒಟ್ಟು ಮೂರು ಮಾದರಿಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ ಕೇವಲ 11,999 ರೂ. ಆಗಿದೆ. 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 12,999 ರೂ. ನಿಗದಿ ಮಾಡಲಾಗಿದೆ. ಹಾಗೆಯೆ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ 15,999 ರೂ. ಇದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಸೇಲ್ ಕಾಣುತ್ತಿದೆ. ಜೊತೆಗೆ ರಿಯಲ್ ಮಿ.ಕಾಮ್ ಮತ್ತು ರಿಟೇಲ್ ಸ್ಟೋರ್ಗಳಲ್ಲೂ ಖರೀದಿಸಬಹುದು.
Amazon Prime Day Sale 2022: ಅಮೆಜಾನ್ನಿಂದ ಬಹುನಿರೀಕ್ಷಿತ ಪ್ರೈಮ್ ಡೇ ಸೇಲ್ ಘೋಷಣೆ: ಯಾವಾಗ?, ಏನು ಆಫರ್?
ಏನು ವಿಶೇಷತೆ?:
ಇದರ ವಿಶೇಷತೆ ಬಗ್ಗೆ ಗಮನಿಸುವುದಾದರೆ, ರಿಯಲ್ ಮಿ C35 ಸ್ಮಾರ್ಟ್‌ಫೋನ್ 1,080×2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ 90.7% ಸ್ಕ್ರೀನ್-ಟು-ಬಾಡಿ ಅನುಪಾತದಿಂದ ಕೂಡಿದೆ. ಆಕ್ಟಾ-ಕೋರ್ ಯೂನಿಸೋಕ್ T616 SoC ಪ್ರೊಸೆಸರ್ ಬಲವನ್ನು ಪಡೆಉಕೊಂಡಿದ್ದು ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI R ಆವೃತ್ತಿಯಲ್ಲಿ ರನ್ ಆಗಲಿದೆ. ಹಾಗೆಯೇ 4GB RAM ಮತ್ತು 64GB, 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿರಲಿದೆ.
ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಅಪರ್ಚರ್ 5P ಲೆನ್ಸ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಮ್ಯಾಕ್ರೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ.
ರಿಯಲ್ ಮಿ C35 ಸ್ಮಾರ್ಟ್‌ಫೋನ್ ದೀರ್ಘ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಅನ್ನು ಕೂಡ ಹೊಂದಿರುವುದು ವಿಶಶೇಷ. ಜೊತೆಗೆ ಈ ಸ್ಮಾರ್ಟ್‌ಫೋನ್ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಲಾದ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ.
Infinix Note 12 5G: ಭಾರತದಲ್ಲಿ ಇನ್ಫಿನಿಕ್ಸ್ನಿಂದ ನೋಟ್ 12 ಸರಣಿಯ 5G ಆವೃತ್ತಿ ಇಂದು ಬಿಡುಗಡೆ