Realme C35: ಬಜೆಟ್ ಫೋನ್ ಎಂದರೆ ಹೀಗಿರಬೇಕು: ಭಾರತದಲ್ಲಿ ಆಕರ್ಷಕ ಫೀಚರ್ಸ್ನ ರಿಯಲ್ ಮಿ C35 ಬಿಡುಗಡೆ
ಹೊಸ ರಿಯಲ್ ಮಿ ಸಿ35 (Realme C35) ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಇಂದು ಈ ಫೋನ್ ಭಾರತದಲ್ಲಿ ರಿಲೀಸ್ ಆಗಿದ್ದು ಬಜೆಟ್ ಬೆಲೆಗೆ ಲಭ್ಯವಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಸೂಪರ್ ಪವರ್ ಸೇವಿಂಗ್ ಮೋಡ್ ಅನ್ನು ಕೂಡ ಹೊಂದಿದ್ದು, 5,000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಕೂಡಿದೆ.
ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ವಿಭಿನ್ನ ಸ್ಮಾರ್ಟ್ಫೋನ್ಗಳನ್ನು (Smartphone) ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ರಿಯಲ್ ಮಿ ಕಂಪನಿ ಭಾರತದಲ್ಲಿ ಬಹುನಿರೀಕ್ಷಿತ ರಿಯಲ್ ಮಿ 9 ಸರಣಿಯ (Realme 9 Series) ರಿಯಲ್ ಮಿ 9 4G, ರಿಯಲ್ ಮಿ 9 5G ಮತ್ತು ರಿಯಲ್ ಮಿ 9SE ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಿ ನಡೆಸಿದೆ. ಈ ಫೋನ್ ದೇಶದಲ್ಲಿ ಮಾರ್ಚ್ 10 ರಂದು ಅನಾವರಣಗೊಳ್ಳಲಿದೆ. ಹೀಗಿರುವಾಗ ಇದೀಗ ದಿಢೀರ್ ಆಗಿ ಹೊಸ ರಿಯಲ್ ಮಿ ಸಿ35 (Realme C35) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇಂದು ಈ ಫೋನ್ ಭಾರತದಲ್ಲಿ ರಿಲೀಸ್ ಆಗಿದ್ದು ಬಜೆಟ್ ಬೆಲೆಗೆ ಲಭ್ಯವಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, ಸೂಪರ್ ಪವರ್ ಸೇವಿಂಗ್ ಮೋಡ್ ಅನ್ನು ಕೂಡ ಹೊಂದಿದ್ದು, 5,000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್ಗಳಿಂದ ಕೂಡಿದೆ.
ಬೆಲೆ ಎಷ್ಟು?:
ರಿಯಲ್ ಮಿ C35 ಭಾರತದಲ್ಲಿ ಎರಡು ಮಾದರಿಯಲ್ಲಿ ಖರೀದಿಗೆ ಸಿಗಲಿದೆ. ಇದರ 4GB RAM ಮತ್ತು 64GB ಸ್ಟೋರೇಜ್ ರೂಪಾಂತರದ ಬೆಲೆ ಕೇವಲ 11,999 ರೂ. ಆಗಿದೆ. 4GB RAM + 128GB ಸ್ಟೋರೇಜ್ ರೂಪಾಂತರಕ್ಕೆ 12,999 ರೂ. ನಿಗದಿ ಮಾಡಲಾಗಿದೆ. ಮಾರ್ಚ್ 12 ಮಧ್ಯಾಹ್ನ 12 ಗಂಟೆಯಿಂದ ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಸೇಲ್ ಕಾಣಲಿದೆ. ಜೊತೆಗೆ ರಿಯಲ್ ಮಿ.ಕಾಮ್ ಮತ್ತು ರಿಟೇಲ್ ಸ್ಟೋರ್ಗಳಲ್ಲೂ ಖರೀದಿಸಬಹುದು.
ಏನು ವಿಶೇಷತೆ?:
ಇದರ ವಿಶೇಷತೆ ಬಗ್ಗೆ ಗಮನಿಸುವುದಾದರೆ, ರಿಯಲ್ ಮಿ C35 ಸ್ಮಾರ್ಟ್‌ಫೋನ್ 1,080×2,408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ 90.7% ಸ್ಕ್ರೀನ್-ಟು-ಬಾಡಿ ಅನುಪಾತದಿಂದ ಕೂಡಿದೆ. ಆಕ್ಟಾ-ಕೋರ್ ಯೂನಿಸೋಕ್ T616 SoC ಪ್ರೊಸೆಸರ್ ಬಲವನ್ನು ಪಡೆಉಕೊಂಡಿದ್ದು ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI R ಆವೃತ್ತಿಯಲ್ಲಿ ರನ್ ಆಗಲಿದೆ. ಹಾಗೆಯೇ 4GB RAM ಮತ್ತು 64GB, 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿರಲಿದೆ.
ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಅಪರ್ಚರ್ 5P ಲೆನ್ಸ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಮ್ಯಾಕ್ರೋ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ.
ರಿಯಲ್ ಮಿ C35 ಸ್ಮಾರ್ಟ್‌ಫೋನ್ ದೀರ್ಘ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಇದು ಸೂಪರ್ ಪವರ್ ಸೇವಿಂಗ್ ಮೋಡ್ ಅನ್ನು ಕೂಡ ಹೊಂದಿರುವುದು ವಿಶಶೇಷ. ಜೊತೆಗೆ ಈ ಸ್ಮಾರ್ಟ್‌ಫೋನ್ ಪವರ್ ಬಟನ್‌ನಲ್ಲಿ ಎಂಬೆಡ್ ಮಾಡಲಾದ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ.
Poco M4 Pro: ಹೊಸ ಫೋನ್ ಖರೀದಿಸುವವರು ಇಲ್ಲಿ ನೋಡಿ: ಕೇವಲ 13,999 ರೂ. ಗೆ ಸೇಲ್ ಕಾಣುತ್ತಿದೆ ಪೋಕೋ M4 ಪ್ರೊ
Wi-Fi Tricks: ನೀವು ಬಳಸುತ್ತಿರುವ ವೈ-ಫೈ ಸೂಪರ್ ಸ್ಪೀಡ್ ಆಗಬೇಕಾ?: ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ
Published On - 2:58 pm, Mon, 7 March 22