ಭಾರತೀಯರು ಎಷ್ಟು ತಿಂಗಳಿಗೊಮ್ಮೆ ಮೊಬೈಲ್ ಬದಲಾಯಿಸುತ್ತಾರೆ ಗೊತ್ತೇ?: ಶಾಕಿಂಗ್ ವಿಚಾರ ಬಹಿರಂಗ

ಭಾರತೀಯರು ಹೊಸ ಸ್ಮಾರ್ಟ್​​ಫೋನನ್ನು ಎಷ್ಟು ಸಮಯಕ್ಕೊಮ್ಮೆ ಬದಲಾವಣೆ ಮಾಡುತ್ತಾರೆ ಎಂಬ ಕುರಿತು ಝೀ5 ಸಂಸ್ಥೆ ಸರ್ವೆ ನಡೆಸಿದೆ. ಅಧ್ಯಯನದಿಂದ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ.

ಭಾರತೀಯರು ಎಷ್ಟು ತಿಂಗಳಿಗೊಮ್ಮೆ ಮೊಬೈಲ್ ಬದಲಾಯಿಸುತ್ತಾರೆ ಗೊತ್ತೇ?: ಶಾಕಿಂಗ್ ವಿಚಾರ ಬಹಿರಂಗ
Smartphone
Follow us
| Updated By: Vinay Bhat

Updated on: Jul 16, 2022 | 3:36 PM

ಜಗತ್ತಿನಲ್ಲಿ ಅತಿ ಹೆಚ್ಚು ಸ್ಮಾರ್ಟ್​​ಫೋನ್​ಗಳು (Smartphones) ಬಿಡುಗಡೆ ಆಗುವ ದೇಶ ಎಂದರೆ ಅದು ಭಾರತ ಎಂದೇ ಹೇಳಬಹುದು. ಭಾರತದಲ್ಲಿ ಮೊಬೈಲ್ (Mobile) ಮಾರುಕಟ್ಟೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಫೋನ್​ಗಳು ಬಿಡುಗಡೆ ಆಗುತ್ತವೆ. ಸದ್ಯ ದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಬ್ರ್ಯಾಂಡ್ ಎಂದರೆ ಅದು ಶವೋಮಿ (Xiaomi), ಸ್ಯಾಮ್​ಸಂಗ್, ರಿಯಲ್ ಮಿ, ಒಪ್ಪೋ, ವಿವೋ, ಒನ್​ಪ್ಲಸ್ ಹಾಗೂ ಕಳೆದ ವಾರವಷ್ಟೆ ಮಾರುಕಟ್ಟೆಗೆ ಲಗ್ಗೆಯಿಟ್ಟ ನಥಿಂಗ್ ಕಂಪನಿ ಕೂಡ ಭರ್ಜರಿ ಸದ್ದು ಮಾಡುತ್ತಿದೆ. ಈ ಎಲ್ಲ ಬ್ರ್ಯಾಂಡ್​ಗಳು ಭಾರತೀಯ ಜನರ ಅನುಕೂಲಕ್ಕೆ ತಕ್ಕಂತೆ ಬೆಲೆಯನ್ನು ನಿಗದಿ ಮಾಡಿ ಅನಾವರಣ ಮಾಡುತ್ತಿದೆ. ಇದರಲ್ಲಿ ಕೆಲವು ಯಶಸ್ಸು ಸಾಧಿಸಿದರೆ ಇನ್ನೂ ಕೆಲ ಮೊಬೈಲ್​ಗಳು ಫ್ಲಾಫ್ ಆಗಿದ್ದೂ ಇದೆ. ಹೀಗಿರುವಾಗ ಅಧ್ಯಯನದಿಂದ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ.

ಭಾರತೀಯರು ಹೊಸ ಸ್ಮಾರ್ಟ್​​ಫೋನನ್ನು ಎಷ್ಟು ಸಮಯಕ್ಕೊಮ್ಮೆ ಬದಲಾವಣೆ ಮಾಡುತ್ತಾರೆ ಎಂಬ ಕುರಿತು ಝೀ5 ಸಂಸ್ಥೆ ಸರ್ವೆ ನಡೆಸಿದೆ. ಇದರ ಪ್ರಕಾರ ಭಾರತದ ಮೆಟ್ರೊ ನಗರಗಳಲ್ಲಿ ವಾಸಿಸುವ ಶೇ. 50 ರಷ್ಟು ಜನರು ಆರು ತಿಂಗಳಿಗೊಮ್ಮೆ ಹೊಸ ಸ್ಮಾರ್ಟ್​​ಫೋನ್ ಖರೀದಿ ಮಾಡುತ್ತಾರಂತೆ. ತಮ್ಮ ಮೊಬೈಲ್ ಕಾರ್ಯನಿರ್ವಹಿಸುವುದು ನಿಧಾನವಾದ ಕೂಡಲೇ ಹೊಸ ಫೋನ್ ಕಡೆ ಇವರು ಮುಖ ಮಾಡುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಜನರು ಇಂದು ಮೊಬೈಲ್ ಅನ್ನು ಆರಿಸುವಲ್ಲಿ ಸಾಕಷ್ಟು ಜಾಗರೂಕರಾಗಿದ್ದಾರೆ. ಅಧ್ಯಯನದಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಜನರು ಇಂದು ಬ್ರ್ಯಾಂಡ್, ಕಾರ್ಯಕ್ಷಮತೆ, ಫೀಚರ್ಸ್​ ಮತ್ತು ತಂತ್ರಜ್ಞಾನವನ್ನು ಗಮನಿಸಿ ಮೊಬೈಲ್ ಅನ್ನು ಆರಿಸಿಕೊಳ್ಳುತ್ತಾರಂತೆ. ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬ್ರ್ಯಾಂಡ್ ನೇಮ್ ಇರುವ ಫೋನನ್ನು ಆಯ್ಕೆ ಮಾಡುತ್ತಾರೆ ಎಂದು ಅಧ್ಯಯನ ಹೇಳಿದೆ.

ಇದನ್ನೂ ಓದಿ
Image
WhatsApp: ಮೆಸೇಜ್ ಡಿಲೀಟ್ ಮಾಡುವ ಆಯ್ಕೆಯಲ್ಲಿ ವಿನೂತನ ಫೀಚರ್: ಬಳಕೆದಾರರು ಫುಲ್ ಖುಷ್
Image
Amazon: ಜುಲೈ 23ಕ್ಕೆ ಅಮೆಜಾನ್ ಪ್ರೈಮ್ ಡೇ ಸೇಲ್: ಟಾಪ್ ಡೀಲ್ಸ್ ಕುರಿತ ಮುಖ್ಯ ಮಾಹಿತಿ ಇಲ್ಲಿದೆ
Image
Reliance Jio: 100GB ಫ್ರೀ ಡೇಟಾ: ರಿಲಯನ್ಸ್​ ಜಿಯೋದಿಂದ ಹಿಂದೆಂದೂ ನೀಡಿರದ ಬಂಪರ್ ಆಫರ್
Image
OnePlus 10R 5G: ನಥಿಂಗ್ ಫೋನ್ ರಿಲೀಸ್ ಬೆನ್ನಲ್ಲೇ ಒನ್​ಪ್ಲಸ್​ 10R 5G ಮೇಲೆ ಬಂಪರ್ ಡಿಸ್ಕೌಂಟ್: ಮಿಸ್ ಮಾಡ್ಬೇಡಿ ಆಫರ್

ಐದರಲ್ಲಿ ಎರಡು ಜನರು 30,000 ರೂ. ಅಥವಾ ಅದಕ್ಕಿಂತ ಅಧಿಕ ದರ ಇರುವ ಸ್ಮಾರ್ಟ್​​ಫೋನ್ ಅನ್ನು ಖರೀದಿ ಮಾಡುತ್ತಾರಂತೆ. ಮುಖ್ಯವಾಗಿ 34 ರಿಂದ 44 ವಯಸ್ಸಿನವರು 30,000 ರೂ. ಫೋನನ್ನು ಹೆಚ್ಚು ಖರೀದಿ ಮಾಡುತ್ತಾರೆ ಎಂದು ತಿಳಿದುಬಂದಿದೆ. ಅಚ್ಚರಿ ಎಂದರೆ ಶೇ. 70 ರಷ್ಟು ನಾನ್ ಮೆಟ್ರೊ ಜನರು ಆನ್​ಲೈನ್ ಮೂಲಕ ಮೊಬೈಲ್ ಅನ್ನು ಖರೀದಿ ಮಾಡಲು ಮುಂದಾಗುತ್ತಾರಂತೆ. ಇಲ್ಲೂ 30,000 ರೂ. ಗಳ ಆಸುಪಾಸಿನ ಮೊಬೈಲ್​ಗೆ ಹೆಚ್ಚು ಬೇಡಿಕೆ ಇದೆ.

ಭಾರತದಲ್ಲಿ 30,000 ರೂ. ಆಸುಪಾಸಿಗೆ ದೊರೆಯುವ ಆಕರ್ಷಕ ಸ್ಮಾರ್ಟ್​​ಫೋನ್ ಎಂದರೆ ಪೋಕೋ F4. ಇದು 5ಜಿ ಆವೃತ್ತಿಯನ್ನು ಕೂಡ ಹೊಂದಿದೆ. ಇದಕ್ಕೆ ಟಕ್ಕರ್ ಕೊಡಲು ಮೂರು ದಿನಗಳ ಹಿಂದೆಯಷ್ಟೆ ನಥಿಂಗ್ ಕಂಪನಿ ತನ್ನ ಮೊಟ್ಟ ಮೊದಲ ಸ್ಮಾರ್ಟ್​​ಫೋನ್ ನಥಿಂಗ್ ಫೋನ್ 1 ಅನ್ನು ಲಾಂಚ್ ಮಾಡಿತ್ತು. ಇದರ ಸೇಲ್ ಇನ್ನೂ ಆರಂಭವಾಗಿಲ್ಲ. ಈ ಫೋನ್ ಕೂಡ ಭಾರತದಲ್ಲಿ ಧೂಳೆಬ್ಬಿಸುವುದು ಖಚಿತ ಎನ್ನಲಾಗುತ್ತಿದೆ.

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ