Home Theater Cost: ಮನೆಯೇ ಚಿತ್ರಮಂದಿರ ಕಾಸಿದ್ದರೆ ಎಲ್ಲ ಸುಂದರ; ಇಲ್ಲಿದೆ ಹೋಮ್ ಥಿಯೇಟರ್​ ಮಾಡಲು ಎಷ್ಟು ಖರ್ಚಾಗುತ್ತದೆ ಎಂಬ ವಿವರ

ಮನೆಯಲ್ಲಿ ಹೋಮ್​ ಥಿಯೇಟರ್ ಮಾಡಿಸಲು ಎಷ್ಟು ಖರ್ಚಾಗುತ್ತದೆ? ಇದಕ್ಕೆ ಬೇಕಾದ ತಾಂತ್ರಿಕ ಅಗತ್ಯಗಳೇನು ಎಂಬಿತ್ಯಾದಿ ಅಂಶಗಳು ಈ ಲೇಖನದಲ್ಲಿವೆ.

Home Theater Cost: ಮನೆಯೇ ಚಿತ್ರಮಂದಿರ ಕಾಸಿದ್ದರೆ ಎಲ್ಲ ಸುಂದರ; ಇಲ್ಲಿದೆ ಹೋಮ್ ಥಿಯೇಟರ್​ ಮಾಡಲು ಎಷ್ಟು ಖರ್ಚಾಗುತ್ತದೆ ಎಂಬ ವಿವರ
ಹೋಮ್ ಥಿಯೇಟರ್​ನ ಆಸನಗಳು
Follow us
Srinivas Mata
| Updated By: Digi Tech Desk

Updated on:Jul 18, 2022 | 2:57 PM

ಕೊರೊನಾದಿಂದ ಜಗತ್ತು ಬಹಳ ಬದಲಾಗಿದೆ. ಅದು ಆರೋಗ್ಯದ ಬಗೆಗಿನ ಕಾಳಜಿಯಿಂದ ಮೊದಲುಗೊಂಡು ಮನರಂಜನೆಯ (Entertainment) ತನಕ ಅನ್ವಯ ಆಗುತ್ತದೆ. ಈಗೆಲ್ಲ ಮನೆಯಲ್ಲೇ ಥಿಯೇಟರ್. ಥೇಟ್ ಚಿತ್ರಮಂದಿರದಂತೆಯೇ ಅನುಭವ ಕೊಡುವ ತೆರೆ, ಸ್ಪೀಕರ್​ಗಳು ಹೀಗೆ ಏನಿಲ್ಲ ಹೇಳಿ. ಇಂದಿನ ಲೇಖನದಲ್ಲಿ ಹೋಮ್ ಥಿಯೇಟರ್, ಅರ್ಥಾತ್ ಮನೆಯ ಚಿತ್ರಮಂದಿರಗಳ ಬಗ್ಗೆ ನಿಮಗೆ ತಿಳಿಸಲಾಗುವುದು. ಅದಕ್ಕಾಗಿಯೇ ನಮಸ್ಯ ಡಿಜಿಟಲ್ ಆಡಿಯೋದ ವಿ. ದೀಪಕ್ ಅವರನ್ನು ಟಿವಿ9 ಕನ್ನಡ ಡಿಜಿಟಲ್​ನಿಂದ ಮಾತನಾಡಿಸಲಾಗಿದೆ. ಅವರು ಕೂಡ ಸಾದ್ಯಂತವಾಗಿ ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ. ಪ್ರಶ್ನೋತ್ತರ ಮಾದರಿಯಲ್ಲಿ ವಿವರಗಳನ್ನು ನಿಮ್ಮೆದುರು ಇಡುವುದು ನಮ್ಮ ಉದ್ದೇಶ. ದಯವಿಟ್ಟು ಒಪ್ಪಿಸಿಕೊಳ್ಳಿ.

ಪ್ರಶ್ನೆ: ಹೋಮ್ ಥಿಯೇಟರ್ ಮಾಡಿಕೊಳ್ಳುವುದಕ್ಕೆ ಹೊಸ ಮನೆಯೇ ಆಗಿರಬೇಕಾ?

ದೀಪಕ್: ಹಾಗೇನಿಲ್ಲ. ಈಗಾಗಲೇ ಕಟ್ಟಿರುವ ಮನೆಯಿದ್ದರೂ ಪರವಾಗಿಲ್ಲ. ಅಲ್ಲಿ ಚಿತ್ರಮಂದಿರದ ರೀತಿಯಲ್ಲೇ ವ್ಯವಸ್ಥೆ ಮಾಡಿಕೊಳ್ಳಬಹುದು.

ಪ್ರಶ್ನೆ: ಎಷ್ಟು ಬಗೆಯ ಹೋಮ್ ಥಿಯೇಟರ್​ಗಳಿವೆ ಹಾಗೂ ಎಷ್ಟು ಖರ್ಚು ಬರುತ್ತದೆ?

ದೀಪಕ್: ಇದರಲ್ಲಿ ಮೂರು ಸೆಗ್ಮೆಂಟ್ ಇದೆ. ಬೇಸಿಕ್, ಮೀಡಿಯಂ ಹಾಗೂ ಲಕ್ಷುರಿ. ಆರಂಭದ್ದು 2ರಿಂದ 5 ಲಕ್ಷ ರೂಪಾಯಿ ಆಗುತ್ತದೆ. ಇದರಲ್ಲಿ ಅಕೌಸ್ಟಿಕ್ ಸಿಸ್ಟಮ್ ಬರುವುದಿಲ್ಲ. ಆ ನಂತರ 10ರಿಂದ 20 ಲಕ್ಷ ರೂಪಾಯಿಯದ್ದು. ಅದರಲ್ಲಿ ಅಕೌಸ್ಟಿಕ್ ಸಿಸ್ಟಮ್ ಇದೆ. 20 ಲಕ್ಷ ರೂಪಾಯಿ ಮೇಲ್ಪಟ್ಟದ್ದು ಲಕ್ಷುರಿ. ಆದರೆ ಇದರಲ್ಲಿ ಗರಿಷ್ಠ ಎಂಬ ಮಿತಿಯೇ ಇಲ್ಲ. ಖರೀದಿಸುವ ಗ್ರಾಹಕರ ಆಸಕ್ತಿ ಮೇಲೆ ಅವಲಂಬಿಸುತ್ತದೆ. ಕೋಟಿಗಟ್ಟಲೆ ಖರ್ಚು ಮಾಡಬಹುದು.

ಪ್ರಶ್ನೆ: ಯಾವ ಬ್ರ್ಯಾಂಡ್​ನದು ಖರೀದಿ ಮಾಡಬಹುದು?

ದೀಪಕ್: ಪ್ರೊಜೆಕ್ಟರ್ ಒಂದು ಬ್ರ್ಯಾಂಡ್, ಅದೇ ರೀತಿ ಸ್ಕ್ರೀನ್ ಬೇರೆ, ಎವಿಆರ್ ಬೇರೆ, ಆಕ್ಸೆಸರೀಸ್, ಸ್ಪೀಕರ್ ಎಲ್ಲ ಬೇರೆ ಬೇರೆ ಆಗಿರುತ್ತದೆ. ವಿಶ್ವದಾದ್ಯಂತ 6000 ಸ್ಪೀಕರ್ ಬ್ರ್ಯಾಂಡ್​ಗಳಿಗೆ ನಮ್ಮ ಬಜೆಟ್​ಗೆ ತಕ್ಕ ಹಾಗೆ ಆರಿಸಿಕೊಳ್ಳಬಹುದು. ನಾವು ಆಸ್ಟ್ರೇಲಿಯಾದ Krix, ಕೆನಡಾದ ಆಕ್ಸಿಯಮ್ (Axiom real Canadian brand), ಆರಿಜಿನ್ ಅಕೌಸ್ಟಿಕ್ ಆರ್ಕಿಟೆಕ್ಚರ್ ಸ್ಪೀಕರ್ಸ್ (Origin acoustic- architecture speakers) ಬಳಸ್ತೀವಿ. ಇವೆಲ್ಲ ನಿಮಗೆ ಮಲ್ಟಿಪ್ಲೆಕ್ಸ್​ಗಳಲ್ಲಿ ಕೂತು ಸಿನಿಮಾ ನೋಡಿದಂಥ ಅನುಭವವನ್ನೇ ನೀಡುತ್ತವೆ.

Home Theater System

ಗ್ರಾಹಕರೊಂದಿಗೆ ದೀಪಕ್ ಮಾತುಕತೆ

ಪ್ರಶ್ನೆ: ಹೋಮ್​ ಥಿಯೇಟರ್​ಗೆ ಮನೆಯಲ್ಲಿ ಯಾವ ಅಳತೆಯ ಕೋಣೆ ಮೀಸಲಿಡಬೇಕು?

ದೀಪಕ್: 11 X 13 ಅಥವಾ 14ರಿಂದ ಶುರುವಾಗಿ, 13×20, 15×30, ಹಾಗೂ 12×20 ಈ ಅಳತೆಯಲ್ಲಿ ಕೋಣೆ ಇದ್ದರೆ ಒಳ್ಳೆಯದು.

ಪ್ರಶ್ನೆ: ಯಾವ ಹಂತದಲ್ಲಿ ಹೋಮ್​ ಥಿಯೇಟರ್ ಮಾಡುವ ಬಗ್ಗೆ ನಿರ್ಧಾರ ಮಾಡಬೇಕು?

ದೀಪಕ್: ಇಂಟೀರಿಯರ್ಸ್ ಮಾಡುವ ವೇಳೆಗೆ ನಿರ್ಧಾರ ತೆಗೆದುಕೊಂಡರೆ ಉತ್ತಮ.

ಪ್ರಶ್ನೆ: ಈಗಾಗಲೇ ಕಟ್ಟಿರುವ ಮನೆಗಳಿಗೆ ಹೆಚ್ಚಿನ ಎಲೆಕ್ಟ್ರಿಕಲ್ ಕೆಲಸಗಳನ್ನು ಮಾಡಿಸಬೇಕಾ?

ದೀಪಕ್: ಖಂಡಿತಾ ಇಲ್ಲ. ಈಗಿರುವ ಎಲೆಕ್ಟ್ರಿಕಲ್ ವ್ಯವಸ್ಥೆಯೊಳಗೆ ಮಾಡಬಹುದು.

ಪ್ರಶ್ನೆ: ಹೋಮ್ ಥಿಯೇಟರ್ ಅಂದರೆ ಸಿನಿಮಾ ಮಾತ್ರ ನೋಡುವುದಕ್ಕೆ ಸಾಧ್ಯವಾ?

ದೀಪಕ್: ಹಾಗೇನಿಲ್ಲ. ವಿಡಿಯೋ ಕಾನ್ಫರೆನ್ಸ್ ಸೇರಿದಂತೆ ಹಲವಾರು ಕಾರ್ಯಗಳಿಗೆ ಇದರಿಂದ ಪ್ರಯೋಜನ ಇದೆ.

Namasya

ನಮಸ್ಯ ಕಚೇರಿ

ಪ್ರಶ್ನೆ: ಈ ಕ್ಷೇತ್ರದಲ್ಲಿ ನಿಮ್ಮ ಅನುಭವ, ಕೆಲಸದ ಬಗ್ಗೆ ತಿಳಿಸಿ.

ದೀಪಕ್: ಈ ವೃತ್ತಿಗೆ ಬಂದು 11 ವರ್ಷದ ಮೇಲಾಯಿತು. ಇದುವರೆಗೆ 1000ಕ್ಕೂ ಹೆಚ್ಚು ಪ್ರಾಜೆಕ್ಟ್ ಮಾಡಿದ್ದೀವಿ. ನಮ್ಮದು ಬೆಂಗಳೂರಿನಲ್ಲಿ ಎರಡು ಎಕ್ಸ್​ಪೀರಿಯೆನ್ಸ್ ಸೆಂಟರ್​ಗಳಿವೆ. ಒಂದು ವರ್ಷಕ್ಕೆ 60ರಿಂದ 70 ಪ್ರಾಜೆಕ್ಟ್ ಮಾಡ್ತೀವಿ. ಒಂದು ಪ್ರಾಜೆಕ್ಟ್​ಗೆ 30ರಿಂದ 60 ದಿನ ಬೇಕಾಗುತ್ತದೆ. ಪ್ರಾಜೆಕ್ಟ್​ನ ಎಲ್ಲ ಸೆಗ್ಮೆಂಟ್​ ಮಾಡುವುದು ಹೌದು. ಆದರೆ 20 ಲಕ್ಷ ಮೇಲ್ಪಟ್ಟು ಪ್ರಾಜೆಕ್ಟ್​ಗಳೇ ನಮಗೆ ಹೆಚ್ಚು ಬರೋದು. ಕರ್ನಾಟಕ ಚಲನಚಿತ್ರ ಒಕ್ಕೂಟದಲ್ಲಿನ ಪ್ರಾಜೆಕ್ಟ್ ನಾವೇ ಮಾಡಿರೋದು. ಸದ್ಯಕ್ಕೆ 1.5 ಕೋಟಿ ರೂಪಾಯಿಯ ನಾಲ್ಕು ಪ್ರಾಜೆಕ್ಟ್ ಮಾಡ್ತಿದ್ದೇವೆ.

ಪ್ರಶ್ನೆ: ಇದರ ನಿರ್ವಹಣೆ ಖರ್ಚು ಎಷ್ಟು ಬರುತ್ತದೆ? ಎಷ್ಟು ಸಮಯ ಬಾಳಿಕೆ ಬರುತ್ತದೆ?

ದೀಪಕ್: ನಿರ್ವಹಣೆ ಖರ್ಚು ಅಂದರೆ ವಿದ್ಯುತ್ ಬಿಲ್ ಮಾತ್ರ. ವೋಲ್ಟೇಜ್ ಹೆಚ್ಚು-ಕಡಿಮೆ ಆಗುವುದರಿಂದ ಏನಾದರೂ ಸಣ್ಣ- ಪುಟ್ಟ ಸಮಸ್ಯೆಗಳು ಆಗಬಹುದು. ಇನ್ನು ಪ್ರೊಜೆಕ್ಟರ್ ಒಳಗಿನ ಲ್ಯಾಂಪ್ ಸರಾಸರಿ ಮೂರರಿಂದ ಐದು ವರ್ಷ ಬಾಳಿಕೆ ಬರುತ್ತದೆ. ಆ ನಂತರದ ಅದು ಬದಲಿಸುವುದಕ್ಕೆ ಆಗುವ ಖರ್ಚು ಯಾವ ಮಾಡೆಲ್ ಪ್ರೊಜೆಕ್ಟರ್ ಎಂಬುದರ ಮೇಲೆ ನಿರ್ಧಾರ ಆಗುತ್ತದೆ.

ಪ್ರಶ್ನೆ: ಹೋಮ್ ಥಿಯೇಟರ್​ ನಿಜವಾದ ಅನುಭವ ಬೇಕು ಎಂದಾದಲ್ಲಿ ಕನಿಷ್ಠ ಎಷ್ಟು ಖರ್ಚಾಗುತ್ತದೆ?

ದೀಪಕ್: ಸ್ಕ್ರೀನ್, ಪ್ರೊಜೆಕ್ಟರ್, ಎವಿಆರ್, ಸ್ಪೀಕರ್, ಅಕೌಸ್ಟಿಕ್​ ಸಿಸ್ಟಮ್ ಸೇರಿ ಕನಿಷ್ಠ ಆರು ಲಕ್ಷ ರೂಪಾಯಿಯಿಂದ ಎಂಟು ಲಕ್ಷ ಬೇಕಾಗುತ್ತದೆ. ಅದು ಆಯಾ ಸಮಯಕ್ಕೆ ಬದಲಾಗುತ್ತದೆ. ನಾನು ಹೇಳುತ್ತಿರುವುದು ಸದ್ಯದ ಲೆಕ್ಕ.

Screen

ಸಿನಿಮಾ ಸ್ಕ್ರೀನ್

ಪ್ರಶ್ನೆ: ಈ ಹೋಮ್ ಥಿಯೇಟರ್​ಗಳಿಗೆ ಬ್ಯಾಂಕ್, ಹಣಕಾಸು ಸಂಸ್ಥೆಯಿಂದ ಸಾಲ ಸಿಗುತ್ತಾ?

ದೀಪಕ್: ಬ್ಯಾಂಕ್​ಗಳ ಹೋಮ್​ ಲೋನ್ ಲೆಕ್ಕದಲ್ಲಿ ಸಿಗಲ್ಲ. ಆದರೆ ಕನ್ಸ್ಯೂಮರ್ ಡ್ಯೂರಬಲ್ಸ್ ಲೆಕ್ಕದಲ್ಲಿ ತೆಗೆದುಕೊಳ್ಳಬಹುದು. ಕ್ರೆಡಿಟ್​ ಸ್ಕೋರ್​, ಬಡ್ಡಿ ಲೆಕ್ಕಾಚಾರ, ಮರುಪಾವತಿ ಅವಧಿ ಇವೆಲ್ಲ ಅದೇ ಬಗೆಯ ಸಾಲಕ್ಕೆ ಅನ್ವಯಿಸುತ್ತದೆ.

Published On - 7:04 pm, Fri, 15 July 22

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ