Google Pixel 7a: ಗೂಗಲ್‌ ಪಿಕ್ಸೆಲ್‌ 7a ಸ್ಮಾರ್ಟ್​ಫೋನ್​ನ ಬೆಲೆ ಆನ್​ಲೈನ್​ನಲ್ಲಿ ಸೋರಿಕೆ

|

Updated on: May 10, 2023 | 9:30 AM

ಕಳೆದ ವರ್ಷ ಅಕ್ಟೋಬರ್​ನಲ್ಲಿ ಗೂಗಲ್ ತನ್ನ ಗೂಗಲ್‌ ಪಿಕ್ಸೆಲ್‌ 7 ಸರಣಿಯ ಎರಡು ಮೊಬೈಲ್​ಗಳನ್ನು ಪರಿಚಯಿಸಿತ್ತು. ಇದರಲ್ಲಿ ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್‌ ಇದ್ದವು. ಇದೀಗ ಈ ಸರಣಿಯ ಮುಂದುವರೆದ ಭಾಗವಾಗಿ ಗೂಗಲ್ ಹೊಸ ಗೂಗಲ್ ಪಿಕ್ಸೆಲ್ 7a ಫೋನನ್ನು ಅನಾವರಣ ಮಾಡಲು ಸಜ್ಜಾಗಿದೆ. ತನ್ನ ಕ್ಯಾಮೆರಾದಿಂದಲೇ ಟೆಕ್ ಪ್ರಿಯರ ನಿದ್ದೆ ಕದ್ದಿರುವ ಈ ಫೋನ್ ಮೇ 10 ರಂದು ಗೂಗಲ್‌ I/O 2023 ಕಾರ್ಯಕ್ರಮದಲ್ಲಿ ಬಿಡುಗಡೆಯಾಗುತ್ತಿದೆ.

ಗೂಗಲ್ ಕಂಪನಿ ಪಿಕ್ಸೆಲ್ ಸರಣಿಯಲ್ಲಿ ವರ್ಷಕ್ಕೆ ಒಂದರಂತೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುತ್ತದೆ. ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳಿಗೆ ಗೂಗಲ್ ಫೋನ್ ತನ್ನದೇ ಆದ ಬಳಕೆದಾರರನ್ನು ಹೊಂದಿದೆ. ಅದರಂತೆ ಕಳೆದ ವರ್ಷ ಅಕ್ಟೋಬರ್​ನಲ್ಲಿ ಗೂಗಲ್ ತನ್ನ ಗೂಗಲ್‌ ಪಿಕ್ಸೆಲ್‌ 7 ಸರಣಿಯ ಎರಡು ಮೊಬೈಲ್​ಗಳನ್ನು ಪರಿಚಯಿಸಿತ್ತು. ಇದರಲ್ಲಿ ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೊ ಸ್ಮಾರ್ಟ್‌ಫೋನ್‌ ಇದ್ದವು. ಇದೀಗ ಈ ಸರಣಿಯ ಮುಂದುವರೆದ ಭಾಗವಾಗಿ ಗೂಗಲ್ ಹೊಸ ಗೂಗಲ್ ಪಿಕ್ಸೆಲ್ 7a ಫೋನನ್ನು ಅನಾವರಣ ಮಾಡಲು ಸಜ್ಜಾಗಿದೆ. ತನ್ನ ಕ್ಯಾಮೆರಾದಿಂದಲೇ ಟೆಕ್ ಪ್ರಿಯರ ನಿದ್ದೆ ಕದ್ದಿರುವ ಈ ಫೋನ್ ಮೇ 10 ರಂದು ಗೂಗಲ್‌ I/O 2023 ಕಾರ್ಯಕ್ರಮದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಫೋನ್ ವೈಶಿಷ್ಟ್ಯಗಳ ವಿವರ ಇಲ್ಲಿದೆ. ಗೂಗಲ್‌ ಪಿಕ್ಸೆಲ್‌ 7a ಸ್ಮಾರ್ಟ್​ಫೋನ್​ ಬೆಲೆ ಭಾರತದಲ್ಲಿ ಅಂದಾಜು ₹46,000 ಇರಲಿದೆ. ಹೊಸ ಫೋನ್ 8GB RAM + 128GB ಸ್ಟೋರೇಜ್ ಆಯ್ಕೆ ಹೊಂದಿರುತ್ತದೆ ಮತ್ತು 6.1 ಇಂಚಿನ FHC+ OLED ಡಿಸ್‌ಪ್ಲೇ ಇರಲಿದೆ. 64 MP ಸೋನಿ IMX787 ಸೆನ್ಸಾರ್‌ ಹಾಗೂ 12 MP ಸೆಕೆಂಡರಿ ಸೆನ್ಸಾರ್​ ಕ್ಯಾಮೆರಾ ಮತ್ತು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10.8MP ಕ್ಯಾಮೆರಾ ಇದ್ದು,
4,335mAh ಸಾಮರ್ಥ್ಯದ ಬ್ಯಾಟರಿ ಗೂಗಲ್‌ ಪಿಕ್ಸೆಲ್‌ 7a ಫೋನ್ ವಿಶೇಷತೆಯಾಗಿದೆ.

Follow us on