ಇಂಟರ್‌ನೆಟ್ ಲೋಕದ ದಿಗ್ಗಜ ಗೂಗಲ್ (Google), ಪ್ರತಿವರ್ಷವೂ ಹೊಸ ಹೊಸ ಸೇವೆಗಳನ್ನು ಜನರಿಗೆ ಪರಿಚಯಿಸುತ್ತಿರುತ್ತದೆ. ಈ ಪೈಕಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯರುವ ಗೂಗಲ್ ಪ್ಲೇ ಸ್ಟೋರ್ನಲ್ಲೂ (Google Play Store) ವರ್ಷಕ್ಕೆ ಸಾಕಷ್ಟು ಆ್ಯಪ್ಗಳು ಬಿಡುಗಡೆಗೊಳ್ಳುತ್ತವೆ. ಹೀಗೆ ಪ್ರತಿ ವರ್ಷ ಜನಪ್ರಿಯವಾಗಿರುವ ಆ್ಯಪ್ಗಳ ಪಟ್ಟಿಯನ್ನೂ ಬಿಡುಗಡೆ ಮಾಡುತ್ತದೆ. ಅದರಂತೆ 2021ನೇ ವರ್ಷದಲ್ಲಿ ಗೂಗಲ್ ಅತ್ಯುತ್ತಮ ಆ್ಯಪ್ಸ್, ಗೇಮ್ಸ್, ಸಿನಿಮಾ ಮತ್ತು ಪುಸ್ತಕ ಕುರಿತಾಗಿ ಮಾಹಿತಿ ಹಂಚಿಕೊಂಡಿದೆ. ಗೂಗಲ್ ಪ್ಲೇ ಬೆಸ್ಟ್ 2021 (Google Play Best Apps 2021) ಅಡಿಯಲ್ಲಿ ಕೆಲ ಆ್ಯಪ್ಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದು, ಇದರಲ್ಲಿ ಬಿಟ್ಕ್ಲಾಸ್ ಆ್ಯಪ್ ಭಾರತದ ಅತ್ಯುತ್ತಮ ಅಪ್ಲಿಕೇಶನ್ ಎಂಬ ಬಿರುದು ಪಡೆದುಕೊಂಡಿದೆ.
ಬಿಟ್ಕ್ಲಾಸ್ ಒಂದು ಕಲಿಕೆಯ ಆ್ಯಪ್ ಆಗಿದ್ದು, ಇದರಲ್ಲಿ ಲೈವ್ ಮೂಲಕ ಅನೇಕ ವಿಷಯಗಳನ್ನು ಕಲಿಯಬಹುದಾಗಿದೆ. ಇದು ಕಳೆದ ಮಾರ್ಚ್ನಲ್ಲಿ ಭಾರತದ ಆಂಡ್ರಾಯ್ಡ್ ಬಳಕೆದಾರರಿಗೆ ಪ್ಲೇ ಸ್ಟೋರ್ನಲ್ಲಿ ಲಾಂಚ್ ಆಗಿತ್ತು. ಇನ್ನು ಗೇಮಿಂಗ್ ಕೆಟಗರಿಯಲ್ಲಿ ಬ್ಯಾಟರ್ಗ್ರೌಂಡ್ ಮೊಬೈಲ್ ಇಂಡಿಯಾ ಅತ್ಯುತ್ತಮ ಆ್ಯಪ್ ಎಂಬುದು ಬಹಿರಂಗ ಪಡಿಸಿದೆ. ಇದು ಪಬ್ಜಿ ಬ್ಯಾನ್ ಆದ ಬಳಿಕ ಬಂದ ಹೊಸ ಅವತಾರವಾಗಿದೆ. ಬಳಕೆದಾರರ ಆಯ್ಕೆಯಲ್ಲಿ ಕ್ಲಬ್ ಹೌಸ್ ಮೊದಲ ಸ್ಥಾನದಲ್ಲಿದೆ.
ಗೂಗಲ್ ಹೇಳಿರುವ ಪ್ರಕಾರ, ಈ ವರ್ಷ ಹೆಚ್ಚಿನವರು ಆನ್ಲೈನ್ ಲರ್ನಿಂಗ್ ಆ್ಯಪ್ ಬಗ್ಗೆ ಹೆಚ್ಚಿನ ಗಮನ ನೀಡಿದ್ದಾರಂತೆ. ನಂತರ ಹಾಡು, ಮ್ಯೂಸಿಕ್, ಕಾಮಿಡಿ ಈರೀತಿಯ ಕೆಟಗರಿ ಕಡೆ ಉತ್ಸಾಹ ತೋರಿಸಿದ್ದಾರಂತೆ. ಅಂತೆಯೆ ಲೈವ್ ಆಗಿ ಡ್ಯಾನ್ಸ್ ಕಲಿಯುವುದು ಮತ್ತು ಫಿಟ್ನೆಸ್ ಬಗ್ಗೆ ಇರುವ ಆ್ಯಪ್ಗಳು ಕೂಡ ಹೆಚ್ಚು ಡೌನ್ಲೋಡ್ ಆಗಿವೆಯಂತೆ. ಕಳೆದ ವರ್ಷ ಬೆಸ್ಟ್ ಗೇಮ್ 2020 ವಿಭಾಗದಲ್ಲಿ ಲೆಜೆಂಡ್ ಆಫ್ ರನ್ಟೆರಾ ಮತ್ತು ಸ್ಪರ್ಧಾತ್ನಕ ಆಟಗಳಲ್ಲಿ ಬುಲೆಟ್ ಇಕೊ, ಕಾರ್ಟ್ ರೈಡರ್+, ಲೆಂಜೆಂಡ್ ಆಪ್ ರುನೆಟೆರಾ, ರಂಬಲ್ ಹಾಕಿ ಮತ್ತು ಟಾಪ್ವಾರ್ ಬ್ಯಾಟಲ್ ಗೇಮ್ ಪ್ರಶಸ್ತಿ ಬಾಜಿಕೊಂಡಿತ್ತು.
ಗೂಗಲ್ ಪ್ಲೇ ಬೆಸ್ಟ್ 2021 ಪ್ರಶಸ್ತಿ ಪಡೆದುಕೊಂಡ ಸಂಪೂರ್ಣ ಆ್ಯಪ್ಗಳ ವಿವರ ಇಲ್ಲಿದೆ:
ಬೆಸ್ಟ್ ಫನ್ ಆ್ಯಪ್:
ದೈನಂದಿನ ಅಗತ್ಯಗಳ ಬೆಸ್ಟ್ ಆ್ಯಪ್:
ಪರ್ಸನ್ ಗ್ರೋತ್ನ ಅತ್ಯುತ್ತಮ ಆ್ಯಪ್:
ಬೆಸ್ಟ್ ಆ್ಯಪ್ ಫಾರ್ ಗುಡ್:
ಬೆಸ್ಟ್ ಆ್ಯಪ್ ಫಾರ್ ಟ್ಯಾಬ್ಲೆಟ್:
ಬೆಸ್ಟ್ ಆ್ಯಪ್ ಫಾರ್ Wear:
ಭಾರತದ ಅತ್ಯುತ್ತಮ ಗೇಮಿಂಗ್ ಆ್ಯಪ್:
ಬೆಸ್ಟ್ ಗೇಮ್ ಚೆಂಜರ್ಸ್:
ಅತ್ಯುತ್ತಮ Indie ಗೇಮ್ಸ್:
ಬೆಸ್ಟ್ Pick Up & Play:
Tabletsನ ಅತ್ಯುತ್ತಮ ಗೇಮ್:
Twitter CEO: ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ; ನೂತನ ಸಿಇಒ ಆಗಿ ಪರಾಗ್ ಅಗರ್ವಾಲ್ ನೇಮಕ
(Google Play Best of 2021 list is out the best app of the year is Bitclass Battlegrounds Mobile India won in games category)