Twitter CEO: ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ; ನೂತನ ಸಿಇಒ ಆಗಿ ಪರಾಗ್ ಅಗರ್​ವಾಲ್ ನೇಮಕ

Parag Agrawal: ಟ್ವಿಟರ್ ಹೊಸ ಸಿಇಒ ಆಗಿ ಪರಾಗ್ ಅಗರವಾಲ್ ನೇಮಕ ಆಗಿದ್ದಾರೆ. ನೂತನ ಸಿಇಒ ಆಗಿ ಭಾರತೀಯ ಪರಾಗ್ ಅಗರವಾಲ್ ಆಯ್ಕೆ ಆಗಿದ್ದಾರೆ. ಮುಂಬೈನ ಐಐಟಿಯಲ್ಲಿ ವ್ಯಾಸಂಗ ಪರಾಗ್ ಮಾಡಿದ್ದರು.

Twitter CEO: ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ; ನೂತನ ಸಿಇಒ ಆಗಿ ಪರಾಗ್ ಅಗರ್​ವಾಲ್ ನೇಮಕ
ಜ್ಯಾಕ್ ಡಾರ್ಸೆ
Follow us
TV9 Web
| Updated By: Digi Tech Desk

Updated on:Nov 30, 2021 | 11:30 AM

ದೆಹಲಿ: ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ಟ್ವಿಟರ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜ್ಯಾಕ್ ಡಾರ್ಸೆ ಟ್ವಿಟರ್ ಸಂಸ್ಥೆಯಲ್ಲಿ 16 ವರ್ಷ ಕಾರ್ಯನಿರ್ವಹಿಸಿದ್ದರು. ಇದೀಗ, ಟ್ವಿಟರ್ ಹೊಸ ಸಿಇಒ ಆಗಿ ಪರಾಗ್ ಅಗರವಾಲ್ ನೇಮಕ ಆಗಿದ್ದಾರೆ. ನೂತನ ಸಿಇಒ ಆಗಿ ಭಾರತೀಯ ಪರಾಗ್ ಅಗರವಾಲ್ ಆಯ್ಕೆ ಆಗಿದ್ದಾರೆ. ಮುಂಬೈನ ಐಐಟಿಯಲ್ಲಿ ವ್ಯಾಸಂಗ ಪರಾಗ್ ಮಾಡಿದ್ದರು. ಪರಾಗ್, ಪ್ರಸ್ತುತ ಟ್ವಿಟರ್​ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಗಿದ್ದಾರೆ.

ಜ್ಯಾಕ್ ಡೋರ್ಸೆ ಸ್ಕ್ವೇರ್ ಐಎನ್​ಸಿ ಕಡೆಗೆ ಅಧಿಕ ಗಮನ ನೀಡುತ್ತಿದ್ದಾರೆ, ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್​ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್​ಮೆಂಟ್ ಕಾರ್ಪ್ ಈ ಮೊದಲು ಆರೋಪ ಮಾಡಿತ್ತು. ಅಷ್ಟೇ ಅಲ್ಲದೆ, ಡೋರ್ಸೆ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು 2020ರ ಆರಂಭದಲ್ಲಿ ಒತ್ತಾಯಿಸಿತ್ತು.

ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ ನೀಡಿರುವ ಬಗ್ಗೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಟ್ವೀಟ್​ನಲ್ಲಿ ಲಗತ್ತಿಸಿದ್ದಾರೆ. ಇದನ್ನು ಯಾರಾದರೂ ಕೇಳಿಸಿಕೊಂಡಿರಾ ಎಂದು ಖಚಿತವಿಲ್ಲ. ಆದರೆ, ನಾನು ಟ್ವಿಟರ್​ಗೆ ರಾಜೀನಾಮೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Twitter DM: ಟ್ವಿಟ್ಟರ್‌ ಬಳಕೆದಾರರು ಫುಲ್ ಖುಷ್: ಬಂದಿದೆ ಹೊಸ ಅಪ್ಡೇಟ್

ಇದನ್ನೂ ಓದಿ: ಸರ್ಕಾರವನ್ನು ಟೀಕಿಸುವವರು ಮತ್ತು ಹೋರಾಟಗಾರರ ಟ್ವಿಟರ್ ಖಾತೆ ಮೇಲೆ ತ್ರಿಪುರಾ ಪೊಲೀಸ್ ನಿಗಾ

Published On - 9:48 pm, Mon, 29 November 21