
ಭಾರತದ ಅನೇಕ ಕಡೆಗಳಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ (Google) ಸರ್ವರ್ ಡೌನ್ ಆಗಿದೆ. ಗೂಗಲ್ ಒಡೆತನದ ಯೂಟ್ಯೂಬ್, ಜಿ-ಮೇಲ್ (G-Mail) ಗೂಗಲ್ ಡ್ರೈವ್ನ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಉಪಯೋಗಿಸಲು ಪರದಾಡುತ್ತಿದ್ದಾರೆ. ಭಾರತದಾದ್ಯಂತ ಬಳಕೆದಾರರು ಇಮೇಲ್ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಕೂಡ ಸಾಧ್ಯವಾಗುತ್ತಿಲ್ಲ. ಗುರುವಾರ ಬೆಳಗ್ಗೆ ಗೂಗಲ್ ಸರ್ವರ್ ಡೌನ್ (Google Server Down) ಆದ ಬಗ್ಗೆ ವರದಿ ಆಗಿದೆ. ಡೌನ್ಡೆಟೆಕ್ಟರ್ ಮಾಡಿರುವ ವರದಿಯ ಪ್ರಕಾರ, ಗೂಗಲ್ ಸರ್ವರ್ ಡೌನ್ ಆದ ಬಗ್ಗೆ ಭಾರತದಲ್ಲಿ 1,500 ಕ್ಕೂ ಅಧಿಕ ರಿಪೋರ್ಟ್ ಬಂದಿದೆಯಂತೆ. ಟ್ವಿಟ್ಟರ್ನಲ್ಲಿ ಗೂಗಲ್ ಡೌನ್ ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದ್ದು ಅನೇಕರು ಟ್ವೀಟ್ ಮಾಡುತ್ತಿದ್ದಾರೆ.
”502 ದೋಷ ಕಂಡುಬಂದಿದ್ದು ಸರ್ವರ್ ತಾತ್ಕಾಲಿಕ ತೊಂದರೆ ಎದುರಿಸಿದೆ. ನಿಮ್ಮ ವಿನಂತಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು 30 ಸೆಕೆಂಡುಗಳ ನಂತರ ಮತ್ತೆ ಪ್ರಯತ್ನಿಸಿ”, ಎಂಬ ಸಂದೇಶ ಗೂಗಲ್ನಲ್ಲಿ ಸರ್ಚ್ ಕೊಟ್ಟಾಗ ಕಾಣಿಸುತ್ತದೆ.
ಗೂಗಲ್ ಮಾಲೀಕತ್ವದ ಯೂಟ್ಯೂಬ್, ಡ್ರೈವ್, ಜಿಮೇಲ್, ಡ್ಯೂ, ಗೂಗಲ್ ಮೀಟ್, ಹ್ಯಾಂಗ್ಔಟ್ಸ್, ಡಾಕ್ಸ್, ಶೀಟ್ಗಳಂತಹ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರು ತಮಗೆ ಕಂಡುಬಂದ ದೋಷಗ ಬಗ್ಗೆ ಸ್ಕ್ರೀನ್ಶಾಟ್ಗಳನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ, ಇದರ ಬಗ್ಗೆ ಗೂಗಲ್ ಇನ್ನೂ ಪ್ರತಿಕ್ರಿಯಿಸಿಲ್ಲ.
ತಂತ್ರಜ್ಞಾನದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:54 am, Thu, 23 March 23