AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake App: ಪ್ಲೇ ಸ್ಟೋರ್​ನಿಂದ ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ

Google Play Store: ಸದ್ಯ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 12 ಡೇಂಜರಸ್ ಆ್ಯಪ್‌ಗಳನ್ನು ತೆಗೆದುಹಾಕಿದ್ದು, ಈ ಅಪ್ಲಿಕೇಶನ್‌ಗಳು ಅಪಾಯಕಾರಿ ಎಂದು ಸಾಬೀತಾಗಿರುವ ಕಾರಣ ಅವುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್‌ ಎಚ್ಚರಿಸಿದೆ.

Fake App: ಪ್ಲೇ ಸ್ಟೋರ್​ನಿಂದ ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Google Play Store
TV9 Web
| Updated By: Vinay Bhat|

Updated on: Feb 03, 2023 | 2:25 PM

Share

ಆಂಡ್ರಾಯ್ಡ್ ಸ್ಮಾರ್ಟ್​ಫೋನ್ (Android Smartphone) ಬಳಕೆದಾರರು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್ (Google Play Store)​ ನಲ್ಲಿ ನಕಲಿ ಆ್ಯಪ್​ಗಳ ಹಾವಳಿ ಹೆಚ್ಚುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ (Google) ತನ್ನ ಪ್ಲೇ ಸ್ಟೋರ್​ನಿಂದ ಅಪಾಯಕಾರಿ ಆ್ಯಪ್​ಗಳನ್ನು ಡಿಲೀಟ್ ಮಾಡಿದೆ. ಈಗ ಮತ್ತೆ ಕೆಲವೊಂದು ಅಪ್ಲಿಕೇಶನ್​​​ಗಳಲ್ಲಿ ಗೂಗಲ್ ಈ ಮಾಲ್ವೇರ್​ ಅನ್ನು ಪತ್ತೆಹಚ್ಚಿದ್ದು,​ ಇದನ್ನು ಉಪಯೋಗಿಸುತ್ತಿರುವರಿಗೆ ಎಚ್ಚರಿಕೆ ನೀಡಿದೆ. ಅಲ್ಲದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿರುವ ಹೊಸ ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿದೆ. ಇಲ್ಲವಾದರೆ ಖಂಡಿತಾ ನೀವು ನಿಮ್ಮ ಖಾಸಗಿ ದಾಖಲೆ ಹಾಗೂ ಇನ್ನಿತರೆ ಮಾಹಿತಿಯನ್ನು ಬೇರೆಯವರಿಗೆ ನೀಡಿದಂತೆ ಆಗುತ್ತದೆ.

ಸದ್ಯ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ 12 ಡೇಂಜರಸ್ ಆ್ಯಪ್‌ಗಳನ್ನು ತೆಗೆದುಹಾಕಿದ್ದು, ಈ ಅಪ್ಲಿಕೇಶನ್‌ಗಳು ಅಪಾಯಕಾರಿ ಎಂದು ಸಾಬೀತಾಗಿರುವ ಕಾರಣ ಅವುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್‌ ಎಚ್ಚರಿಸಿದೆ. ಅಚ್ಚರಿ ಎಂದರೆ ಈ ಎಲ್ಲ ಆ್ಯಪ್‌ಗಳನ್ನು ಲಕ್ಷಾಂತರ ಬಳಕೆದಾರರು ಇನ್‌ಸ್ಟಾಲ್‌ ಮಾಡಿಕೊಂಡು ಬಳಸುತ್ತಿದ್ದಾರಂತೆ. ಇದರಲ್ಲಿ ಹೆಚ್ಚು ಫಿಟ್​ನೆಸ್​ಗೆ ಸಂಬಂಧಿಸಿದ ಆ್ಯಪ್ ಮತ್ತು ಗೇಮಿಂಗ್ ಆ್ಯಪ್​ಗಳಾಗಿವೆ.

Twitter Crypto: ಟ್ವಿಟ್ಟರ್​ನಲ್ಲಿ ಹೊಸ ಪೇಮೆಂಟ್ ಸಿಸ್ಟಂ? ಕ್ರಿಪ್ಟೋ ಪಾವತಿಗೂ ಅವಕಾಶ?

ಇದನ್ನೂ ಓದಿ
Image
Coca-Cola Smartphone: ಫೆ. 10ಕ್ಕೆ ಕೋಕಾ-ಕೋಲಾ ಕಂಪನಿಯ ಚೊಚ್ಚಲ ಮೊಬೈಲ್ ರಿಲೀಸ್: ಏನು ಫೀಚರ್ಸ್?
Image
Cyber Crime: ಫಾಸ್ಟ್ಯಾಗ್ ರಿಚಾರ್ಜ್ ಮಾಡುವಾಗ ಒಂದು ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ: ತಪ್ಪಿಯೂ ಹೀಗೆ ಮಾಡಬೇಡಿ
Image
WhatsApp Ban: ಭಾರತದಲ್ಲಿ 36 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಮೆಟಾ: ಯಾಕೆ?
Image
Budget 2023: ಬಿಎಸ್​ಎನ್​ಎಲ್ 5ಜಿ ನೆಟ್ವರ್ಕ್ ಅಭಿವೃದ್ಧಿಗೆ 53 ಸಾವಿರ ಕೋಟಿ ರೂ

10 ಮಿಲಿಯನ್‌ ಇನ್‌ಸ್ಟಾಲ್‌ ಕಂಡಿರುವ ಫಿಟ್‌ನೆಸ್‌ ಆ್ಯಪ್‌ ಲಕ್ಕಿ ಸ್ಟೆಪ್ ಅಪಾಯಕಾರಿ ಆ್ಯಪ್ ಎಂದು ಗೂಗಲ್ ಹೇಳಿದೆ. ಇದರ ಜೊತೆಗೆ 5 ಮಿಲಿಯಲ್‌ ಇನ್‌ಸ್ಟಾಲ್‌ ಆಗಿರುವ ವಾಕಿಂಗ್‌ ಜಾಯ್‌ ಆ್ಯಪ್‌, ಲಕ್ಕಿ ಹ್ಯಾಬಿಟ್‌ ಅನ್ನು ತೆಗೆದು ಹಾಖಿದೆ. ಅಂತೆಯೆ ಗೇಮಿಂಗ್‌ ವಿಭಾಗದಲ್ಲಿ 1 ಲಕ್ಷ ಜನರು ಬಳಸುತ್ತಿರುವ ಗೋಲ್ಡನ್‌ ಹಂಟ್, ರಿಫ್ಲೆಕ್ಟರ್, ಸೆವೆನ್ ಗೋಲ್ಡನ್ ವೂಲ್ಫ್ ಬ್ಲ್ಯಾಕ್‌ಜಾಕ್ ಆ್ಯಪ್ ಅನ್ನು ಕಿತ್ತೆಸೆದಿದೆ. ಇದರೊಂದಿಗೆ 50 ಲಕ್ಷ ಜನರು ಇನ್​ಸ್ಟಾಲ್ ಮಾಡಿಕೊಂಡಿರುವ ಅನ್‌ಲಿಮಿಟೆಡ್ ಸ್ಕೋರ್, ಬಿಗ್‌ ಡಿಸಿಶನ್ ಹಾಗೂ ಜುವೆಲ್ ಸೀ ಲಕ್ಸ್ ಪ್ರೂಟ್ಸ್‌ ಗೇಮ್, ಲಕ್ಕಿ ಕ್ಲೋವರ್ ಆಪ್‌, ಕಿಂಗ್ ಬ್ಲಿಟ್ಜ್ ಮತ್ತು ಲಕ್ಕಿ ಹಮ್ಮರ್ ಆ್ಯಪ್‌ಗಳನ್ನು ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ.

ಆಂಡ್ರಾಯ್ಡ್‌ಗಾಗಿ ಡಾ.ವೆಬ್‌ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ, ಆಯ್ಡ್‌ವೇರ್ ಟ್ರೋಜನ್‌ಗಳು ಮತ್ತು ಸ್ಪೈವೇರ್‌ಗಳ ಚಟುವಟಿಕೆಯು ಡಿಸೆಂಬರ್ 2022 ರಲ್ಲಿ ಹೆಚ್ಚಾಗಿದೆ ಎಂದು ಕಂಡುಬಂದಿದೆ. ಅದರಂತೆ ಡಾ ವೆಬ್‌ ಗೂಗಲ್‌‌ ಪ್ಲೇ ಸ್ಟೋರ್‌ನಲ್ಲಿ ಈ ರೀತಿಯ ಅಪಾಯಕಾರಿ ಆ್ಯಪ್‌ಗಳನ್ನು ಪತ್ತೆ ಮಾಡಿದೆ. ಈ ಮೂಲಕ ಬಳಕೆದಾರರ ಬ್ಯಾಂಕಿಂಗ್‌ ವ್ಯವಹಾರ ಹಾಗೂ ಅವರ ಖಾಸಗಿ ಭದ್ರತೆಗೆ ಸಹಕಾರಿಯಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?