Coca-Cola Smartphone: ಫೆ. 10ಕ್ಕೆ ಕೋಕಾ-ಕೋಲಾ ಕಂಪನಿಯ ಚೊಚ್ಚಲ ಮೊಬೈಲ್ ರಿಲೀಸ್: ಏನು ಫೀಚರ್ಸ್?

Realme 10 Pro: ರಿಯಲ್ ಮಿ ಜೊತೆ ಕೈ ಜೋಡಿಸಿರುವುದರಿಂದ ಕೋಕಾ-ಕೋಲಾ ಕಂಪನಿಯ ಚೊಚ್ಚಲ ಸ್ಮಾರ್ಟ್‌ಫೋನ್‌ಗೆ ರಿಯಲ್‌ ಮಿ 10 ಪ್ರೊ ಎಂದು ಹೆಸರಿಡಲಿಲಾಗಿದೆ. ಭಾರತದಲ್ಲಿ ಫೆಬ್ರವರಿ 10 ರಂದು ನೂತನ ಮೊಬೈಲ್ ಬಿಡುಗಡೆ ಆಗಲಿದೆ.

Coca-Cola Smartphone: ಫೆ. 10ಕ್ಕೆ ಕೋಕಾ-ಕೋಲಾ ಕಂಪನಿಯ ಚೊಚ್ಚಲ ಮೊಬೈಲ್ ರಿಲೀಸ್: ಏನು ಫೀಚರ್ಸ್?
Realme 10 Pro Coca-Cola edition
Follow us
Vinay Bhat
|

Updated on: Feb 03, 2023 | 6:55 AM

ವಿಶ್ವದಲ್ಲಿ ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆ ಇಂದು ವಿಶಾಲವಾಗಿ ಬೆಳೆದು ನಿಂತಿದೆ. ಭರ್ಜರಿ ಬೇಡಿಕೆಯಲ್ಲಿರುವ ಮೊಬೈಲ್ ಮಾರುಕಟ್ಟೆಯಲ್ಲಿ ದಿನಕ್ಕೊಂದು ಫೋನ್ ಬಿಡುಗಡೆ ಆಗುತ್ತದೆ. ಇದರ ಜೊತೆಗೆ ಹೊಸ ಹೊಸ ಕಂಪನಿಗಳು ಕೂಡ ಹುಟ್ಟಿಗೊಳ್ಳುತ್ತಿದೆ. ಕಳೆದ ವರ್ಷ ನಥಿಂಗ್ ಎಂಬ ಕಂಪನಿ ತನ್ನ ಮೊಟ್ಟ ಮೊದಲ ನಥಿಂಗ್ ಫೋನ್ 1 (Nothing Phone 1) ಸ್ಮಾರ್ಟ್​ಫೋನ್ ಪರಿಚಯಿಸಿ ಮೋಡಿ ಮಾಡಿತ್ತು. ಇದೀಗ ಪ್ರಸಿದ್ಧ ಪಾನೀಯ ಸಂಸ್ಥೆ ಕೋಕಾ-ಕೋಲಾ (Coca-Cola) ತನ್ನ ಚೊಚ್ಚಲ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ತಯಾರಾಗಿದೆ. ಸ್ಮಾರ್ಟ್‌ಫೋನ್‌ ತಯಾರಿಕಾ ರಿಯಲ್ ಮಿ ಬ್ರ್ಯಾಂಡ್ ಜೊತೆ ಕೈಜೋಡಿಸಿರುವ ಕೋಲಾ ಭಾರತದಲ್ಲಿ ಫೆಬ್ರವರಿ 10 ರಂದು ನೂತನ ಮೊಬೈಲ್ ಬಿಡುಗಡೆ ಮಾಡಲಿದೆ.

ರಿಯಲ್ ಮಿ ಜೊತೆ ಕೈ ಜೋಡಿಸಿರುವುದರಿಂದ ಈ ಹೊಸ ಸ್ಮಾರ್ಟ್‌ಫೋನ್‌ಗೆ ರಿಯಲ್‌ ಮಿ 10 ಪ್ರೊ ಎಂದು ಹೆಸರಿಡಲಿಲಾಗಿದೆ. ಸೋರಿಕೆಯಾದ ಚಿತ್ರಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ನ ರಿಯರ್‌ ಪ್ಯಾನೆಲ್ ವಿನ್ಯಾಸದಲ್ಲಿ ಡ್ಯುಯಲ್ ಟೋನ್ ಅನ್ನು ಪಡೆದುಕೊಂಡಿದೆ. ಅಂದರೆ ರಿಯರ್‌ ಪ್ಯಾನೆಲ್‌ನ ಮೂರನೇ ಒಂದು ಭಾಗವು ಕಪ್ಪು ಬಣ್ಣದಿಂದ ಕೂಡಿದೆ. ಹಾಗೆಯೇ ಉಳಿದ ಭಾಗವು ಕೆಂಪು ಬಣ್ಣದಿಂದ ಕೂಡಿದ್ದು, ಇದರ ಮೇಲೆ ಕೋಕ-ಕೋಲಾ ಬ್ರ್ಯಾಂಡಿಂಗ್ ಅನ್ನು ಸ್ಲ್ಯಾಪ್ ಮಾಡಲಾಗಿದೆ.

ಭಾರತದ ಮೊದಲ ಹೈಡ್ರೋಜನ್ ರೈಲು ಘೋಷಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಏನಿದರ ವಿಶೇಷತೆ?

ಇದನ್ನೂ ಓದಿ
Image
Cyber Crime: ಫಾಸ್ಟ್ಯಾಗ್ ರಿಚಾರ್ಜ್ ಮಾಡುವಾಗ ಒಂದು ಲಕ್ಷ ಕಳೆದುಕೊಂಡ ಉಡುಪಿಯ ವ್ಯಕ್ತಿ: ತಪ್ಪಿಯೂ ಹೀಗೆ ಮಾಡಬೇಡಿ
Image
WhatsApp Ban: ಭಾರತದಲ್ಲಿ 36 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಖಾತೆ ಬ್ಯಾನ್ ಮಾಡಿದ ಮೆಟಾ: ಯಾಕೆ?
Image
Budget 2023: ಬಿಎಸ್​ಎನ್​ಎಲ್ 5ಜಿ ನೆಟ್ವರ್ಕ್ ಅಭಿವೃದ್ಧಿಗೆ 53 ಸಾವಿರ ಕೋಟಿ ರೂ
Image
Samsung Galaxy S23 series: ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ ಅನಾವರಣ: ಟೆಕ್ ಪ್ರಿಯರನ್ನು ದಂಗಾಗಿಸಿದೆ ಈ ಸ್ಮಾರ್ಟ್​ಫೋನ್

ರಿಯಲ್‌ ಮಿ 10 ಪ್ರೊ 5G ಫೀಚರ್ಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಮೂಲಗಳ ಪ್ರಕಾರ ಇದು 6.72 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಇದು 120Hz ರಿಫ್ರೆಶ್ ರೇಟ್‌ ನೀಡಲಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಹಾಗೆಯೇ ರಿಯರ್‌ ಡ್ಯುಯಲ್ ಕ್ಯಾಮೆರಾ ರಚನೆ ಇದರಲ್ಲಿದ್ದು, 108 ಮೆಗಾಪಿಕ್ಸೆಲ್ ಪ್ರಮುಖ ಕ್ಯಾಮೆರಾ ಸೆನ್ಸರ್‌ ಹಾಗೂ 2MP ಮ್ಯಾಕ್ರೋ ಸೆನ್ಸರ್‌ ಆಯ್ಕೆ ಇದೆ. ಇನ್ನು ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬರುವುದಾದರೆ 5000mAh ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನಿನ ಬೆಲೆ 20,000 ರೂ. ಒಳಗಡೆ ಇರಬಹುದು ಎಂದು ಊಹಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ