Google Year in Search 2021: 2021 ರಲ್ಲಿ ಗೂಗಲ್​ನಲ್ಲಿ ಜನರು ಅತಿ ಹೆಚ್ಚು ಸರ್ಚ್ ಮಾಡಿದ ವಿಷಯ ಏನು ಗೊತ್ತೇ?

| Updated By: Vinay Bhat

Updated on: Dec 09, 2021 | 9:23 AM

Google Year in Search 2021: ಭಾರತದಲ್ಲಿ 2021 ರ ಹೆಚ್ಚಿನ ಸರ್ಚ್ ಟ್ರೆಂಡ್​ಗಳನ್ನು ಗೂಗಲ್ ರಿಸ್ಟೋರ್ ಮಾಡಿದೆ. ಸುದ್ದಿ, ಕ್ರೀಡೆ, ಮನರಂಜನೆ ಮತ್ತು ಇತರ ವಿಭಾಗಗಳಲ್ಲಿ ಭಾರತೀಯರು ವರ್ಷವಿಡೀ ಯಾವುದನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ಅನ್ನೊದನ್ನು ಈ ಬಹಿರಂಗಪಡಿಸಿದೆ.

1 / 9
ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ಗಳೇ ರಾಜ್ಯಭಾರ ಮಾಡುತ್ತಿರುವ ಈ ಆಧುನಿಕ ಯುಗದಲ್ಲಿ ಬಳಕೆದಾರರು ಗೂಗಲ್ ಸರ್ಚ್ (Google Search) ಮಾಡುವುದು ಸರ್ವೇ ಸಾಮಾನ್ಯ. ಸರ್ಚ್ ಇಂಜಿನ್ ದೈತ್ಯ ಗೂಗಲ್ ಅಷ್ಟರ ಮಟ್ಟಿಗೆ ತನ್ನ ಪ್ರಾಬಲ್ಯವನ್ನು ಜನರ ಮನಸ್ಸಿನಲ್ಲಿ ಮೂಡಿಸಿದೆ. ಗೂಗಲ್ ಇಂಡಿಯಾ ಪ್ರತಿವರ್ಷದಂತೆ ಈ ವರ್ಷವೂ ಕೂಡ ಹೆಚ್ಚಿನ ಜನರು ಏನೆಲ್ಲಾ ಸರ್ಚ್ ಮಾಡಿದ್ದಾರೆ ಅನ್ನೊ ಮಾಹಿತಿ ಹಂಚಿಕೊಂಡಿದೆ.

2 / 9
ಭಾರತದಲ್ಲಿ 2021 ರ ಹೆಚ್ಚಿನ ಸರ್ಚ್ ಟ್ರೆಂಡ್ಗಳನ್ನು ರಿಸ್ಟೋರ್ ಮಾಡಿದೆ. ಸುದ್ದಿ, ಕ್ರೀಡೆ, ಮನರಂಜನೆ ಮತ್ತು ಇತರ ವಿಭಾಗಗಳಲ್ಲಿ ಭಾರತೀಯರು ವರ್ಷವಿಡೀ ಯಾವುದನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ಅನ್ನೊದನ್ನು ಈ ಬಹಿರಂಗಪಡಿಸಿದೆ.

3 / 9
ಭಾರತದಲ್ಲಿ ಮಾಡಲಾಗಿರುವ ಸರ್ಚ್ಗಳಲ್ಲಿ ಕ್ರಿಕೆಟ್ ವಿಷಯದ ಸರ್ಚ್ಗಳು ಅಗ್ರಸ್ಥಾನದಲ್ಲಿದ್ದೂ 'ಇಂಡಿಯನ್ ಪ್ರೀಮಿಯರ್ ಲೀಗ್' ಮತ್ತು 'ಐಸಿಸಿ ಟಿ 20 ವಿಶ್ವಕಪ್' ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಲಾಗಿದೆ.

4 / 9
ಅಲ್ಲದೆ ಕೋಪಾ ಅಮೇರಿಕಾ ಮತ್ತು ಯುರೋ ಕಪ್ ಪಂದ್ಯಾವಳಿ ಸಮಯದಲ್ಲೂ ಪುಟ್ಬಾಲ್ ಪ್ರಿಯರು ಹೆಚ್ಚಿನ ಸಮಯ ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಇನ್ನು ಇದೇ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್ ಸಮಯದಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಕೂಡ ಉತ್ತಮವಾಗಿತ್ತು.ಈ ಸಮಯದಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರ ಬಗ್ಗೆ ಕೂಡ ಗೂಗಲ್ನಲ್ಲಿ ಹೆಚ್ಚಿನ ಜನರು ಸರ್ಚ್ ಮಾಡಿದ್ದಾರೆ.

5 / 9
'ಕೋವಿನ್' ಮತ್ತು 'ಕೋವಿಡ್ ಲಸಿಕೆ' ಗಾಗಿ ಕೂಡ ಸಾಕಷ್ಟು ಸರ್ಚ್ಗಳಾಗಿದ್ದು ದೇಶದಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ ಎಂದು ಸರ್ಚ್ ದೈತ್ಯ ಹೇಳಿದೆ. ಬ್ಯಾಟಲ್ ರಾಯಲ್ ಗೇಮ್ ಗರೆನಾ ಫ್ರೀ ಫೈರ್  ಗೇಮಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ವಿಷಯವಾಗಿದ್ದು ಅದು ದೇಶದ ಒಟ್ಟಾರೆ ಟ್ರೆಂಡಿಂಗ್ ಪಟ್ಟಿಗೆ ಸೇರಿದೆ.

6 / 9
ಒಟ್ಟಾರೆ ಟ್ರೆಂಡಿಂಗ್ ವಿಷಯಗಳಲ್ಲಿ ಮುಖ್ಯ ಎನಿಸುವ How to ಮತ್ತು What is ಪದಗುಚ್ಛಗಳಲ್ಲಿಯೂ ಕೊವಿಡ್ ಸಂಬಂಧಿತ ಪದಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಕೊವಿಡ್ ಲಸಿಕೆ ಪಡೆಯಲು ನೋಂದಣಿ ಹೇಗೆ? ಲಸಿಕೆ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಆಮ್ಲಜನಕರ ಮಟ್ಟ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ವಿಷಯಗಳ ಬಗ್ಗೆ ಹೆಚ್ಚಿನ ಹುಡುಕಾಟ ನಡೆದಿದೆ. what is ಪದಗುಚ್ಛದ ಹುಡುಕಾಟದಲ್ಲಿ ಬ್ಲಾಕ್ ಫಂಗಸ್ ಹೆಸರಿನ ಮೇಲೆ ಹೆಚ್ಚು ಹುಡುಕಾಟ ನಡೆದಿದೆ.

7 / 9
ಬಾಲಿವುಡ್ ಗಾಸಿಪ್ಗಳು, ಬಾಲಿವುಡ್ ಮಂದಿಯ ದಿನಚರಿಯ ಬಗ್ಗೆ ಜನರಿಗೆ ಎಲ್ಲಿಲ್ಲದ ಅಸಕ್ತಿ ಇದ್ದೆ ಇದೆ. ಈ ಆಸಕ್ತಿ ಈ ವರ್ಷವೂ ಕುಡ ಮುಂದುವರೆದಿದ್ದು, ಬಾಲಿವುಡ್ ಮಂದಿಯ ಬಗ್ಗೆ ಗೂಗಲ್ನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದ್ದಾರೆ. ಅದರಲ್ಲೂ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್, ವಿಕ್ಕಿ ಕೌಶಲ್, ಶೆಹನಾಜ್ ಗಿಲ್ ಮತ್ತು ರಾಜ್ ಕುಂದ್ರಾ ಬಗ್ಗೆ ಹೆಚ್ಚಿನ ಜನರು ಗೂಗಲ್ನಲ್ಲಿ ಮಾಹಿತಿಯನ್ನು ಜಾಲಾಡಿದ್ದಾರೆ.

8 / 9
ತಮಿಳು ಚಲನಚಿತ್ರ ಜೈ ಭೀಮ್ (Jai Bhim) ಚಲನಚಿತ್ರಗಳ ಪಟ್ಟಿಯಲ್ಲಿ ಇತರರನ್ನು ಹಿಂದಿಕ್ಕಿ ಅಗ್ರ ಸ್ಥಾನದಲ್ಲಿದೆ. ಹಾಗಾಗಿ ಈ ವರ್ಷ ಭಾರತದಲ್ಲಿನ ಗೂಗಲ್ ಬಳಕೆದಾರರ ಆಸಕ್ತಿಯನ್ನು ಸೆಳೆಯುವಲ್ಲಿ ಪ್ರಾದೇಶಿಕ ಸಿನಿಮಾ (Regional Cinema) ಯಶಸ್ವಿಯಾಗಿವೆ.

9 / 9
ಈ ವರ್ಷ ಭಾರತದಲ್ಲಿ ಗೂಗಲ್ನಲ್ಲಿ ಟಾಪ್ ಟ್ರೆಂಡಿಂಗ್ ರೆಸಿಪಿಗಳು 'ಎನೋಕಿ ಮಶ್ರೂಮ್ಸ್' (Enoki Mushrooms) ಆಗಿದ್ದು, 'ಮೋದಕ್' ಮತ್ತು 'ಕುಕೀಸ್' ಕೂಡ ಪ್ರಮುಖ ಪ್ರಶ್ನೆಗಳಲ್ಲಿವೆ. ಗೂಗಲ್ ಈ ವರ್ಷ ತನ್ನ ವೆಬ್ಸೈಟ್ನಲ್ಲಿ ಹುಡುಕಲಾದ ಟಾಪ್ ರೆಸಿಪಿಗಳಲ್ಲಿ 'ಮೇಥಿ ಮಟರ್ ಮಲೈ' ಮತ್ತು 'ಪಾಲಕ್' ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ 'ಕಡಾ' ಬಗ್ಗೆ ಕೂಡ ಸರ್ಚ್ ಮಾಡಿದ್ದಾರೆ ಎಂದು ಹೇಳಿದೆ