ಮಾರುಕಟ್ಟೆಯಲ್ಲೀಗ ಬಿಡುಗಡೆ ಆಗುತ್ತಿರುವ ಬಹುತೇಕ ಸ್ಮಾರ್ಟ್ಫೋನ್ಗಳು (Smartphone) 5000mAh ಬ್ಯಾಟರಿಯೊಂದಿಗೆ ಆವೃತ್ತವಾಗಿರುತ್ತದೆ. ಹೆಚ್ಚು ಎಂದರೆ 7000mAh ಬ್ಯಾಟರಿಯ ಫೋನ್ ಮಾರುಕಟ್ಟೆಯಲ್ಲಿ ಸೇಲ್ ಆಗುತ್ತಿದೆ. ಆದರೆ, ಬಳಕೆದಾರರಿಗೆ ಇದು ಸಾಕಾಗುವುದಿಲ್ಲ. ಅತ್ಯಂತ ವೇಗವಾಗಿ ಚಾರ್ಜ್ ಆಗುವ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ನೀಡಿದರೂ ಅನೇಕರಿಗೆ ತೃಪ್ತಿಯಿಲ್ಲ. ಇದಕ್ಕಾಗಿ ಪವರ್ ಬ್ಯಾಂಕ್ (Power Bank) ಬಳಕೆ ಮಾಡುತ್ತಾರೆ. ಹೌದು, ಪಕ್ಕದಲ್ಲೆ ಇಟ್ಟುಕೊಂಡು ಚಾರ್ಜ್ ಮಾಡಬಹುದಾದ ಅಥವಾ ಪ್ರಯಾಣದ ವೇಳೆ ಚಾರ್ಜ್ ಮಾಡಬಹುದಾದ ಪವರ್ ಬ್ಯಾಂಕ್ ಅನ್ನು ಅನೇಕ ಜನರು ಉಪಯೋಗಿಸುತ್ತಾರೆ. ಇದೀಗ ಪವರ್ ಬ್ಯಾಂಕ್ ಸುದ್ದಿ ಯಾಕೆಂದರೆ, ಚೀನಾದಲ್ಲಿ (China) ಓರ್ವ ವ್ಯಕ್ತಿ ವಿಶ್ವದ ಅತ್ಯಂತ ದೊಡ್ಡ ಸಾಮರ್ಥ್ಯವಿರುವ ಪವರ್ ಬ್ಯಾಂಕ್ ಒಂದನ್ನು ನಿರ್ಮಿಸಿದ್ದಾರೆ.
ಶಾಕಿಂಗ್ ವಿಚಾರ ಎಂದರೆ ಇದರಿಂದ ಏಕಕಾಲದಲ್ಲಿ ಬರೋಬ್ಬರಿ 5 ಸಾವಿರಕ್ಕಿಂತಲೂ ಅಧಿಕ ಸ್ಮಾರ್ಟ್ಫೋನ್ಗಳನ್ನು ಚಾರ್ಜ್ ಮಾಡಬಹುದಾಗಿದೆ. ಚೀನಾ ಮೂಲಕ ಎಲೆಕ್ಟ್ರಾನಿಕ್ಸ್ ಹ್ಯಾಂಡಿ ಗೆಂಗ್ ಎಂಬವರು ಇದನ್ನು ತಯಾರು ಮಾಡಿದ್ದು, ಇದು 27,000,000mAh ಸಾಮರ್ಥ್ಯ ಹೊಂದಿದೆ. ಹ್ಯಾಂಡಿ ಗೆಂಗ್ ಜನವರಿಯಲ್ಲಿ ಯೂಟ್ಯೂಬ್‌ನಲ್ಲಿ ತಾನು ತಯಾರಿಸಿದ್ದ ಪವರ್ ಬ್ಯಾಂಕ್ನ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು ಪವರ್ ಬ್ಯಾಂಕ್ ಅನ್ನು ತಯಾರಿಸುವ ಪ್ರಕ್ರಿಯೆಯನ್ನು ಕೂಡ ವಿವರಿಸಿದ್ದಾರೆ.
ಪ್ರತಿಯೊಬ್ಬರು ನನಗಿಂತ ದೊಡ್ಡ ಪವರ್ ಬ್ಯಾಂಕ್ ಅನ್ನು ಹೊಂದಿದ್ದಾರೆ. ಈ ಕಾರಣಕ್ಕೆ ನಾನು ಸಂತೋಷವಾಗಿಲ್ಲ. ಹಾಗಾಗಿ ನಾನು 27,000,000mAh ಪೋರ್ಟಬಲ್ ಚಾರ್ಜರ್ ಪವರ್ ಬ್ಯಾಂಕ್ ಅನ್ನು ತಯಾರಿಸಿದ್ದೇನೆ ಎಂದು ಹ್ಯಾಂಡಿ ಗೆಂಗ್ ಹೇಳಿದ್ದಾರೆ. MySmartPrice ಮಾಡಿರುವ ವರದಿಯ ಪ್ರಕಾರ, ಗೆಂಗ್ ತನ್ನ ಪವರ್ ಬ್ಯಾಂಕ್ 3,000mAh ಬ್ಯಾಟರಿಗಳೊಂದಿಗೆ 5,000 ಫೋನ್‌ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ. ಆದರೆ, ಇದರ ಬೆಲೆ ಬಗ್ಗೆ ಅವರು ಹಂಚಿಕೊಂಡಿಲ್ಲ. ಯಾಕೆಂದರೆ ಇದು ಮಾರಾಟಕ್ಕೆ ಲಭ್ಯವಿಲ್ಲ.
ಈ ಪವರ್ಫುಲ್ ಪವರ್ ಬ್ಯಾಂಕ್ 5.9×3.9 ಅಡಿ ಉದ್ದವಾಗಿದೆ. ಬೃಹತ್ ಸಾಧನವು ರಕ್ಷಣಾತ್ಮಕ ಚೌಕಟ್ಟನ್ನು ಹೊಂದಿದೆ ಮತ್ತು ಸುಮಾರು 60 ಪೋರ್ಟ್‌ಗಳನ್ನು ಒಳಗೊಂಡಿದೆ. ಇದು ಅದರ ಔಟ್‌ಪುಟ್ ಚಾರ್ಜಿಂಗ್ ಕನೆಕ್ಟರ್‌ಗಳ ಮೂಲಕ 220V ವಿದ್ಯುತ್ ವೋಲ್ಟೇಜ್ ಅನ್ನು ಬೆಂಬಲಿಸುತ್ತದೆ. ಅಷ್ಟು ಮಾತ್ರವಲ್ಲದೆ ಟಿವಿ, ವಾಷಿಂಗ್ ಮೆಷಿನ್‌ಗಳಂತಹ ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಲಾಯಿಸಬಹುದು ಮತ್ತು ಈ ಪವರ್ ಬ್ಯಾಂಕ್‌ನೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಚಾರ್ಜ್ ಮಾಡಬಹುದು.
ಈ ಪವರ್ ಬ್ಯಾಂಕ್ ಅನ್ನು ಒಂದು ಕಡೆಯಿಂದ ಮತ್ತೊಂದೆಡೆ ಸಾಗಿಸಲು ಚಕ್ರಗಳನ್ನು ಜೋಡಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟ್ಯಾಂಡರ್ಡ್ ಪವರ್ ಬ್ಯಾಂಕ್‌ಗಿಂತ ಇದು ಹೆಚ್ಚು ಭಿನ್ನವಾಗಿರುವುದಿಲ್ಲ, ಕೇವಲ ದೊಡ್ಡದಾಗಿದೆ. ಪ್ರಯಾಣದ ಸಮಯದಲ್ಲಿ ಸಾಗಿಸಲು ಇದು ತುಂಬಾ ದೊಡ್ಡದಾಗಿದ್ದರೂ, ಮನೆಗಳಲ್ಲಿ ವಿದ್ಯುತ್ ಕಡಿತದ ಸಮಸ್ಯೆಗೆ ಇದೊಂದು ಉತ್ತಮ ಸಾಧನವಾಗಿದೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಡಿಸ್ ಪ್ಲೇಯನ್ನು ಹೀಗೂ ಉಪಯೋಗಿಸಬಹುದು: ಒಮ್ಮೆ ಟ್ರೈ ಮಾಡಿ