ಭಾರತದಲ್ಲಿ 5ಜಿ ಯುಗ ಆರಂಭವಾದ ಬಳಿಕ ಬಜೆಟ್ ಬೆಲೆಗೆ 5G ಬೆಂಬಲವಿರುವ ಸ್ಮಾರ್ಟ್ಫೋನ್ಗಳು (5G Smartphones) ಅನಾವರಣಗೊಳ್ಳುತ್ತಿದೆ. ಅದುಕೂಡ ಅತ್ಯುತ್ತಮ ಬ್ರಾಂಡ್‌ಗಳಿಂದ ಬಂದ ಫೋನ್ಗಳೇ ಆಗಿದೆ. ಈ ಫೋನ್‌ಗಳು ಆಕರ್ಷಕ ಫೀಚರ್ಸ್ ಮತ್ತು ವಿನ್ಯಾಸದ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ. ಡಿಸ್ ಪ್ಲೇ, ಪ್ರೊಸೆಸರ್, RAM, ಕ್ಯಾಮೆರಾ ಗುಣಮಟ್ಟ ಮತ್ತು ಹೆಚ್ಚಿನ ಬ್ಯಾಟರಿ ಬಾಳಿಕೆ ಎಲ್ಲವೂ ಇದರಲ್ಲಿದೆ. ಪ್ರಸಿದ್ಧ ಸ್ಮಾರ್ಟ್ ಫೋನ್ ಬ್ರ್ಯಾಂಡ್‌ಗಳಾದ ಶವೋಮಿ, ಟೆಕ್ನೋ, ವಿವೋ ಮತ್ತು ಪೋಕೋ ದಂತಹ ಉನ್ನತ ದರ್ಜೆಯ 5ಜಿ ಫೋನ್‌ಗಳು 15,000 ರೂ. ಒಳಗಡೆ ಲಭ್ಯವಿದೆ. ಅವುಗಳು ಯಾವುದು ಎಂಬುದನ್ನು ನೋಡೋಣ.
ರೆಡ್ಮಿ 12 5G: ಇದು 6.79-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಬಲಿಷ್ಠವಾದ ಕ್ವಾಲ್ಕಮ್ ಸ್ನಾಪ್ಡ್ರಾಗನ್ 4 Gen 2 ಪ್ರೊಸೆಸರ್ ಹೊಂದಿದೆ. 50MP ಮುಖ್ಯ ಕ್ಯಾಮೆರಾದೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 8MP ಕ್ಯಾಮೆರಾ ಇದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 OS ಅನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 4GB+128GB ರೂಪಾಂತರಕ್ಕೆ ರೂ. 10,999, 6GB+128GB ರೂಪಾಂತರಕ್ಕೆ ರೂ. 12,499 ಮತ್ತು 8GB+256GB ಮಾದರಿಗೆ ರೂ. 14,499 ಆಗಿದೆ.
ಟೆಕ್ನೋ ಪೋವಾ 5 ಪ್ರೊ: ಈ ಫೋನ್ 6.78-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇ, 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಇದೆ. ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾ ಇದೆ. 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 ಮೂಲಕ ಕಾರ್ಯನಿರ್ವಹಿಸುತ್ತದೆ. ಇದರ ಬೆಲೆ 8GB+128GB ವೇರಿಯಂಟ್‌ಗೆ 14,999 ಮತ್ತು 8GB+256GB ಮಾದರಿಗೆ 15,999 ರೂ.
ಕುತೂಹಲ ಕೆರಳಿಸಿದ ಒನ್ಪ್ಲಸ್ 12 5G ಸ್ಮಾರ್ಟ್‌ಫೋನ್: ಬಿಡುಗಡೆ ಯಾವಾಗ?, ಏನಿದೆ ಫೀಚರ್ಸ್?
ವಿವೋ Y27: ಈ ಫೋನ್ 6.64 ಇಂಚಿನ IPS LCD ಪೂರ್ಣ HD ಪ್ಲಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹಿಲಿಯೊ G85 ಚಿಪ್ ಸೆಟ್ ನೀಡಲಾಗಿದೆ. ಹಿಂಭಾಗದಲ್ಲಿ 50MP ಮತ್ತು 2MP ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಇದೆ. 44W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 ಅನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದು 6GB RAM, 128GB ಸ್ಟೋರೇಜ್ ರೂಪಾಂತರದ ಬೆಲೆ 14,999ರೂ. ಆಗಿದೆ.
ಪೋಕೋ M6 ಪ್ರೊ 5G: ಈ ಫೋನ್ 6.79 ಇಂಚಿನ ಪೂರ್ಣ HD ಪ್ಲಸ್, 90 Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ಕ್ವಾಲ್ಕಮ್ ಸ್ನಾಪ್ಡ್ರಾಗನ್ 4Gen2 ಚಿಪ್‌ಸೆಟ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 50MP ಮತ್ತು 2MP ಕ್ಯಾಮೆರಾಗಳು ಮತ್ತು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ಸೆಟಪ್ ಇದೆ. 18W ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ 5000mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 ಅನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. 4GB+64GB ರೂಪಾಂತರದ ಬೆಲೆ ರೂ. 10,999, 6GB+128GB ಬೆಲೆ ರೂ. 12,999 ಆಗಿದೆ.
ಒಪ್ಪೋ A58 4ಜಿ: ಇದು 6.72-ಇಂಚಿನ ಪೂರ್ಣ HD ಪ್ಲಸ್ LCD ಡಿಸ್ಪ್ಲೇ ಹೊಂದಿದೆ. ಮೀಡಿಯಾಟೆಕ್ ಹಿಲಿಯೊ G85 ಚಿಪ್ ಸೆಟ್‌ನೊಂದಿಗೆ ಬರುತ್ತದೆ. ಹಿಂಭಾಗದಲ್ಲಿ 50MP, 2MP ಮತ್ತು 8MP ಸೆಲ್ಫಿ ಕ್ಯಾಮೆರಾಗಳಿವೆ. 33W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 500mAh ಬ್ಯಾಟರಿ ಇದೆ. ಇದು ಆಂಡ್ರಾಯ್ಡ್ 13 OS ಅನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. 6GB RAM, 128GB ಸ್ಟೋರೇಜ್ ರೂಪಾಂತರದ ಬೆಲೆ 14,999 ರೂ..
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ