ಬಜೆಟ್ ಪ್ರಿಯರು ಸಿದ್ಧರಾಗಿ: ಭಾರತಕ್ಕೆ ಬರುತ್ತಿದೆ ರಿಯಲ್ ಮಿಯ ಅತಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್
Realme C51 India Launch: ರಿಯಲ್ ಮಿ C51 ಸ್ಮಾರ್ಟ್‌ಫೋನ್ ಕಳೆದ ತಿಂಗಳು ತೈವಾನ್‌ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಕಂಪನಿಯು ಭಾರತದಲ್ಲಿ ಅದೇ ರೂಪಾಂತರವನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಫೋನ್ 720x1600 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.7-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ.
ಭಾರತದಲ್ಲಿ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವುದರಲ್ಲಿ ರಿಯಲ್ ಮಿ ಸಂಸ್ಥೆ ಎತ್ತಿದ ಕೈ. ಅದರಲ್ಲೂ ತನ್ನ C-ಸರಣಿಯ ಅಡಿಯಲ್ಲಿ ಒಂದಲ್ಲ ಒಂದು ಫೋನ್ ಅನ್ನು ರಿಲೀಸ್ ಮಾಡುತ್ತಲೇ ಇರುತ್ತದೆ. ಇದೀಗ ಇದೇ ಸರಣಿ ಅಡಿಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನಾವರಣ ಮಾಡಲು ಸಿದ್ಧವಾಗಿದೆ. ಚೀನಾದ ಸ್ಮಾರ್ಟ್‌ಫೋನ್ ತಯಾರಕರು ಭಾರತದಲ್ಲಿ ರಿಯಲ್ ಮಿ ಸಿ 51 (Realme C51) ಸ್ಮಾರ್ಟ್ಫೋನನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದೆ.
ರಿಯಲ್ ಮಿ ಇಂಡಿಯಾ ತನ್ನ ಎಕ್ಸ್ ಖಾತೆಯಲ್ಲಿ (ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಈ ಸ್ಮಾರ್ಟ್‌ಫೋನ್ನ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿದೆ. “ಚಾಂಪಿಯನ್ ಈಸ್ ಕಮಿಂಗ್! #ChampionIsComing #StayTuned,” ಎಂದು ರಿಯಲ್ ಮಿ ಇಂಡಿಯಾ ಪೋಸ್ಟ್ ಮಾಡಿದೆ.
ಇಲ್ಲಿದೆ ನೋಡಿ ರಿಯಲ್ ಮಿ ಮಾಡಿರುವ ಟ್ವೀಟ್:
Buckle up as the newest champion is coming soon in town! #ChampionIsComing #StayTuned
Know more: https://t.co/iMvs0OycoG pic.twitter.com/rReU4tbCMw
— realme (@realmeIndia) August 25, 2023
ರಿಯಲ್ ಮಿ C51 ಸ್ಮಾರ್ಟ್‌ಫೋನ್ ಕಳೆದ ತಿಂಗಳು ತೈವಾನ್‌ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಕಂಪನಿಯು ಭಾರತದಲ್ಲಿ ಅದೇ ರೂಪಾಂತರವನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಈ ಫೋನ್ 720×1600 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.7-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಮತ್ತು 560 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್ ಅನ್ನು ನೀಡುತ್ತದೆ. ಆಕ್ಟಾ-ಕೋರ್ ಯುನಿಸಾಕ್ ಟಿ612 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.
ಗಾಬರಿ ಬೇಡ, ಎಐ ಟೆಕ್ನಾಲಜಿ ನಮ್ಮ ಉದ್ಯೋಗ ಕಸಿಯಲ್ಲ; ಹೆಚ್ಚು ಕೆಲಸ ಸೃಷ್ಟಿಸುತ್ತೆ: ಟಾಟಾ ಸನ್ಸ್ ಛೇರ್ಮನ್ ಅನಿಸಿಕೆ
ರಿಯಲ್ ಮಿ C51 ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹಣೆಯನ್ನು ಬರುವ ನಿರೀಕ್ಷೆ ಇದೆ. ಮೈಕ್ರೊ SD ಕಾರ್ಡ್ ಅನ್ನು ಅಳವಡಿಸುವ ಮೂಲಕ ಬಳಕೆದಾರರು ಸಂಗ್ರಹಣೆಯನ್ನು ಇನ್ನಷ್ಟು ವಿಸ್ತರಿಸಬಹುದು. ಈ ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬರುತ್ತದೆ ಮತ್ತು ರಿಯಲ್ ಮಿ ಯುಐ ಟಿ ಆವೃತ್ತಿಯೊಂದಿಗೆ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್‌ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 50 ಮೆಗಾ ಪಿಕ್ಸೆಲ್ ಮುಖ್ಯ ಸಂವೇದಕದೊಂದಿಗೆ f/1.8 ಅಪಾರ್ಚರ್ ಹೊಂದಿದೆ. f/2.0 ಅಪಾರ್ಚರ್ನೊಂದಿಗೆ 5MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ.
ಈ ಬಜೆಟ್ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ನೊಂದಿಗೆ ಬರುತ್ತದೆ ಮತ್ತು ಇದು 33W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Sat, 26 August 23