AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಬರಿ ಬೇಡ, ಎಐ ಟೆಕ್ನಾಲಜಿ ನಮ್ಮ ಉದ್ಯೋಗ ಕಸಿಯಲ್ಲ; ಹೆಚ್ಚು ಕೆಲಸ ಸೃಷ್ಟಿಸುತ್ತೆ: ಟಾಟಾ ಸನ್ಸ್ ಛೇರ್ಮನ್ ಅನಿಸಿಕೆ

Tata Sons Chairman on AI: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಿಂದ ಉದ್ಯೋಗ ಸೃಷ್ಟಿ ಹೆಚ್ಚೆಚ್ಚು ಆಗುತ್ತದೆ. ಕೆಲಸದ ಗುಣಮಟ್ಟ ಹೆಚ್ಚುತ್ತದೆ. ಕಡಿಮೆ ಕೌಶಲ್ಯ ಇರುವವರೂ ಉನ್ನತ ಮಟ್ಟದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ಅಭಿಪ್ರಾಯಪಟ್ಟಿದ್ದಾರೆ.

ಗಾಬರಿ ಬೇಡ, ಎಐ ಟೆಕ್ನಾಲಜಿ ನಮ್ಮ ಉದ್ಯೋಗ ಕಸಿಯಲ್ಲ; ಹೆಚ್ಚು ಕೆಲಸ ಸೃಷ್ಟಿಸುತ್ತೆ: ಟಾಟಾ ಸನ್ಸ್ ಛೇರ್ಮನ್ ಅನಿಸಿಕೆ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2023 | 9:40 PM

Share

ನವದೆಹಲಿ, ಆಗಸ್ಟ್ 25: ಕೃತಕ ಬುದ್ಧಿಮತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI- Artificial Intelligence) ಅಳವಡಿಕೆಯಿಂದ ಸಾಕಷ್ಟು ಉದ್ಯೋಗಗಳು ನಶಿಸಲಿವೆ ಎನ್ನುವಂತಹ ಆತಂಕದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವುದನ್ನು ನೋಡಿರಬಹುದು. ಆದರೆ, ಭಾರತದ ಟಾಪ್ ಎಕ್ಸಿಕ್ಯೂಟಿವ್ ಆಗಿರುವ ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ (Tata Sons Chairman N Chandrashekaran) ಅವರ ಪ್ರಕಾರ ಎಐ ಟೆಕ್ನಾಲಜಿಯಿಂದ ಉದ್ಯೋಗ ನಷ್ಟವಾಗುವುದಿಲ್ಲ. ಬದಲಾಗಿ ಉದ್ಯೋಗಿಗಳನ್ನು ಹೆಚ್ಚು ಸಶಕ್ತರನ್ನಾಗಿಸುತ್ತದೆ. ಎನ್ ಚಂದ್ರಶೇಖರನ್ ಅವರು ಆಗಸ್ಟ್ 25ರಂದು ಇಲ್ಲಿ ನಡೆದ ಬಿ20 ಸಮಿಟ್ ಇಂಡಿಯಾ 2003 ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಚಾರದಲ್ಲಿ ನೆಲಸಿರುವ ಆತಂಕವನ್ನ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ.

‘ನಮ್ಮದಂಥ ದೇಶದಲ್ಲಿ ಎಐನಿಂದ ಉದ್ಯೋಗಸೃಷ್ಟಿ ಆಗುತ್ತದೆ. ಯಾಕೆಂದರೆ, ಕಡಿಮೆ ಕೌಶಲ್ಯ ಇರುವ ಅಥವಾ ಕೌಶಲ್ಯವೇ ಇಲ್ಲದಿರುವ ವ್ಯಕ್ತಿಗಳನ್ನು ಎಐ ಸಶಕ್ತಗೊಳಿಸುತ್ತದೆ. ಅವರು ಉನ್ನತ ಮಟ್ಟದ ಕೆಲಸಗಳನ್ನು ಮಾಡಲು ಸಾಧ್ಯವಾಗಿಸುತ್ತದೆ. ಉದಾಹರಣೆಗೆ, ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುವ ವ್ಯಕ್ತಿಯು ಒಬ್ಬ ವೈದ್ಯ ಮಾಡುವ ಕೆಲಸಗಳನ್ನು ಮಾಡಬಹುದು. ಇದರಿಂದ ವೈದ್ಯರ ವರ್ಕ್​ಲೋಡ್ ಕಡಿಮೆ ಆಗುತ್ತದೆ. ಈ ರೀತಿ ನಾವು ಉನ್ನತೀಕರಿಸಬಹುದು’ ಎಂದು ಟಾಟಾ ಸನ್ಸ್ ಛೇರ್ಮನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಆಮದಾಗುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಸಿಕ್ಕಾಪಟ್ಟೆ ಇಳಿಕೆ ಆಗಲಿದೆಯಾ? ಟೆಸ್ಲಾ ಕಾರುಗಳ ಆಗಮನಕ್ಕೆ ವೇದಿಕೆ ಸಿದ್ಧವಾಗ್ತಿದೆಯಾ? ಇಲ್ಲಿದೆ ಡೀಟೇಲ್ಸ್

ಯಂತ್ರ ಬುದ್ಧಿಮತ್ತೆಯ ಪರಿಣಾಮ ಒಂದೊಂದು ಕ್ಷೇತ್ರದಲ್ಲಿ ವಿಭಿನ್ನವಾಗಿರುತ್ತದೆ ಎಂದು ಹೇಳುವ ಚಂದ್ರಶೇಖರನ್, ಆ ಬಗ್ಗೆ ವಿವರಣೆ ನೀಡಿದ್ದು ಹೀಗೆ:

‘ಭಾರತ ವಿಷಯವನ್ನೇ ತೆಗೆದುಕೊಳ್ಳೋಣ. ಕೋಟ್ಯಂತರ ಜನರಿಗೆ ಎಐ ಬಳಸಲು ಸಿಗುತ್ತದೆ ಎಂದಿಟ್ಟುಕೊಳ್ಳೋಣ. 25ರಿಂದ 30 ಕೋಟಿ ಜನರು ಮಾರುಕಟ್ಟೆ ಬರುತ್ತಾರೆ. ಇವರಿಗೆ ತಮ್ಮದೇ ರೀತಿಯಲ್ಲಿ ಮಾಹಿತಿ, ಸರಕು ಮತ್ತು ಸೇವೆಗಳು ಲಭ್ಯ ಇರುತ್ತದೆ. ಅದನ್ನು ಬಳಸಲು ತೊಡಗುತ್ತಾರೆ. ಆಗ ಜಿಡಿಪಿ ಬೇರೆ ಮಟ್ಟಕ್ಕೇ ಹೋಗುತ್ತದೆ. ಆ ಬಳಿಕ ತಲಾದಾಯ ಹೆಚ್ಚಾಗುತ್ತದೆ. ಇದು ಬಹಳ ಬಹಳ ದೀರ್ಘ ಕಾಲ ಲಾಭ ತರುತ್ತದೆ’ ಎಂದು ಚಂದ್ರಶೇಖರನ್ ವಿವರಿಸಿದ್ದಾರೆ.

ಇದನ್ನೂ ಓದಿ: 5 ವರ್ಷದ ಸೇವೆಗಿಂತ ಮುನ್ನವೇ ಗ್ರಾಚುಟಿ ಪಡೆಯಲು ಸಾಧ್ಯವಾ? ಇಲ್ಲಿದೆ ಡೀಟೇಲ್ಸ್

ಎಐ ಯಾಕೆ ಮುಖ್ಯ ಎಂಬುದನ್ನು ವಿಶದಪಡಿಸಿದ ಟಾಟಾ ಸನ್ಸ್ ಛೇರ್ಮನ್, ಮಾಡಲು ಇರುವ ಬಹಳಷ್ಟು ಕೆಲಸಗಳನ್ನು ಎಐ ಸುಲಭವಾಗಿಸುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಭಿನ್ನ ಭಿನ್ನ ಪ್ರಮಾಣದಲ್ಲಿ ಉದ್ಯೋಗಸೃಷ್ಟಿಯಾಗುತ್ತದೆ. ಮಾನವ ಸಂಪನ್ಮೂಲ ಇಲ್ಲದ ಕಡೆ ಯಂತ್ರ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು