AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ವರ್ಷದ ಸೇವೆಗಿಂತ ಮುನ್ನವೇ ಗ್ರಾಚುಟಿ ಪಡೆಯಲು ಸಾಧ್ಯವಾ? ಇಲ್ಲಿದೆ ಡೀಟೇಲ್ಸ್

Gratuity Rules: ಗ್ರಾಚುಟಿ ವಿಚಾರದಲ್ಲಿ ಬಹಳ ಮಂದಿಗೆ ಗೊಂದಲ ಇದೆ. ಗ್ರಾಚುಟಿ ಪಡೆಯಲು ಒಬ್ಬ ಉದ್ಯೋಗಿ ಒಂದು ಕಂಪನಿಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿರಬೇಕು ಎಂಬ ಭಾವನೆ ಇದೆ. ಆದರೆ, 4 ವರ್ಷ 6 ತಿಂಗಳು ಸೇವೆ ಪೂರ್ಣಗೊಳಿಸಿದರೂ ಒಬ್ಬ ಉದ್ಯೋಗಿ ಗ್ರಾಚುಟಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಾಯ್ದೆಯ ಒಂದು ಅಂಶ ಹೇಳುತ್ತದೆ.

5 ವರ್ಷದ ಸೇವೆಗಿಂತ ಮುನ್ನವೇ ಗ್ರಾಚುಟಿ ಪಡೆಯಲು ಸಾಧ್ಯವಾ? ಇಲ್ಲಿದೆ ಡೀಟೇಲ್ಸ್
ಉದ್ಯೋಗಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2023 | 7:50 PM

Share

ಗ್ರಾಚುಟಿ ಎಂಬುದು ಒಂದು ಕಂಪನಿ ವತಿಯಿಂದ ಉದ್ಯೋಗಿಗಳಿಗೆ ನೀಡುವ ಗೌರವಧನ. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿ ಹೊರ ಹೋಗುವ ಉದ್ಯೋಗಿಗಳಿಗೆ ಗ್ರಾಚುಟಿ (Gratuity) ನೀಡಲಾಗುತ್ತದೆ. ಒಬ್ಬ ಉದ್ಯೋಗಿ ಗ್ರಾಚುಟಿ ಪಡೆಯಬೇಕಾದರೆ ಒಂದು ಸಂಸ್ಥೆಯಲ್ಲಿ ನಿರಂತರವಾಗಿ 5 ವರ್ಷ ಕೆಲಸ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ, ಇದೇ ಪೂರ್ಣ ಸತ್ಯವಲ್ಲ. ಈ ವಿಚಾರದಲ್ಲಿ ಸಂಸ್ಥೆಗಳು ಮತ್ತು ಉದ್ಯೋಗಿಗಳು ಇಬ್ಬರಿಗೂ ಗೊಂದಲ ಇದೆ. 1972 ಗ್ರಾಚುಟಿ ಕಾಯ್ದೆ ಏನು ಹೇಳುತ್ತದೆ ಎಂಬ ವಿವರ ಇಲ್ಲಿದೆ.

ಈ ಗ್ರಾಚುಟಿ ಕಾಯ್ದೆ ಪ್ರಕಾರ ಒಬ್ಬ ಉದ್ಯೋಗಿ ಗ್ರಾಚುಟಿ ಪಡೆಯಲು ಒಂದೇ ಕಂಪನಿಯಲ್ಲಿ ನಿರಂತರವಾಗಿ 5 ವರ್ಷ ಕೆಲಸ ಮಾಡಿರಬೇಕು ಎಂದಇಲ್ಲ. 4.8 ವರ್ಷಕ್ಕಿಂತ ಕಡಿಮೆ ಅವಧಿ ಕೆಲಸ ಮಾಡಿದರೂ ಗ್ರಾಚುಟಿ ಪಡೆಯಬಹುದು.

ಗ್ರಾಚುಟಿ ಕಾಯ್ದೆ ಮೂರು ಷರತ್ತುಗಳನ್ನು ಹೇಳುತ್ತದೆ. ಉದ್ಯೋಗಿಯು ಒಂದು ಕಂಪನಿಯನ್ನು ತೊರೆಯುವ ಮುನ್ನ ಅಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿರಬೇಕು ಎಂಬುದು ಮೊದಲ ಷರುತ್ತು. ಆದರೆ, ಮುಂದಿನೆರಡು ಷರತ್ತುಗಳು ತುಸು ವಿಭಿನ್ನವಾಗಿವೆ. ಒಂದು ಸಂಸ್ಥೆ ತನ್ನ ಉದ್ಯೋಗಿಗಳಿಗೆ ವಾರಕ್ಕೆ ಐದು ದಿನದ ಕೆಲಸದ ಸೌಲಭ್ಯ ನೀಡಿದರೆ, 4 ವರ್ಷ 190 ದಿನದ ಅವಧಿಯ ಸರ್ವಿಸ್ ಬಳಿಕ ಗ್ರಾಚುಟಿಯನ್ನು ಉದ್ಯೋಗಿ ಕ್ಲೇಮ್ ಮಾಡಬಹುದು. ಹಾಗೆಯೇ, 6 ದಿನದ ಕೆಲಸವಾಗಿದ್ದರೆ 4 ವರ್ಷ 240 ದಿನದ ಸೇವೆ ಬಳಿಕ ಗ್ರಾಚುಟಿ ಅನ್ವಯ ಆಗುತ್ತದೆ.

ಇದನ್ನೂ ಓದಿ: EPF: ಆರು ವರ್ಷದಲ್ಲಿ ಹೊಸದಾಗಿ ಇಪಿಎಫ್, ಇಎಸ್​ಐ, ಎನ್​ಪಿಎಸ್ ಪಡೆದವರ ಸಂಖ್ಯೆ 15 ಕೋಟಿಗೂ ಹೆಚ್ಚು

ತಜ್ಞರ ಪ್ರಕಾರ, ಒಬ್ಬ ಉದ್ಯೋಗಿ ಒಂದು ಕಂಪನಿಯಲ್ಲಿ ಕನಿಷ್ಠ 4 ವರ್ಷ 6 ತಿಂಗಳು ಕೆಲಸ ಮಾಡಿದರೂ ಸಾಕು ಗ್ರಾಚುಟಿ ಪಡೆಯಬಹುದಂತೆ. ಉದ್ಯೋಗಿ ಕೆಲಸ ಬಿಟ್ಟಾಗ ಮಾತ್ರ ಗ್ರಾಚುಟಿ ಸಿಗುತ್ತೆ ಎಂದಲ್ಲ, ಅವರು ಮೃತಪಟ್ಟಾಗಲೂ ಅವಲಂಬಿತರಿಗೆ ಗ್ರಾಚುಟಿ ಹಣ ವರ್ಗಾವಣೆ ಆಗುತ್ತದೆ. ಉದ್ಯೋಗಿ 5 ವರ್ಷ ಸೇವೆ ಪೂರ್ಣಗೊಳಿಸದೇ ಸತ್ತರೂ ಗ್ರಾಚುಟಿ ಹಣವನ್ನು ನಾಮಿನಿಗೆ ಕೊಡಬೇಕಾಗುತ್ತದೆ.

ಆದರೆ, ಕಾಂಟ್ರಾಕ್ಟ್ ಆಧಾರಿತ ಉದ್ಯೋಗಿಗಳಿಗೆ ಗ್ರಾಚುಟಿ ಸೌಲಭ್ಯ ಇರುವುದಿಲ್ಲ.

ಗ್ರಾಚುಟಿ ಎಷ್ಟು ಸಿಗುತ್ತದೆ?

ಒಬ್ಬ ಉದ್ಯೋಗಿಗೆ ಗ್ರಾಚುಟಿ ಎಷ್ಟು ನೀಡಲಾಗುತ್ತದೆ ಎಂಬ ಗೊಂದಲ ಬಹಳಷ್ಟು ಮಂದಿಗೆ ಇದೆ. ಅದನ್ನು ಲೆಕ್ಕಹಾಕಲು ಒಂದು ಸೂತ್ರ ಇದೆ.

ಗ್ರಾಚುಟಿ = N x B x 15 / 26

ಇಲ್ಲಿ N ಎಂಬುದು ಒಬ್ಬ ಉದ್ಯೋಗಿಯು ಒಂದು ಕಂಪನಿಯಲ್ಲಿ ಕೆಲಸ ಮಾಡಿದ ಅವಧಿ.

B ಎಂಬುದು ಕೊನೆಯ ಮೂಲ ಸಂಬಳ ಮತ್ತು ಡಿಎ ಮೊತ್ತ.

ಇದನ್ನೂ ಓದಿ: ಫೆಡ್​ಎಕ್ಸ್ ಹೆಸರಲ್ಲಿ ಫೋನ್ ಕಾಲ್ ಬಂದ್ರೆ ಹುಷಾರ್..! ಲಕ್ಷಾಂತರ ಹಣ ಕಳೆದುಕೊಳ್ತೀರಿ; ಬೆಂಗಳೂರಲ್ಲಿ ಹೆಚ್ಚುತ್ತಿದೆ ಕೊರಿಯರ್ ಸ್ಕ್ಯಾಮ್

ಉದಾಹರಣೆಗೆ ನೀವು ಒಂದು ಕಂಪನಿಯಲ್ಲಿ 10 ವರ್ಷ ಕೆಲಸ ಮಾಡಿ ಬಿಟ್ಟಿರುತ್ತೀರಿ. ನಿಮ್ಮ ಕೊನೆಯ ತಿಂಗಳ ಮೂಲ ಸಂಬಳ ಮತ್ತು ತುಟ್ಟಿಭತ್ಯೆ ಎರಡೂ ಸೇರಿ 40,000 ರೂ ಇರುತ್ತದೆ ಎಂದುಕೊಳ್ಳೋಣ. ಈಗ ಗ್ರಾಚುಟಿಯನ್ನು ಈ ರೀತಿ ಲೆಕ್ಕ ಹಾಕಬಹುದು.

10 x 40,000 x 15 / 26

ಗ್ರಾಚುಟಿ 2.31 ಲಕ್ಷ ರೂ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ