ಆಮದಾಗುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಸಿಕ್ಕಾಪಟ್ಟೆ ಇಳಿಕೆ ಆಗಲಿದೆಯಾ? ಟೆಸ್ಲಾ ಕಾರುಗಳ ಆಗಮನಕ್ಕೆ ವೇದಿಕೆ ಸಿದ್ಧವಾಗ್ತಿದೆಯಾ? ಇಲ್ಲಿದೆ ಡೀಟೇಲ್ಸ್

EV Import Duty: ಕೇಂದ್ರ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ ನೀತಿ ರೂಪಿಸುತ್ತಿರುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಟೆಸ್ಲಾ ಸಂಸ್ಥೆ ಭಾರತದಲ್ಲಿ ಹೊಸ ಕಾರು ಉತ್ಪಾದನಾ ಘಟಕ ಸ್ಥಾಪಿಸುವ ಪ್ರಸ್ತಾಪದ ಬೆನ್ನಲ್ಲೇ ಈ ಸುದ್ದಿ ಬಂದಿದೆ. ಅದರ ಪ್ರಕಾರ ಶೇ. 70 ಮತ್ತು ಶೇ. 100ರಷ್ಟು ಇರುವ ಆಮದು ಸುಂಕವನ್ನು ಶೇ. 15ಕ್ಕೆ ಇಳಿಸಬಹುದು.

ಆಮದಾಗುವ ಎಲೆಕ್ಟ್ರಿಕ್ ವಾಹನಗಳ ಮೇಲಿನ ತೆರಿಗೆ ಸಿಕ್ಕಾಪಟ್ಟೆ ಇಳಿಕೆ ಆಗಲಿದೆಯಾ? ಟೆಸ್ಲಾ ಕಾರುಗಳ ಆಗಮನಕ್ಕೆ ವೇದಿಕೆ ಸಿದ್ಧವಾಗ್ತಿದೆಯಾ? ಇಲ್ಲಿದೆ ಡೀಟೇಲ್ಸ್
ಟೆಸ್ಲಾ ಕಾರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2023 | 8:45 PM

ನವದೆಹಲಿ, ಆಗಸ್ಟ್ 25: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಪುಷ್ಟಿ ಕೊಡುವ ನಿರೀಕ್ಷೆಯಲ್ಲಿ ಸರ್ಕಾರ ಹೊಸ ಇವಿ ನೀತಿ (New EV Policy) ತರಲು ಯೋಜಿಸಿಸುತ್ತಿದ್ದು, ಅದರಲ್ಲಿ ಕೆಲ ಷರತ್ತುಗಳ ಮೇಲೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಮದು ಸುಂಕ ಇಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಕಂಪನಿ (Tesla) ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ ಸ್ಥಾಪಿಸುವ ಪ್ರಸ್ತಾಪ ಸಲ್ಲಿಸಿದ ಬೆನ್ನಲ್ಲೇ ಸರ್ಕಾರ ಹೊಸ ಎಲೆಕ್ಟ್ರಿಕ್ ವಾಹನ ನೀತಿ ಜಾರಿಗೊಳಿಸಲು ಚಿಂತಿಸುತ್ತಿದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಇವಿ ಕ್ಷೇತ್ರದ ಅಧಿಕೃತ ಮೂಲವೊಂದರಿಂದ ತನಗೆ ಈ ಮಾಹಿತಿ ಸಿಕ್ಕಿರುವುದಾಗಿ ರಾಯ್ಟರ್ಸ್ ವರದಿಯಲ್ಲಿ ತಿಳಿಸಲಾಗಿದೆ.

ಪ್ರಸ್ತಾವಿತ ಇವಿ ನೀತಿ ಪ್ರಕಾರ, ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸುವ ವಿದೇಶೀ ಆಟೊಮೊಬೈಲ್ ಕಂಪನಿಗಳು ತಮ್ಮ ಕಾರುಗಳನ್ನು ಭಾರತಕ್ಕೆ ಕಡಿಮೆ ತೆರಿಗೆಗೆ ಆಮದು ಮಾಡಿಕೊಳ್ಳಬಹುದು. ಸದ್ಯ 40,000 ಡಾಲರ್​ಗಿಂತ (ಸುಮಾರು 33 ಲಕ್ಷ ರೂ) ಹೆಚ್ಚು ಬೆಲೆಯ ಒಂದು ಕಾರಿನ ಆಮದಿಗೆ ಶೇ. 100ರಷ್ಟು ಆಮದು ಸುಂಕ ಇದೆ. ಇತರ ಕಾರುಗಳ ಆಮದಿಗೆ ಶೇ. 70ರಷ್ಟು ಆಮದು ಸುಂಕ ಇದೆ. ಹೊಸ ನೀತಿ ಜಾರಿಯಾದರೆ ಕಾರುಗಳ ಮೇಲಿನ ಆಮದು ಸುಂಕ ಶೇ. 15ಕ್ಕೆ ಇಳಿಯುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: EPF: ಆರು ವರ್ಷದಲ್ಲಿ ಹೊಸದಾಗಿ ಇಪಿಎಫ್, ಇಎಸ್​ಐ, ಎನ್​ಪಿಎಸ್ ಪಡೆದವರ ಸಂಖ್ಯೆ 15 ಕೋಟಿಗೂ ಹೆಚ್ಚು

ಟೆಸ್ಲಾ ಸಂಸ್ಥೆ ಭಾರತದಲ್ಲಿ ಹೊಸ ಬ್ರ್ಯಾಂಡ್​ನ ಎಲೆಕ್ಟ್ರಿಕ್ ಕಾರನ್ನು ತಯಾರಿಸಲು ಯೋಜಿಸುತ್ತಿದೆ. 24,000 ಡಾಲರ್ (ಸುಮಾರು 20 ಲಕ್ಷ ರೂ) ಮೌಲ್ಯದ ಕಾರನ್ನು ಭಾರತದಲ್ಲಿ ತಯಾರಿಸಲು ಘಟಕ ಸ್ಥಾಪಿಸಲು ಆಸಕ್ತಿ ಹೊಂದಿರುವುದಾಗಿ ಟೆಸ್ಲಾ ಸಂಸ್ಥೆ ಕೇಂದ್ರ ವಾಣಿಜ್ಯ ಸಚಿವರ ಮುಂದೆ ಪ್ರಸ್ತಾಪ ಇಟ್ಟಿದೆ ಎಂಬ ಸುದ್ದಿಯನ್ನು ಇದೇ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ತಯಾರಿಕಾ ಘಟಕ ಸ್ಥಾಪನೆಗೆ ಬದಲಿಯಾಗಿ ಸರ್ಕಾರ ತನ್ನ ಇತರ ಕಾರುಗಳನ್ನು ಆಮದು ಮಾಡಲು ಅನುವು ಮಾಡಿಕೊಡಬೇಕು ಎಂಬ ಷರತ್ತನ್ನು ಟೆಸ್ಲಾ ಪ್ರತಿನಿಧಿಗಳು ಸರ್ಕಾರದ ಮುಂದಿಟ್ಟಿರುವುದು ತಿಳಿದುಬಂದಿದೆ.

ಸರ್ಕಾರ ಈ ಪ್ರಸ್ತಾಪಕ್ಕೆ ಒಪ್ಪಿರುವುದಾಗಲೀ, ಹೊಸ ಎವಿ ನೀತಿ ಜಾರಿಗೆ ತರುತ್ತಿರುವ ಸಂಗತಿಯಾಗಲೀ ಅಧಿಕೃತವಾಗಿ ಗೊತ್ತಾಗಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಮದು ಸುಂಕ ಇಳಿಸುವ ಯಾವ ಪ್ರಸ್ತಾಪವೂ ತಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Tata Nexon facelift: ಪವರ್ ಫುಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗೆ ಸಿದ್ದವಾಗಿರುವ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರ ಈಗ ಬೆಳೆಯತೊಡಗಿದೆ. ಸದ್ಯ ಒಟ್ಟಾರೆ ಕಾರು ವಾಹನಗಳ ಪೈಕಿ ಇವಿ ವಾಹನಗಳ ಸಂಖ್ಯೆ ಶೇ. 2 ಮಾತ್ರ ಇದೆ. ಆದರೆ, ಮುಂದಿನ ದಿನಗಳಲ್ಲಿ ಇವಿ ಮಾರುಕಟ್ಟೆ ಗಣನೀಯವಾಗಿ ಹೆಚ್ಚಾಗಲಿದೆ. ಭಾರತದಲ್ಲಿ ಟಾಟಾ ಮೋಟಾರ್ಸ್ ಮತ್ತು ಮಹೀಂದ್ರ ಕಂಪನಿಗಳು ಸದ್ಯ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿವೆ. ಸರ್ಕಾರವೇನಾದರೂ ಆಮದು ಸುಂಕವನ್ನು ಇಳಿಸಿದಲ್ಲಿ ಟೆಸ್ಲಾ ಸೇರಿದಂತೆ ಹಲವು ಕಂಪನಿಗಳ ಎಲೆಕ್ಟ್ರಿಕ್ ವಾಹನಗಳು ಭಾರತದ ಮಾರುಕಟ್ಟೆಗೆ ದಾಂಗುಡಿ ಇಡುವುದು ನಿಶ್ಚಿತ. ಈ ಬೆಳವಣಿಗೆ ನಿರೀಕ್ಷೆಯಲ್ಲಿ ನಿನ್ನೆಯಿಂದ ಟಾಟಾ ಮೋಟಾರ್ಸ್, ಮಹೀಂದ್ರ ಕಂಪನಿಗಳ ಷೇರುಗಳು ಇಳಿಯತೊಡಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ