ಜಿಯೋ ಬಳಕೆದಾರರಿಗೆ ಬಿಗ್ ಶಾಕ್: ಟ್ರೆಂಡಿಂಗ್ ಪ್ಲಾನ್ ಅನ್ನು ದಿಢೀರ್ ಸ್ಥಗಿತಗೊಳಿಸಿದ ಕಂಪನಿ

Jio discontinued Rs 119 prepaid recharge plan: ದೇಶದಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯ (ARPU) ವನ್ನು ಸುಧಾರಿಸುವ ನಿಟ್ಟಿನಲ್ಲಿ ರಿಲಯನ್ಸ್ ಜಿಯೋ ತನ್ನ ಅಗ್ಗದ 119 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಬಂದ್ ಮಾಡಿದೆ. ಸದ್ಯ, ಅಗ್ಗದ ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ 149 ರೂ. ಆಗಿದೆ.

ಜಿಯೋ ಬಳಕೆದಾರರಿಗೆ ಬಿಗ್ ಶಾಕ್: ಟ್ರೆಂಡಿಂಗ್ ಪ್ಲಾನ್ ಅನ್ನು ದಿಢೀರ್ ಸ್ಥಗಿತಗೊಳಿಸಿದ ಕಂಪನಿ
ರಿಲಾಯನ್ಸ್ ಜಿಯೋ
Follow us
|

Updated on: Aug 26, 2023 | 11:19 AM

ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಪ್ರಸಿದ್ಧ ರಿಲಯನ್ಸ್ ಜಿಯೋ (Reliance Jio) ಇದೀಗ ತನ್ನ ಬಳಕೆದಾರರಿಗೆ ಶಾಕ್ ನೀಡಿದೆ. ಹೆಚ್ಚಿನ ಬಳಕೆದಾರರು ಉಪಯೋಗಿಸುವ ಹಾಗೂ ಟ್ರೆಂಡಿಂಗ್​ನಲ್ಲಿದ್ದ ರಿಚಾರ್ಜ್ ಯೋಜನೆಯೊಂದನ್ನು ದಿಢೀರ್ ಆಗಿ ಸ್ಥಗಿತಗೊಳಿಸಿದೆ. ಜಿಯೋ ತನ್ನ ಅಗ್ಗದ 119 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಬಂದ್ ಮಾಡಿದೆ. ಈ ರೀಚಾರ್ಜ್ ಯೋಜನೆಯನ್ನು ಜಿಯೋದ ಅಧಿಕೃತ ವೆಬ್‌ಸೈಟ್ ಮತ್ತು MyJio ಅಪ್ಲಿಕೇಶನ್‌ನಿಂದ ತೆಗೆದುಹಾಕಲಾಗಿದೆ.

ದೇಶದಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯ (ARPU) ವನ್ನು ಸುಧಾರಿಸುವುದು ಈ ಬೆಳವಣಿಗೆಯ ಹಿಂದಿನ ಉದ್ದೇಶವಾಗಿದೆ. ಸದ್ಯ, ಅಗ್ಗದ ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ 149 ರೂ. ಆಗಿದೆ. ಇದು 20 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ. ಜಿಯೋದ 119 ರೂ. ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆ, 1.5GB ದೈನಂದಿನ ಡೇಟಾ ಮತ್ತು ದಿನಕ್ಕೆ 100 SMS ಅನ್ನು ಉಚಿತವಾಗಿ ನೀಡುತ್ತಿತ್ತು. ಈ ಪ್ಯಾಕ್ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಆದರೆ, ಯಾವುದೇ ಇತರ ಪ್ರಯೋಜನಗಳಿರಲಿಲ್ಲ.

ವಾಟ್ಸ್​ಆ್ಯಪ್​ನಲ್ಲಿ HD ವಿಡಿಯೋಗಳನ್ನು ಕಳುಹಿಸುವುದು ಹೇಗೆ?: ಬಂದಿದೆ ಬೆರಗುಗೊಳಿಸುವ ಫೀಚರ್

ಇದನ್ನೂ ಓದಿ
Image
Train Ticket Booking: IRCTCಯಲ್ಲಿ ರೈಲು ಟಿಕೆಟ್ ಬುಕ್ ಮಾಡುವಾಗ ಎಚ್ಚರಿಕೆ!​
Image
ತಕ್ಷಣ ಬುಕ್ ಮಾಡಿ: ಊಹಿಸಲಾಗದಷ್ಟು ಕಡಿಮೆ ಬೆಲೆಗೆ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಮಾರಾಟ
Image
ಗಾಬರಿ ಬೇಡ, ಎಐ ಟೆಕ್ನಾಲಜಿ ನಮ್ಮ ಉದ್ಯೋಗ ಕಸಿಯಲ್ಲ; ಹೆಚ್ಚು ಕೆಲಸ ಸೃಷ್ಟಿಸುತ್ತೆ: ಟಾಟಾ ಸನ್ಸ್ ಛೇರ್ಮನ್ ಅನಿಸಿಕೆ
Image
ಅತ್ಯಂತ ದುಬಾರಿ ಬೆಲೆಗೆ ಸೇಲ್ ಆಗಲಿದೆ ಒನ್​ಪ್ಲಸ್ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್

ಜಿಯೋ ಜೊತೆಗೆ, ಏರ್ಟೆಲ್ ಕೂಡ ಇತ್ತೀಚೆಗಷ್ಟೆ ತನ್ನ ಬಳಕೆದಾರರ ಸರಾಸರಿ ಆದಾಯ (ARPU) ವನ್ನು ಸುಧಾರಿಸುವ ನಿಟ್ಟಿನಲ್ಲಿ 99 ರೂ. ರೀಚಾರ್ಜ್ ಪ್ಯಾಕ್ ಅನ್ನು ಸ್ಥಗಿತಗೊಳಿಸಿತ್ತು. ಸದ್ಯ ಏರ್ಟೆಲ್​ನ ಅತ್ಯಂತ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಯು 155 ರೂ. ನದ್ದಾಗಿದೆ. 119 ರೂ. ರೀಚಾರ್ಜ್ ಕೊಡುಗೆಯನ್ನು ನಿಲ್ಲಿಸಿದ ನಂತರ ಜಿಯೋದ ಪ್ರಸ್ತುತ 149 ರೂ. ಪ್ಯಾಕ್‌ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ಜಿಯೋದ 149 ರೂ. ರೀಚಾರ್ಜ್ ಯೋಜನೆಯನ್ನು ಸ್ಥಗಿತಗೊಂಡಿರುವ 119 ರೂ. ಪ್ಯಾಕ್‌ಗೆ ಹೋಲಿಸಿದರೆ ಕೆಲವು ಹೆಚ್ಚುವರಿ ಪ್ರಯೋಜನಗಳೊಂದಿಗೆ ಬರುತ್ತದೆ. ಮೊದಲನೆಯದಾಗಿ, ಇದು ಚಂದಾದಾರರಿಗೆ 20 ದಿನಗಳ ಮಾನ್ಯತೆ, ಒಟ್ಟು 20GB ಡೇಟಾವನ್ನು (ಪ್ರತಿ ದಿನ 1GB ಡೇಟಾ) ಮತ್ತು ದಿನಕ್ಕೆ 100 SMS ಉಚಿತವಾಗಿ ನೀಡುತ್ತದೆ. ಈ ಯೋಜನೆಯೊಂದಿಗೆ ಬಳಕೆದಾರರು JioTV, JioCinema ಮತ್ತು JioCloud ಚಂದಾದಾರಿಕೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.

ಅಂತೆಯೆ ಏರ್ಟೆಲ್​ನ 155 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗೆ ಹೋಲಿಸಿದರೆ, ಇದು 24 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಅನಿಯಮಿತ ಧ್ವನಿ ಕರೆ ಮತ್ತು 1GB ಒಟ್ಟು ಡೇಟಾವನ್ನು ನೀಡುತ್ತದೆ. ಈ ಪ್ಯಾಕ್​ನಲ್ಲಿ 300 SMS ಅನ್ನು ಮಾತ್ರ ನೀಡುತ್ತದೆ. ಇತರ ಪ್ರಯೋಜನಗಳೆಂದರೆ ಉಚಿತ HelloTunes ಚಂದಾದಾರಿಕೆ ಮತ್ತು Wynk ಸಂಗೀತವನ್ನು ಒಳಗೊಂಡಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್