Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಂತ ದುಬಾರಿ ಬೆಲೆಗೆ ಸೇಲ್ ಆಗಲಿದೆ ಒನ್​ಪ್ಲಸ್ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್

OnePlus Open Foldable Phone Price leaked: ಒನ್​ಪ್ಲಸ್ ಕಂಪನಿಯ ಚೊಚ್ಚಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒನ್​ಪ್ಲಸ್​ ಓಪನ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಪ್ರತಿದಿನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ಈ ಫೋನ್ ಇದೀಗ ಬೆಲೆಯ ಬಗ್ಗೆ ಮಾಹಿತಿ ಸೋರಿಕೆ ಆಗಿದೆ. ಇಲ್ಲಿದೆ ಒನ್​ಪ್ಲಸ್ ಓಪನ್ ಫೋನಿನ ಬೆಲೆ.

Vinay Bhat
|

Updated on: Aug 25, 2023 | 4:21 PM

ಒನ್​ಪ್ಲಸ್ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒನ್​ಪ್ಲಸ್​ ಓಪನ್ ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರಿಲೀಸ್​ಗು ಮೊದಲೇ ಸಾಕಷ್ಟು ರೋಚಕತೆ ಸೃಷ್ಟಿಸಿರುವ ಈ ಫೋನಿನ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದೆ.

1 / 8
ಸದ್ಯ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ತಮ್ಮ X (Twitter) ನಲ್ಲಿ ಒನ್​ಪ್ಲಸ್ ಒಪನ್ ಬೆಲೆಯ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ. ಇವರು ಹೇಳಿರುವ ಪ್ರಕಾರ ಇದು ಅತ್ಯಂತ ದುಬಾರಿ ಒನ್​ಪ್ಲಸ್ ಸ್ಮಾರ್ಟ್‌ಫೋನ್ ಆಗಿರಬಹುದು ಎಂಬುದು ತಿಳಿದುಬಂದಿದೆ.

2 / 8
ಟಿಪ್‌ಸ್ಟರ್ ಪ್ರಕಾರ, ಒನ್​ಪ್ಲಸ್​ ಓಪನ್ ಬೆಲೆ 1.2 ಲಕ್ಷ ಆಸುಪಾಸಿನಲ್ಲಿ ಇರಲಿದೆಯಂತೆ. ಇದು ಇತ್ತೀಚೆಗಷ್ಟೆ ಬಿಡುಗಡೆ ಆದ ಸ್ಯಾಮ್​ಸಂಗ್ ಗ್ಯಾಲಕ್ಸಿ Z Fold 5 ಗೆ ಕಠಿಣ ಪೈಪೋಟಿ ನೀಡಲಿದೆ ಎನ್ನಲಾಗಿದೆ. ಗ್ಯಾಲಕ್ಸಿ Z Fold 5 ಬೆಲೆ 1,54,999 ರೂ. ಆಗಿದೆ.

3 / 8
ಸದ್ಯ ಮಾರುಕಟ್ಟೆಯಲ್ಲಿರುವ ಒನ್​ಪ್ಲಸ್​ ಕಂಪನಿಯ ಅತ್ಯಂತ ದುಬಾರಿ ಫೋನ್ ಎಂದರೆ ಅದು ಒನ್​ಪ್ಲಸ್ 10 ಪ್ರೊ. ಇದರ ಬೆಲೆ 71,999 ರೂ. ಆಗಿದೆ. ಅಂತೆಯೆ ಒನ್​ಪ್ಲಸ್​ 9 ಪ್ರೊ 256GB ಸ್ಟೋರೇಜ್​ಗೆ 69,999 ರೂ. ಇದೆ. ಆದರೀಗ ಒನ್​ಪ್ಲಸ್ ಒಪನ್ ಬೆಲೆ ಲಕ್ಷದಲ್ಲಿದೆ.

4 / 8
ಒನ್​ಪ್ಲಸ್​ ಓಪನ್ ಫೀಚರ್ಸ್ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಇದರಲ್ಲಿ ಸ್ನಾಪ್​ಡ್ರಾಗನ್ 8+ Gen 2 SoC, 2K 120Hz AMOLED (LTPO) ಡಿಸ್ ಪ್ಲೇ ಮತ್ತು 100W SuperVOOC ಚಾರ್ಜಿಂಗ್​ನೊಂದಿಗೆ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಬಹುದು. ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇರುವ ಸಾಧ್ಯತೆ ಇದೆ.

5 / 8
ಈ ಫೋನಿನ ಹಿಂಭಾಗವು ಹ್ಯಾಸೆಲ್‌ಬ್ಲಾಡ್‌ನಿಂದ ಟ್ಯೂನ್ ಮಾಡಲಾದ ಮೂರು ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ (IMX 890) ಇರಲಿದೆ. ಜೊತೆಗೆ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಪೆರಿಸ್ಕೋಪ್ ಲೆನ್ಸ್ ಅನ್ನು ಒಳಗೊಂಡಿರಬಹುದು. ಡಿಸ್ ಪ್ಲೇಯ ಹೋಲ್-ಪಂಚ್ ಕಟೌಟ್ ಒಳಗೆ 32-ಮೆಗಾಪಿಕ್ಸೆಲ್ ಸೆಲ್ಫಿ ಸ್ನ್ಯಾಪರ್ ಅನ್ನು ಹೊಂದಿರಬಹುದು.

6 / 8
ಇನ್ನು ಒನ್​ಪ್ಲಸ್ ಕಂಪನಿ ಇತ್ತೀಚೆಗಷ್ಟೆ ತನ್ನ ಹೊಸ ಏಸ್ 2 ಪ್ರೊ ಫೋನನ್ನು ರಿಲೀಸ್ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್‌ಕಾಮ್‌ನ ಟಾಪ್-ಆಫ್-ದಿ-ಲೈನ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ 24GB RAM ಮತ್ತು 1TB ವರೆಗೆ ಸಂಗ್ರಹಣೆ ಆಯ್ಕೆ ನೀಡಲಾಗಿದೆ.

7 / 8
ಇದು 150W SuperVOOC ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಆವೃತ್ತವಾಗಿದೆ. ಪ್ರಾಥಮಿಕ ಕ್ಯಾಮೆರಾ ಸೋನಿ IMX890 ಸಂವೇದಕ ಮತ್ತು f/1.8 ದ್ಯುತಿರಂಧ್ರದೊಂದಿಗೆ 50-ಮೆಗಾಪಿಕ್ಸೆಲ್​ನದ್ದಾಗಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗ 16-ಮೆಗಾಪಿಕ್ಸೆಲ್​ನ ಸ್ಯಾಮ್​ಸಂಗ್ S5K3P9 ಸಂವೇದಕದೊಂದಿಗೆ f/2.4 ದ್ಯುತಿರಂಧ್ರದ ಕ್ಯಾಮೆರಾವನ್ನು ನೀಡಲಾಗಿದೆ.

8 / 8
Follow us
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್

RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!

ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ

ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್

ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ

ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ

ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು

6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ

‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್