ವಾಟ್ಸ್​ಆ್ಯಪ್​ನಲ್ಲಿ HD ವಿಡಿಯೋಗಳನ್ನು ಕಳುಹಿಸುವುದು ಹೇಗೆ?: ಬಂದಿದೆ ಬೆರಗುಗೊಳಿಸುವ ಫೀಚರ್

WhatsApp HD Video Sharing Feature: ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸ್​ಆ್ಯಪ್ 2.23.17.74 ಅಪ್‌ಡೇಟ್‌ನೊಂದಿಗೆ ಗುರುವಾರ ಹೈ-ರೆಸಲ್ಯೂಷನ್‌ನಲ್ಲಿ ವಿಡಿಯೋವನ್ನು ಕಳುಹಿಸುವ ಫೀಚರ್ ಬಿಡುಗಡೆ ಆಗಿದೆ. ವಾಟ್ಸ್​ಆ್ಯಪ್ ಕಾಂಟೆಕ್ಟ್ ಲಿಸ್ಟ್​ನಲ್ಲಿ ಇರುವವರಿಗೆ ಹಂಚಿಕೊಳ್ಳಲು ವಿಡಿಯೋವನ್ನು ಆಯ್ಕೆಮಾಡುವಾಗ ಪರದೆಯ ಮೇಲ್ಭಾಗದಲ್ಲಿ HD ಐಕಾನ್ ಕಾಣಿಸುತ್ತಿದೆ.

ವಾಟ್ಸ್​ಆ್ಯಪ್​ನಲ್ಲಿ HD ವಿಡಿಯೋಗಳನ್ನು ಕಳುಹಿಸುವುದು ಹೇಗೆ?: ಬಂದಿದೆ ಬೆರಗುಗೊಳಿಸುವ ಫೀಚರ್
WhatsApp HD Video Feature
Follow us
|

Updated on: Aug 25, 2023 | 2:37 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಬಳಕೆದಾರರಿಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಮೊನ್ನೆಯಷ್ಟೆ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಹೆಚ್​ಡಿ ರೆಸಲ್ಯೂಷನ್‌ನಲ್ಲಿ ಫೋಟೋಗಳನ್ನು ಕಳುಹಿಸುವ ಆಯ್ಕೆ ನೀಡಿತ್ತು. ಇದೀಗ ವಿಡಿಯೋ ಸರದಿ. ವಾಟ್ಸ್​ಆ್ಯಪ್ ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಹೈ-ರೆಸಲ್ಯೂಷನ್‌ನಲ್ಲಿ ವಿಡಿಯೋವನ್ನು ಕಳುಹಿಸುವ ಫೀಚರ್ ಪರಿಚಯಿಸಿದೆ. ಈ ಹಿಂದೆ ಯಾರಿಗಾದರು ವಿಡಿಯೋ ಕಳುಹಿಸಿದಾಗ ಅದು ಕಂಪ್ರೆಸ್ ಆಗಿ ತನ್ನ ಕ್ವಾಲಿಟಿಯನ್ನು ಕಳೆದುಕೊಳ್ಳುತ್ತಿತ್ತು. ಆದರೀಗ ಹೆಚ್​ಡಿ ಕ್ವಾಲಿಟಿಯಲ್ಲಿ ವಿಡಿಯೋ ಕಳುಹಿಸಬಹುದು.

ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸ್​ಆ್ಯಪ್ 2.23.17.74 ಅಪ್‌ಡೇಟ್‌ನೊಂದಿಗೆ ಗುರುವಾರ ಈ ಫೀಚರ್ ಬಿಡುಗಡೆ ಆಗಿದೆ. ವಾಟ್ಸ್​ಆ್ಯಪ್ ಕಾಂಟೆಕ್ಟ್ ಲಿಸ್ಟ್​ನಲ್ಲಿ ಇರುವವರಿಗೆ ಹಂಚಿಕೊಳ್ಳಲು ವಿಡಿಯೋವನ್ನು ಆಯ್ಕೆಮಾಡುವಾಗ ಪರದೆಯ ಮೇಲ್ಭಾಗದಲ್ಲಿ HD ಐಕಾನ್ ಕಾಣಿಸುತ್ತಿದೆ. ಇದನ್ನು ಒತ್ತಿದ ನಂತರ ವಾಟ್ಸ್​ಆ್ಯಪ್ ಸ್ಟ್ಯಾಂಡರ್ಡ್ ಮತ್ತು ಡೀಫಾಲ್ಟ್ – 480p ರೆಸಲ್ಯೂಷನ್‌ ಬದಲಿಗೆ 720p ರೆಸಲ್ಯೂಷನ್‌ನಲ್ಲಿ ವಿಡಿಯೋ ಹಂಚಿಕೊಳ್ಳುತ್ತದೆ.

ಸ್ಯಾಮ್​ಸಂಗ್​ನಿಂದ ಬರುತ್ತಿದೆ ಹೊಸ ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?

ಇದನ್ನೂ ಓದಿ
Image
ರಿಯಲ್ ಮಿಯ ಹೊಸ ಬಜೆಟ್ ಫೋನ್ ರಿಯಲ್ ಮಿ 11x 5G ಮಾರಾಟ ಆರಂಭ: ಆಫರ್ ಏನಿದೆ?
Image
ಈ ಆ್ಯಪ್ ಇನ್​ಸ್ಟಾಲ್ ಮಾಡಿದ್ರೆ ನಿಮ್ಮ ಮನೆಗೇ ಎಣ್ಣೆ ಡೆಲಿವರಿ ಮಾಡ್ತಾರೆ
Image
ಮೋಟೋರೊಲಾದಿಂದ ಹೊಸ ಸ್ಮಾರ್ಟ್​ಫೋನ್ ಘೋಷಣೆ: ಭಾರತದಲ್ಲಿ ಸೆ. 1 ಕ್ಕೆ ಬಿಡುಗಡೆ
Image
ಬೆಲೆ ಕೇವಲ 999 ರೂ.: ಜಿಯೋ ಭಾರತ್ 4G ಫೋನ್ ಮಾರಾಟ ದಿನಾಂಕ ಪ್ರಕಟ

ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಯ್ಕೆ ಲಭ್ಯವಾಗುತ್ತಿದೆ. ಆದರೆ, ಐಒಎಸ್ ಬಳಕೆದಾರರಿಗೆ ಇನ್ನಷ್ಟೆ ಈ ಫೀಚರ್ ಅನಾವರಣಗೊಳ್ಳಬೇಕಿದೆ. ಪ್ರಸ್ತುತ iOS ಬೀಟಾ ಪರೀಕ್ಷೆಯಲ್ಲಿ ಈ ಫೀಚರ್ ಕಾಣಿಸಿಕೊಂಡಿದೆ. ನೀವು ವಾಟ್ಸ್​ಆ್ಯಪ್​ನಲ್ಲಿ ಹೈ ರೆಸಲ್ಯೂಷನ್ ವಿಡಿಯೋವನ್ನು ಕಳುಹಿಸಲು ಬಯಸಿದರೆ, ಆಂಡ್ರಾಯ್ಡ್ ಬಳಕೆದಾರರು ತಮ್ಮ ವಾಟ್ಸ್​ಆ್ಯಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಬೇಕು. ಹಾಗೆಯೆ ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯವು ಲಭ್ಯವಿಲ್ಲದಿರಬಹುದು ಎಂಬುದನ್ನು ನೆನಪಿನಲ್ಲಿಡಿ.

ವಾಟ್ಸ್​ಆ್ಯಪ್​ನಲ್ಲಿ HD ವಿಡಿಯೋಗಳನ್ನು ಹೇಗೆ ಕಳುಹಿಸುವುದು:

  • ವಾಟ್ಸ್​ಆ್ಯಪ್​ನಲ್ಲಿ ಚಾಟ್ ತೆರೆಯಿರಿ ಮತ್ತು ಅಟ್ಯಾಚ್​ಮೆಂಟ್ ಐಕಾನ್ > ಗ್ಯಾಲರಿ ಮೇಲೆ ಟ್ಯಾಪ್ ಮಾಡಿ.
  • ನೀವು ಕಳುಹಿಸಲು ಬಯಸುವ ವಿಡಿಯೋವನ್ನು ಆಯ್ಕೆ ಮಾಡಿ ಮತ್ತು ಪ್ರಿವಿವ್ಯೂ ನೋಡಲು ಅದರ ಮೇಲೆ ಟ್ಯಾಪ್ ಮಾಡಿ.
  • ಪರದೆಯ ಮೇಲ್ಭಾಗದಲ್ಲಿ ಸ್ಟಿಕ್ಕರ್, ಪಠ್ಯ ಮತ್ತು ಡ್ರಾಯಿಂಗ್ ಐಕಾನ್‌ಗಳ ಎಡಭಾಗದಲ್ಲಿ HD ಐಕಾನ್ ಕಾಣಿಸುತ್ತದೆ.
  • HD ಗುಣಮಟ್ಟವನ್ನು ಆಯ್ಕೆಮಾಡಿ ಮತ್ತು ಹೆಚ್ಚಿದ ಫೈಲ್ ಗಾತ್ರವನ್ನು ಗಮನಿಸಿ, ನಂತರ ಡನ್ ಟ್ಯಾಪ್ ಮಾಡಿ.
  • ವಿಡಿಯೋದಲ್ಲಿ ಏನಾದರು ಬದಲಾವಣೆಗಳು ಅಥವಾ ಎಡಿಟ್ ಮಾಡಿದ ನಂತರ, ಕೆಳಗಿನ ಬಲ ಮೂಲೆಯಲ್ಲಿರುವ ಸೆಂಡ್ ಬಟನ್ ಅನ್ನು ಟ್ಯಾಪ್ ಮಾಡಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್