ಸ್ಯಾಮ್​ಸಂಗ್​ನಿಂದ ಬರುತ್ತಿದೆ ಹೊಸ ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?

Samsung Galaxy S23 FE Launch Date: ''ನಾವು ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಆವೃತ್ತಿಯನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದ್ದೇವೆ,'' ಎಂದು ಕಂಪನಿ ಹೇಳಿದೆ. ಮುಂದಿನ ತಿಂಗಳು ಈ ಫೋನ್ ಅನಾವರಣಗೊಳ್ಳಲಿದೆ. ಈ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1 ಅಥವಾ ಎಕ್ಸಿನೊಸ್ 2200 ಪ್ರೊಸೆಸರ್​ನಿಂದ ಚಾಲಿತವಾಗುವ ನಿರೀಕ್ಷೆಯಿದೆ.

ಸ್ಯಾಮ್​ಸಂಗ್​ನಿಂದ ಬರುತ್ತಿದೆ ಹೊಸ ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?
Samsung Galaxy S23 FE
Follow us
Vinay Bhat
|

Updated on: Aug 24, 2023 | 3:15 PM

ಸ್ಯಾಮ್‌ಸಂಗ್ ತನ್ನ ಪ್ರಮುಖ ಗ್ಯಾಲಕ್ಸಿ S23 ಸರಣಿಯಿಂದ ಫ್ಯಾನ್ ಆವೃತ್ತಿ (Samsung Galaxy S23 FE) ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸ್ಯಾಮ್​ಸಂಗ್ 2022 ರಲ್ಲಿ ಕೊನೆಯದಾಗಿ ಗ್ಯಾಲಕ್ಸಿ S21 FE ಬಿಡುಗಡೆ ಮಾಡಿತ್ತು. ಆ ಬಳಿಕ ಅನಾವರಣಗೊಳ್ಳುತ್ತಿರುವ ಮೊದಲ ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್ ಇದಾಗಿದೆ. ಈ ವರ್ಷದ ಆರಂಭದಿಂದಲೂ FE ಮಾದರಿ ಬಗ್ಗೆ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದ್ದವು. ಇದೀಗ ಸ್ಯಾಮ್‌ಸಂಗ್ ಕಂಪನಿ ಈ ವಿಚಾರವನ್ನು ದೃಢಪಡಿಸಿದೆ.

”ನಾವು ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಆವೃತ್ತಿಯನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದ್ದೇವೆ,” ಎಂದು ಕಂಪನಿ ಹೇಳಿದೆ. ಮುಂದಿನ ತಿಂಗಳು ಈ ಫೋನ್ ಅನಾವರಣಗೊಳ್ಳಲಿದೆ. ಗ್ಯಾಲಕ್ಸಿ ಎಸ್ 23 ಎಫ್‌ಇ ಬಿಡುಗಡೆ ದಿನಾಂಕವನ್ನು ಸ್ಯಾಮ್‌ಸಂಗ್ ಇನ್ನೂ ಘೋಷಿಸಿಲ್ಲ. ಆದರೆ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಪ್ರಕಾರ, ಲಾಂಚ್ ಟೈಮ್‌ಲೈನ್ ಅನ್ನು ಸೆಪ್ಟೆಂಬರ್​ನಲ್ಲಿ ನಿಗದಿ ಮಾಡಲಾಗಿದೆಯಂತೆ. ಈ ಮಾಹಿತಿಯು ನಿಜವಾಗಿದ್ದರೆ, ಶೀಘ್ರದಲ್ಲೇ ಗ್ಯಾಲಕ್ಸಿ S23 FE ಬಿಡುಗಡೆ ಆಗಲಿದೆ. ಇದರ ಬೆಲೆ 54,999 ರೂ. ಇರಬಹುದೆಂದು ಹೇಳಲಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಕುರಿತ ಸೋರಿಕೆಯಾದ ಫೀಚರ್ಸ್:

ಡಿಸ್ ಪ್ಲೇ: ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್​ಫೋನ್ 120Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ FHD+ ಡೈನಾಮಿಕ್ AMOLED ಡಿಸ್ ಪ್ಲೇಯನ್ನು ಹೊಂದಿರುತ್ತದೆ.

ಇದನ್ನೂ ಓದಿ
Image
ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಬೆಲೆ ಸೋರಿಕೆ, ಈ ಬಾರಿ ಏನೆಲ್ಲ ಫೀಚರ್ಸ್ ಇರಲಿದೆ?
Image
ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಂದೇ ಖರೀದಿಸಿ
Image
ಸ್ಮಾರ್ಟ್​ಫೋನ್​ನ ಬ್ಯಾಕ್ ಕವರ್​ನಲ್ಲಿ ಹಣ, ಎಟಿಎಂ ಕಾರ್ಡ್ ಇಡುತ್ತೀರಾ?: ಹಾಗಿದ್ರೆ ತಪ್ಪದೆ ಈ ಸ್ಟೋರಿ ಓದಿ
Image
ರೆಡ್ಮಿ A2+ ಹೊಸ ವೇರಿಯೆಂಟ್ ಬಿಡುಗಡೆ: ಬೆಲೆ ಕೇವಲ 8,499 ರೂ.

ಪಾಸ್​ವರ್ಡ್ ಶೇರಿಂಗ್ ಆಯ್ಕೆ ಬಂದ್: ಏರ್ಟೆಲ್, ಜಿಯೋದ ಯಾವ ಪ್ಲಾನ್​ನಲ್ಲಿ ನೆಟ್‌ಫ್ಲಿಕ್ಸ್ ಫ್ರೀ ಇದೆ?

ಪ್ರೊಸೆಸರ್: ಈ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 1 ಅಥವಾ ಎಕ್ಸಿನೊಸ್ 2200 ಪ್ರೊಸೆಸರ್​ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಕಳೆದ ವರ್ಷದ ಗ್ಯಾಲಕ್ಸಿ S22 ಸರಣಿಯಲ್ಲಿ ಇದೇ ಚಿಪ್‌ಸೆಟ್ ನೀಡಲಾಗುತ್ತು.

ಕ್ಯಾಮೆರಾಗಳು: OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ, 8MP ಕ್ಯಾಮೆರಾ ಮತ್ತು 12MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಲಿದೆ. ಸೆಲ್ಫಿಗಾಗಿ, ಇದು 10MP ಮುಂಭಾಗದ ಕ್ಯಾಮೆರಾವನ್ನು ಹೊಂದಬಹುದು.

ಬ್ಯಾಟರಿ, ಚಾರ್ಜಿಂಗ್: ಈ ಸ್ಮಾರ್ಟ್‌ಫೋನ್ 25W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,500mAh ಬ್ಯಾಟರಿಯನ್ನು ಹೊಂದಿದೆ.

ಸಾಫ್ಟ್‌ವೇರ್: ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಫೋನ್ ಆಂಡ್ರಾಯ್ಡ್ 13 ಅನ್ನು ಆಧರಿಸಿದ UI 5.1 ಮೂಲಕ ರನ್ ಆಗುತ್ತದೆ. ಸ್ಯಾಮ್‌ಸಂಗ್ ನಾಲ್ಕು ವರ್ಷಗಳವರೆಗೆ ಆಂಡ್ರಾಯ್ಡ್ ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ಐದು ವರ್ಷಗಳವರೆಗೆ ಭದ್ರತಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗಿದೆ.

IP ರೇಟಿಂಗ್: ಈ ಫೋನ್ ಸಹ IP ರೇಟಿಂಗ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ ಆದರೆ ನಿಖರವಾದ ರೇಟಿಂಗ್ ಇನ್ನೂ ತಿಳಿದುಬಂದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ