AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಬೆಲೆ ಸೋರಿಕೆ, ಈ ಬಾರಿ ಏನೆಲ್ಲ ಫೀಚರ್ಸ್ ಇರಲಿದೆ?

iPhone 15 Features Leaked: ಈ ಬಾರಿಯ ಆ್ಯಪಲ್ ಐಫೋನ್​ನಲ್ಲಿ ನಿರೀಕ್ಷಿಸಲಾಗಿರುವ ಮುಖ್ಯ ಬದಲಾವಣೆ ಎಂದರೆ ಹಿಂದಿನ ಮಾದರಿಗಳಲ್ಲಿ ನೋಡಿದ ಆ್ಯಪಲ್​ನ ಲೈಟ್ನಿಂಗ್ ಪೋರ್ಟ್ ಬದಲಿಗೆ USB ಟೈಪ್-ಸಿ ಪೋರ್ಟ್ ಅನ್ನು ಬಳಸುವುದು. ಬಳಕೆದಾರರಿಗೆ ಸುಲಭವಾಗಿ ಚಾರ್ಜ್ ಮಾಡಲು ಇದು ಸಹಕಾರಿ ಆಗಿದೆ.

ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಬೆಲೆ ಸೋರಿಕೆ, ಈ ಬಾರಿ ಏನೆಲ್ಲ ಫೀಚರ್ಸ್ ಇರಲಿದೆ?
Apple iPhone 15
Follow us
Vinay Bhat
|

Updated on: Aug 24, 2023 | 1:59 PM

ಆ್ಯಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 15 ಸರಣಿಯ (iPhone 15 Series) ಸ್ಮಾರ್ಟ್​ಫೋನ್​ಗಳ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದರಲ್ಲಿ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಫೋನುಗಳು ಇರಲಿದೆ. ಕಂಪನಿ ಅಧಿಕೃತವಾಗಿ ರಿಲೀಸ್ ದಿನಾಂಕವನ್ನು ಪ್ರಕಟಿಸಿಲ್ಲವಾದರೂ ಸೆಪ್ಟೆಂಬರ್ 12 ರಂದು ನಡೆಯಲಿರುವ ದೊಡ್ಡ ಕಾರ್ಯಕ್ರಮದಲ್ಲಿ ಐಫೋನ್ 15 ಸರಣಿ ಅನಾವರಣಗೊಳ್ಳಲಿದೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನವೇ ಐಫೋನ್ 15 ಕುರಿತ ಫೀಚರ್ಸ್, ಬೆಲೆ, ವಿನ್ಯಾಸ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಐಫೋನ್ 15 ಬೆಲೆ ಎಷ್ಟು?:

ಐಫೋನ್ 15 USA ನಲ್ಲಿ $799 ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತದೆ. ಇದು ಹಿಂದಿನ ಮಾದರಿಯಂತೆಯೇ ಇರಲಿದೆ ಎಂಬ ಮಾತಿದೆ. ಐಫೋನ್ 14 ಸರಣಿಯ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು, ಐಫೋನ್ 15 ಬೆಲೆ ಭಾರತದಲ್ಲಿ 79,900 ರೂ. ಗಳಿಂದ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಐಫೋನ್ 15 ಇತರೆ ಫೀಚರ್ಸ್ ಏನಿರಬಹುದು?:

ಈ ಬಾರಿಯ ಆ್ಯಪಲ್ ಐಫೋನ್​ನಲ್ಲಿ ನಿರೀಕ್ಷಿಸಲಾಗಿರುವ ಮುಖ್ಯ ಬದಲಾವಣೆ ಎಂದರೆ ಹಿಂದಿನ ಮಾದರಿಗಳಲ್ಲಿ ನೋಡಿದ ಆ್ಯಪಲ್​ನ ಲೈಟ್ನಿಂಗ್ ಪೋರ್ಟ್ ಬದಲಿಗೆ USB ಟೈಪ್-ಸಿ ಪೋರ್ಟ್ ಅನ್ನು ಬಳಸುವುದು. ಬಳಕೆದಾರರಿಗೆ ಸುಲಭವಾಗಿ ಚಾರ್ಜ್ ಮಾಡಲು ಇದು ಸಹಕಾರಿ ಆಗಿದೆ. ಐ ಫೋನ್ 15 ಹಿಂದಿನ ಐಫೋನ್ 13 ಮತ್ತು ಐಫೋನ್ 14 ನಂತೆಯೇ 6.1-ಇಂಚಿನ ಡಿಸ್ ಪ್ಲೇಯೊಂದಿಗೆ ಬರಲಿದೆ. ಈ ವರ್ಷ ಪಂಚ್-ಹೋಲ್ ಡಿಸ್ ಪ್ಲೇ ವಿನ್ಯಾಸವನ್ನು ನಿರೀಕ್ಷಿಸಬಹುದು.

App Download: ಸ್ಮಾರ್ಟ್​ಫೋನ್​ನಲ್ಲಿ ಯಾವುದೋ ಆ್ಯಪ್ ಇನ್​ಸ್ಟಾಲ್ ಮಾಡುವಾಗ ಎಚ್ಚರಿಕೆ ಅಗತ್ಯ!​

ಆ್ಯಪಲ್ ತನ್ನ ಕಳೆದ ವರ್ಷದ ಪ್ರಮುಖ A16 ಚಿಪ್‌ಸೆಟ್‌ನೊಂದಿಗೆ ಐಫೋನ್ 15 ಅನ್ನು ಬಿಡುಗಡೆ ಮಾಡಬಹುದು. ಯಾಕೆಂದರೆ ಹೊಸ A17 ಚಿಪ್ ಅನ್ನು ಐಫೋನ್ 15 ಪ್ರೊ ಮಾದರಿಗಳಿಗಾಗಿ ಕಾಯ್ದಿರಿಸಲಾಗಿದೆ. ಇದರ ಜೊತೆಗೆ, ಎಲ್ಲಾ ಹೊಸ 2023 ಐಫೋನ್‌ಗಳು ಇತ್ತೀಚಿನ iOS 17 ಸಾಫ್ಟ್‌ವೇರ್ ಅನ್ನು ಹೊಂದಿರುತ್ತದೆ.

ಸೋರಿಕೆಯ ಪ್ರಕಾರ, ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಐಫೋನ್ 15 ಮಾದರಿಗಳು ದೊಡ್ಡ ಬ್ಯಾಟರಿ ಪವರ್ ಅನ್ನು ಹೊಂದಿವೆಯಂತೆ. ಸ್ಟ್ಯಾಂಡರ್ಡ್ ಮಾಡೆಲ್ 3,877mAh ಬ್ಯಾಟರಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಇದು ಐಫೋನ್ 14 ನಲ್ಲಿ ಕಂಡುಬರುವ 3,279mAh ಯುನಿಟ್‌ಗಿಂತ ದೊಡ್ಡ ಅಪ್‌ಗ್ರೇಡ್ ಆಗಿರುತ್ತದೆ. ಆ್ಯಪಲ್ ಫಾಸ್ಟ್ ಚಾರ್ಜರ್ ಕೂಡ ನೀಡಬಹುದು ಎಂಬ ಮಾತಿದೆ. ಇದು 35W ವೇಗದ ಚಾರ್ಜ್‌ಗ್​ನಿಂದ ಕೂಡಿದೆಯಂತೆ.

ಸ್ಟ್ಯಾಂಡರ್ಡ್ ಆವೃತ್ತಿಗಳು ಐಫೋನ್ 14 ಸರಣಿಯ ಪ್ರೊ ಮಾದರಿಗಳಂತೆಯೇ 48-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿವೆ ಎಂದು ವದಂತಿಗಳಿವೆ. ಇದು ಹಿಂದಿನ ಐಫೋನ್ ಮಾದರಿಗಳಲ್ಲಿ ಕಂಡುಬರುವ 12-ಮೆಗಾಪಿಕ್ಸೆಲ್ ಸಂವೇದಕಗಳಿಗಿಂತ ಹೆಚ್ಚನದ್ದಾಗಿದೆ. ಆದರೆ, ಆಪ್ಟಿಕಲ್ ಜೂಮ್ ಅಥವಾ ಲಿಡಾರ್ ಸ್ಕ್ಯಾನರ್‌ಗಾಗಿ ಟೆಲಿಫೋಟೋ ಲೆನ್ಸ್ ಅನ್ನು ನಿರೀಕ್ಷಿಸಬೇಡಿ, ಏಕೆಂದರೆ ಇವುಗಳನ್ನು ಉನ್ನತ-ಮಟ್ಟದ ಪ್ರೊ ಮಾದರಿಗಳಿಗೆ ನೀಡಲಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ