App Download: ಸ್ಮಾರ್ಟ್ಫೋನ್ನಲ್ಲಿ ಯಾವುದೋ ಆ್ಯಪ್ ಇನ್ಸ್ಟಾಲ್ ಮಾಡುವಾಗ ಎಚ್ಚರಿಕೆ ಅಗತ್ಯ!
ಆ್ಯಪ್ಗಳನ್ನು ಅಧಿಕೃತ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್ ಮೂಲಕವೇ ಡೌನ್ಲೋಡ್ ಮಾಡಿಕೊಂಡು ಬಳಸಬೇಕು ಎಂದು ಹೇಳಿದ್ದರೂ, ಜನರು ಅವುಗಳನ್ನು ಪಾಲಿಸುತ್ತಿಲ್ಲ. ಅಂತಹ ಸಂದರ್ಭದಲ್ಲಿ ನೀವು ಇನ್ಸ್ಟಾಲ್ ಮಾಡಿಕೊಂಡಿರುವ ಯಾವುದೋ ಒಂದು ಆ್ಯಪ್ ಕೂಡ ನಿಮಗೆ ತೊಂದರೆ ತರಬಲ್ಲದು.
ಸ್ಮಾರ್ಟ್ಫೋನ್ ಎನ್ನುವುದು ಇಂದು ಜನರ ಜೀವನದ ಪ್ರಮುಖ ಅಂಗವೇ ಎನ್ನುವಷ್ಟು ಬೆರೆತುಕೊಂಡಿದೆ. ಜನರ ಪ್ರತಿ ಚಟುವಟಿಕೆಗಳಿಗೂ ಫೋನ್ ಜತೆ ಈಗ ಸಂಬಂಧವಿರುತ್ತದೆ. ಸ್ಮಾರ್ಟ್ಫೋನ್ ಎಂದ ಮೇಲೆ ಅದರಲ್ಲಿ ಹತ್ತು ಹಲವು ವಿಧದ ಆ್ಯಪ್ಗಳು ಇರುತ್ತವೆ. ಆ್ಯಪ್ಗಳನ್ನು ಅಧಿಕೃತ ಪ್ಲೇ ಸ್ಟೋರ್ ಮತ್ತು ಆ್ಯಪ್ ಸ್ಟೋರ್ ಮೂಲಕವೇ ಡೌನ್ಲೋಡ್ ಮಾಡಿಕೊಂಡು ಬಳಸಬೇಕು ಎಂದು ಹೇಳಿದ್ದರೂ, ಜನರು ಅವುಗಳನ್ನು ಪಾಲಿಸುತ್ತಿಲ್ಲ. ಅಂತಹ ಸಂದರ್ಭದಲ್ಲಿ ನೀವು ಇನ್ಸ್ಟಾಲ್ ಮಾಡಿಕೊಂಡಿರುವ ಯಾವುದೋ ಒಂದು ಆ್ಯಪ್ ಕೂಡ ನಿಮಗೆ ತೊಂದರೆ ತರಬಲ್ಲದು. ನಿಮ್ಮ ವೈಯಕ್ತಿಕ ವಿವರ, ಹಣಕಾಸು ಮತ್ತು ಬ್ಯಾಂಕಿಂಗ್ ದಾಖಲೆಗಳನ್ನು ಕದಿಯಬಹುದು. ಹೀಗಾಗಿ ಈ ಸಂದರ್ಭದಲ್ಲಿ ನೀವು ಎಚ್ಚರಿಕೆ ವಹಿಸುವುದು ಅಗತ್ಯ.
Latest Videos