- Kannada News Photo gallery Reliance Jio recently launched new Jio Bharat 4G phone sale in India via Amazon from August 28
ಬೆಲೆ ಕೇವಲ 999 ರೂ.: ಜಿಯೋ ಭಾರತ್ 4G ಫೋನ್ ಮಾರಾಟ ದಿನಾಂಕ ಪ್ರಕಟ
Jio Bharat 4G sale in India via Amazon: ಇತ್ತೀಚೆಗಷ್ಟೆ ಭಾರತದಲ್ಲಿ ಅನಾವರಣಗೊಂಡ ಕೇವಲ 999 ರೂ. ಬೆಲೆಯ ಜಿಯೋ ಭಾರತ್ 4ಜಿ ಫೋನ್ ಆಗಸ್ಟ್ 28 ಮಧ್ಯಾಹ್ನ 12 ಗಂಟೆಯಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿಗೆ ಸಿಗಲಿದೆ.
Updated on: Aug 25, 2023 | 6:55 AM

ರಿಲಯನ್ಸ್ ಜಿಯೋ ಇತ್ತೀಚೆಗಷ್ಟೆ ಭಾರತದಲ್ಲಿ ಜಿಯೋ ಭಾರತ್ ಹೆಸರಿನ ನೂತನ ಫೋನನ್ನು ಲಾಂಚ್ ಮಾಡಿತ್ತು. ವಿಶೇಷ ಎಂದರೆ ಈ ಫೋನ್ 4ಜಿ ಬೆಂಬಲ ಪಡೆದುಕೊಂಡಿದ್ದು, ಬೆಲೆ ಮಾತ್ರ ಕೇವಲ 999 ರೂ.. ಇದೀಗ ಅಮೆಜಾನ್ ಈ ಫೋನಿನ ಮಾರಾಟ ಆರಂಭವಾಗಿದೆ. ಇಂದು ಆಗಸ್ಟ್ 28 ಮಧ್ಯಾಹ್ನ 12 ಗಂಟೆಯಿಂದ ಜಿಯೋ ಭಾರತ್ 4ಜಿ ಫೋನ್ ಖರೀದಿಗೆ ಲಭ್ಯವಾಗುತ್ತಿದೆ.

ಭಾರತವನ್ನು ‘2G-ಮುಕ್ತ್ ಭಾರತ್’ ಮಾಡುವ ನಿಟ್ಟಿನಲ್ಲಿ ಜಿಯೋ ಈ ಮಹತ್ವದ ಫೋನನ್ನು ಬಿಡುಗಡೆ ಮಾಡಿದ್ದು, ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನ್ ಮಾರಾಟ ಕಾಣುತ್ತಿದೆ. ಗ್ರಾಹಕರು ಇದನ್ನು ರಿಲಯನ್ಸ್ ಡಿಜಿಟಲ್ ಸ್ಟೋರ್, ಜಿಯೋ ಮಾರ್ಟ್ ಸೇರಿದಂತೆ ರಿಟೇಲ್ ಸ್ಟೋರ್ಗಳನ್ನು ಖರೀದಿಸಬಹುದು.

ಜಿಯೋ ಭಾರತ್ ಫೋನ್ ನೋಡಲು ಇತರೆ ಫೀಚರ್ ಫೋನುಗಳ ರೀತಿಯಲ್ಲಿದೆ. ಕೀ-ಪೇಡ್ ಆಯ್ಕೆ ಇದ್ದು ಹಿಂಭಾಗ ಕ್ಯಾಮೆರಾ, ಸ್ಪೀಕರ್ ಜೊತೆಗೆ ಜಿಯೋ ಲೋಗೋ ಅಳವಡಿಸಲಾಗಿದೆ. ಭಾರತದಲ್ಲಿ ಎಲ್ಲಿಗೆ ಬೇಕಾದರೂ ಅನಿಯಮಿತ ಕರೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಜಿಯೋ ಭಾರತ್ 4ಜಿ ಫೋನ್ನಲ್ಲಿ ಜಿಯೋ ಪೇ ಮೂಲಕ ಯುಪಿಐ ವಹಿಪಾಟು ನಡೆಸಬಹುದು. ಜಿಯೋ ಸಿನಿಮಾ, ಜಿಯೋ ಸಾವನ್ ಮತ್ತು ಎಫ್ಎಮ್ ರೆಡಿಯೋ ಸಪೋರ್ಟ್ ಮಾಡುತ್ತದೆ. ಒಟ್ಟು ಒಂದು ಮಿಲಿಯನ್ ಜಿಯೋ ಭಾರತ್ ಫೋನ್ ಮಾರುಕಟ್ಟೆಗೆ ಬಂದಿದೆ.

ಜಿಯೋ ಭಾರತ್ ಫೋನ್ಗಳಿಗೆ ಬೇಸ್ ರೀಚಾರ್ಜ್ ಪ್ಲಾನ್ ಅನ್ನು ಕೂಡ ಘೋಷಣೆ ಮಾಡಲಾಗಿದೆ. ಈ ರೀಚಾರ್ಜ್ ಪ್ಲಾನ್ ಬೆಲೆ ಕೇವಲ 123 ರೂ. ಆಗಿರಲಿದ್ದು, ಅನಿಯಮಿತ ಧ್ವನಿ ಕರೆಗಳು ಮತ್ತು 14GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಇದು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಇದರ ಜೊತೆಗೆ 1234 ರೂ. ವಿನ ಒಂದು ವರ್ಷದ ಪ್ಲಾನ್ ಕೂಡ ಇದ್ದು, ಇದರಲ್ಲಿ 168GB ಡೇಟಾ ನೀಡಲಾಗಿದೆ. ಅನಿಯಮಿತ ಕರೆ ಅವಕಾಶ ಕೂಡ ಇದೆ.



















