ಮೋಟೋರೊಲಾದಿಂದ ಹೊಸ ಸ್ಮಾರ್ಟ್​ಫೋನ್ ಘೋಷಣೆ: ಭಾರತದಲ್ಲಿ ಸೆ. 1 ಕ್ಕೆ ಬಿಡುಗಡೆ

Moto G84 5G debut on September 1: ಬಿಡುಗಡೆಗೆ ಮುಂಚಿತವಾಗಿ, ಮೋಟೋ G84 5G ಯ ಕೆಲ ಮಾಹಿತಿ ಸೋರಿಕೆ ಆಗಿದೆ. ಅದರ ಪ್ರಕಾರ ಈ ಫೋನ್ 120Hz 6.5-ಇಂಚಿನ pOLED ಡಿಸ್ ಪ್ಲೇಯನ್ನು ಹೊಂದಿದೆ. ಸೆಪ್ಟೆಂಬರ್ 1 ರಂದು ಈ ಫೋನ್ ದೇಶದಲ್ಲಿ ಅನಾವರಣಗೊಳ್ಳಲಿದೆ.

ಮೋಟೋರೊಲಾದಿಂದ ಹೊಸ ಸ್ಮಾರ್ಟ್​ಫೋನ್ ಘೋಷಣೆ: ಭಾರತದಲ್ಲಿ ಸೆ. 1 ಕ್ಕೆ ಬಿಡುಗಡೆ
Moto G84 5G
Follow us
Vinay Bhat
|

Updated on: Aug 25, 2023 | 10:52 AM

ಮೋಟೋರೊಲಾ ತನ್ನ ಪ್ರೀಮಿಯಂ ಸ್ಮಾರ್ಟ್​ಫೋನ್ ಮೋಟೋರೊಲಾ ರೇಜರ್ 40 ಸರಣಿಯನ್ನು ಪರಿಚಯಿಸಿದ ನಂತರ ಇದೀಗ ಭಾರತದಲ್ಲಿ ಮೋಟೋ ಜಿ84 5ಜಿ (Moto G84 5G) ಫೋನನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಹೆಸರೇ ಸೂಚಿಸುವಂತೆ, ಇದೊಂದು 5G ಸಂಪರ್ಕ ಹೊಂದಿರುವ ಮೊಬೈಲ್ ಆಗಿದ್ದು, ಸೆಪ್ಟೆಂಬರ್ 1 ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ. ಮೋಟೋ G84 5G ಮಿಡ್‌ನೈಟ್ ಬ್ಲೂ, ವಿವಾ ಮೆಜೆಂಟಾ ಮತ್ತು ಮಾರ್ಷ್‌ಮ್ಯಾಲೋ ಬ್ಲೂ ಹೀಗೆ ತನ್ನ ಮೂರು ಬಣ್ಣಗಳಲ್ಲಿ ರಿಲೀಸ್ ಆಗಲಿದೆ ಎಂದು ಕಂಪನಿ ಹೇಳಿದೆ. ಡ್ಯುಯಲ್ ಕ್ಯಾಮೆರಾಗಳನ್ನು ಒಳಗೊಂಡಿದ್ದು, ಸೆಲ್ಫಿ ಕ್ಯಾಮೆರಾವನ್ನು ಹೋಲ್-ಪಂಚ್ ಕಟೌಟ್‌ನಲ್ಲಿ ಪ್ಯಾಕ್ ಮಾಡಲಾಗಿದೆ.

ಬಿಡುಗಡೆಗೆ ಮುಂಚಿತವಾಗಿ, ಮೋಟೋ G84 5G ಯ ಕೆಲ ಮಾಹಿತಿ ಸೋರಿಕೆ ಆಗಿದೆ. ಅದರ ಪ್ರಕಾರ ಈ ಫೋನ್ 120Hz 6.5-ಇಂಚಿನ pOLED ಡಿಸ್ ಪ್ಲೇಯನ್ನು ಹೊಂದಿದೆ. ಕಂಪನಿ ಇತ್ತೀಚಿನ ಫ್ಲಿಪ್ ಫೋನ್ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ pOLED ಪ್ಯಾನೆಲ್‌ಗಳನ್ನು ಬಳಸಿದೆ. ಇದು ಹಲವಾರು ಸ್ಮಾರ್ಟ್‌ಫೋನ್‌ಗಳಲ್ಲಿ AMOLED ಪ್ಯಾನೆಲ್‌ಗಳಂತೆಯೇ ಆಳವಾದ ಕಪ್ಪು ಮತ್ತು ಕಾಂಟ್ರಾಸ್ಟ್ ಅನ್ನು ನೀಡುತ್ತದೆ. ಡಿಸ್ ಪ್ಲೇ 1300 ನಿಟ್ಸ್ ಗರಿಷ್ಠ ಬ್ರೈಟ್​ನೆಸ್ ಮತ್ತು HRD10 ಬೆಂಬಲವನ್ನು ಪಡೆದಿದೆ.

ಸ್ಮಾರ್ಟ್​ಫೋನ್​ನ ಬ್ಯಾಕ್ ಕವರ್​ನಲ್ಲಿ ಹಣ, ಎಟಿಎಂ ಕಾರ್ಡ್ ಇಡುತ್ತೀರಾ?: ಹಾಗಿದ್ರೆ ತಪ್ಪದೆ ಈ ಸ್ಟೋರಿ ಓದಿ

ಇದನ್ನೂ ಓದಿ
Image
ಬೆಲೆ ಕೇವಲ 999 ರೂ.: ಜಿಯೋ ಭಾರತ್ 4G ಫೋನ್ ಮಾರಾಟ ದಿನಾಂಕ ಪ್ರಕಟ
Image
ಸ್ಯಾಮ್​ಸಂಗ್​ನಿಂದ ಬರುತ್ತಿದೆ ಹೊಸ ಫ್ಯಾನ್ ಎಡಿಷನ್ ಸ್ಮಾರ್ಟ್​ಫೋನ್: ಯಾವುದು?, ಬೆಲೆ ಎಷ್ಟು?
Image
ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಬೆಲೆ ಸೋರಿಕೆ, ಈ ಬಾರಿ ಏನೆಲ್ಲ ಫೀಚರ್ಸ್ ಇರಲಿದೆ?
Image
ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್​ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಂದೇ ಖರೀದಿಸಿ

ಮೋಟೋ G84 5G 256GB ವರೆಗೆ ಆಂತರಿಕ ಸಂಗ್ರಹಣೆ ಮತ್ತು 12GB RAM ಅನ್ನು ಒಳಗೊಂಡಿದೆ. ಹಿಂದಿನ ಕ್ಯಾಮರಾ ಸೆಟಪ್ OIS ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಇದೆ. ಇತರ ಮೊಟೊರೊಲಾ ಫೋನ್‌ಗಳಂತೆಯೇ ಇದರಲ್ಲಿ ಕೂಡ ಸ್ಪೀಕರ್‌ಗಳು ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಹೊಂದಿವೆ. “ಮೋಟೋ ಸ್ಪೇಷಿಯಲ್ ಸೌಂಡ್” ಗೆ ಸಹ ಬೆಂಬಲವಿದೆ. 30W ಟರ್ಬೋಪವರ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿ ಇದೆ. ಮೊಟೊರೊಲಾ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ಸಹ ನೀಡುತ್ತದೆ.

ಈ ಫೋನ್ ಆಂಡ್ರಾಯ್ಡ್ 14 ಜೊತೆಗೆ ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಸ್ವೀಕರಿಸುವುದು ಖಚಿತವಾಗಿದೆ. ಆನ್‌ಲೈನ್‌ನಲ್ಲಿ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಥಿಂಕ್‌ಶೀಲ್ಡ್ ರಕ್ಷಣೆ ಇದೆ. ಮೋಟೋರೊಲಾದ G-ಸರಣಿಯು ಭಾರತದಲ್ಲಿ 20,000 ರೂ. ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಹೀಗಾಗಿ ಮುಂಬರುವ ಮೋಟೋ G84 ಕೂಡ ಅದೇ ರೀತಿ ನಿರೀಕ್ಷಿಸಬಹುದು. ಈ ಫೋನ್ ಫ್ಲಿಪ್​ಕಾರ್ಟ್​ನಲ್ಲಿ ಸೇಲ್ ಕಾಣಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು