ಈ ಆ್ಯಪ್ ಇನ್ಸ್ಟಾಲ್ ಮಾಡಿದ್ರೆ ನಿಮ್ಮ ಮನೆಗೇ ಎಣ್ಣೆ ಡೆಲಿವರಿ ಮಾಡ್ತಾರೆ
How to order Alcohol online: ಈ ಹಿಂದೆ ಬಳಕೆದಾರರು ಬಿಗ್ ಬಾಸ್ಕೆಟ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ಆಲ್ಕೋಹಾಲ್ ಅನ್ನು ಆರ್ಡರ್ ಮಾಡಬಹುದಿತ್ತು, ಆದರೆ ಇದರಲ್ಲಿ ಈಗ ಈ ಸೇವೆಯನ್ನು ನಿಲ್ಲಿಸಲಾಗಿದೆ. ಹಾಗಂತ ಚಿಂತಿಸಬೇಕಿಲ್ಲ. ಇಲ್ಲಿದೆ ನೋಡಿ ಆನ್‌ಲೈನ್‌ನಲ್ಲಿ ಆಲ್ಕೋಹಾಲ್ ಆರ್ಡರ್ ಮಾಡುವ ಆ್ಯಪ್.
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಕಾರಣ ಹೆಚ್ಚಿನ ಜನರು ಅದರಲ್ಲೇ ಆರ್ಡರ್ ಮಾಡುತ್ತಾರೆ. ಅದು ಬಟ್ಟೆಗಳನ್ನು ಆರ್ಡರ್ ಮಾಡುವುದು ಇರಬಹುದು ಅಥವಾ ಸ್ಮಾರ್ಟ್ಫೋನ್, ಇತರೆ ಎಲೆಕ್ಟ್ರಾನಿಕ್ ವಸ್ತು ಆರ್ಡರ್ ಮಾಡುವುದು, ಫುಡ್ ಆರ್ಡರ್ ಮಾಡುವುದು ಹೀಗೆ ಹೆಚ್ಚಿನ ಅಗತ್ಯ ವಸ್ತುಗಳನ್ನು ಆನ್ಲೈನ್ನಲ್ಲೇ ಆರ್ಡರ್ ಮಾಡಿ ಪಡೆದುಕೊಳ್ಳುತ್ತಾರೆ. ಆದರೆ ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಲಾಗದ ಒಂದು ವಿಷಯ ಎಂದರೆ ಆಲ್ಕೋಹಾಲ್ (Alcohol). ಇದು ಮದ್ಯದ ಅಂಗಡಿಯಿಂದಲೇ ಖರೀದಿಸಬೇಕಾದ ಏಕೈಕ ವಸ್ತು.
ಆದರೆ, ಇದೀಗ ಆನ್‌ಲೈನ್‌ನಲ್ಲಿ ಎಣ್ಣೆಯನ್ನು ಆರ್ಡರ್ ಮಾಡಬಹುದಾದ ಆಯ್ಕೆ ಒಂದಿದೆ. ಹಾಗಾದರೆ ಆನ್‌ಲೈನ್‌ನಲ್ಲಿ ಮದ್ಯವನ್ನು ಹೇಗೆ ಆರ್ಡರ್ ಮಾಡಬಹುದು ಎಂಬುದನ್ನು ಇಂದು ನಾವು ನಿಮಗೆ ಹೇಳುತ್ತೇವೆ. ಆದರೆ, ಸದ್ಯಕ್ಕೆ ಈ ಆಯ್ಕೆ ದೆಹಲಿಯಲ್ಲಿ ಮಾತ್ರ ಲಭ್ಯವಿದೆ. ಸದ್ಯದಲ್ಲೇ ಬೆಂಗಳೂರಿಗೂ ಬರಬಹುದು.
ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಇಂದೇ ಖರೀದಿಸಿ
ಈ ಹಿಂದೆ ಬಳಕೆದಾರರು ಬಿಗ್ ಬಾಸ್ಕೆಟ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ಆಲ್ಕೋಹಾಲ್ ಅನ್ನು ಆರ್ಡರ್ ಮಾಡಬಹುದಿತ್ತು, ಆದರೆ ಈಗ ಆಲ್ಕೋಹಾಲ್ ರಹಿತ ಪಾನೀಯಗಳ ಆಯ್ಕೆ ಮಾತ್ರ ಅದರಲ್ಲಿ ಲಭ್ಯವಿದೆ. ಆದರೆ ಚಿಂತಿಸಬೇಡಿ, ಈ ಪ್ಲಾಟ್‌ಫಾರ್ಮ್ ಮೂಲಕ ನೀವು ಆನ್‌ಲೈನ್‌ನಲ್ಲಿ ಆಲ್ಕೋಹಾಲ್ ಅನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ.
ಆನ್‌ಲೈನ್ ಮದ್ಯದ ಅಂಗಡಿ:
ಇದು ಆನ್‌ಲೈನ್ ಆಲ್ಕೋಹಾಲ್ ವಿತರಣಾ ಸೇವೆಯನ್ನು ಒದಗಿಸುವ ಆಲ್ಕೋಹಾಲ್ ಅಂಗಡಿಯಾಗಿದೆ. ಈ ಅಂಗಡಿಯಲ್ಲಿ ನೀವು ವೈನ್, ಬಿಯರ್, ವಿಸ್ಕಿ, ರಮ್, ವೋಡ್ಕಾ ಮತ್ತು ಸಿಗರೇಟ್ ಇತ್ಯಾದಿಗಳನ್ನು ಆರ್ಡರ್ ಮಾಡಬಹುದು.
ಆನ್‌ಲೈನ್‌ನಲ್ಲಿ ಆಲ್ಕೋಹಾಲ್ ಆರ್ಡರ್ ಮಾಡುವುದು ಹೇಗೆ?:
- ಆನ್‌ಲೈನ್‌ನಲ್ಲಿ ಆಲ್ಕೋಹಾಲ್ ಆರ್ಡರ್ ಮಾಡಲು ಮೊದಲಿಗೆ ನೀವು ಗೂಗಲ್ಗೆ ಹೋಗಿ ಮತ್ತು ಈ ಲಿಂಕ್ ಅನ್ನು ಪೇಸ್ಟ್ ಮಾಡಿ https://onlinealcohol.in/online-alcohol/delhi/
- ನೀವು ಈ ಪುಟಕ್ಕೆ ಭೇಟಿ ನೀಡಿದಾಗ ಅಲ್ಲಿ ನಿಮ್ಮ ವಯಸ್ಸನ್ನು ಹಾಕಬೇಕು
- ನಂತರ ನಿಮ್ಮ ಹೆಸರು, ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯನ್ನು ಬರೆಯಿರಿ ಮತ್ತು ಕಳುಹಿಸು ಆಯ್ಕೆಯನ್ನು ಕ್ಲಿಕ್ ಮಾಡಿ.
- ಈಗ ನಿಮ್ಮ ಸ್ಥಳವನ್ನು ನಮೂದಿಸುವ ಆಯ್ಕೆಯನ್ನು ತೋರಿಸಲಾಗುತ್ತದೆ, ನಿಮ್ಮ ಸ್ಥಳವನ್ನು ಅಲ್ಲಿ ಭರ್ತಿ ಮಾಡಿ.
- ನಂತರ, ಪರದೆಯ ಮೇಲೆ ಕೇಳಲಾಗುವ ವಿವರಗಳನ್ನು ಟೈಪ್ ಮಾಡಿ ಮತ್ತು ನಿಮ್ಮ ನೆಚ್ಚಿನ ಆಲ್ಕೋಹಾಲ್ ಅನ್ನು ಆರಿಸಿ ಆರ್ಡರ್ ಮಾಡಿ.
ಮೊಬೈಲ್ ಅಪ್ಲಿಕೇಶನ್ ಅಥವಾ ಆನ್‌ಲೈನ್ ವೆಬ್ ಪೋರ್ಟಲ್ ಮೂಲಕ ಆರ್ಡರ್ ಬಂದಾಗ ಮಾತ್ರ L-13 ಪರವಾನಗಿ ಹೊಂದಿರುವವರು ಮದ್ಯದನ್ನು ಮನೆಗೆ ವಿತರಣೆಯನ್ನು ಮಾಡುತ್ತಾರೆ. ಇದನ್ನು ಹೊರತುಪಡಿಸಿ, ಯಾವುದೇ ಸ್ಟೂಡೆಂಟ್ ಹಾಸ್ಟೆಲ್, ಕಚೇರಿ ಮತ್ತು ಸಂಸ್ಥೆಗೆ ವಿತರಣೆಯನ್ನು ಮಾಡಲಾಗುವುದಿಲ್ಲ.
ಗಮನಿಸಿ: ಈ ಮಾಹಿತಿಯನ್ನು ಅಂಗಡಿಯ ಪೇಜ್ನಲ್ಲಿರುವ ಪ್ರಕಾರ ನೀಡಲಾಗಿದೆ, ದಯವಿಟ್ಟು ಆರ್ಡರ್ ಮಾಡುವ ಮೊದಲು ಒಮ್ಮೆ ಪರಿಶೀಲಿಸಿ. ಯಾವುದೇ ಅಮಲು ಪದಾರ್ಥಗಳನ್ನು ಸೇವಿಸುವುದು ಅಥವಾ ಯಾವುದೇ ರೀತಿಯ ಮದ್ಯವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ