ರಿಯಲ್ ಮಿಯ ಹೊಸ ಬಜೆಟ್ ಫೋನ್ ರಿಯಲ್ ಮಿ 11x 5G ಮಾರಾಟ ಆರಂಭ: ಆಫರ್ ಏನಿದೆ?
Realme 11x 5G Sale Live: ರಿಯಲ್ ಮಿ 11X ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ 14,999 ರೂ. ಇದೆ. ರಿಯಲ್ ಮಿ ವಾರ್ಷಿಕೋತ್ಸವದ ಭಾಗವಾಗಿ ಇಂದು ಮಧ್ಯಾಹ್ನ 12:30 ರಿಂದ ಈ ಫೋನ್ ಮಾರಾಟ ಕಾಣುತ್ತಿದೆ.
ಈ ವಾರದ ಆರಂಭದಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ರಿಯಲ್ ಮಿ 11x 5G (Realme 11x 5G) ಸ್ಮಾರ್ಟ್ಫೋನ್ ಇದೀಗ ಖರೀದಿಗೆ ಸಿಗುತ್ತಿದೆ. ಬಜೆಟ್ ವಿಭಾಗದಲ್ಲಿರುವ ಬೆಸ್ಟ್ ಫೋನ್ ಇದಾಗಿದ್ದು, ಬೆಲೆಗೂ ಮೀರಿದ ಫೀಚರ್ಸ್ ಇದರಲ್ಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC, 6.72-ಇಂಚಿನ ಡಿಸ್ ಪ್ಲೇ, ದೊಡ್ಡ 5000mAh ಬ್ಯಾಟರಿ ಸೇರಿದಂತೆ ಅನೇಕ ವಿಶೇಷತೆಗಳಿಂದ ಈ ಸ್ಮಾರ್ಟ್ಫೋನ್ ಕೂಡಿದೆ. ಹಾಗಾದರೆ ರಿಯಲ್ ಮಿ 11x 5G ಬೆಲೆ ಎಷ್ಟು?, ಎಲ್ಲಿ ಖರೀದಿಸಬಹುದು?, ಇಲ್ಲಿದೆ ಸಂಪೂರ್ಣ ಮಾಹಿತಿ.
ಭಾರತದಲ್ಲಿ ರಿಯಲ್ ಮಿ 11x 5G ಬೆಲೆ:
- ರಿಯಲ್ ಮಿ 11X ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ 14,999 ರೂ. ಇದೆ ಅಂತೆಯೆ ಇದರ ಮತ್ತು 8GB + 128GB ಆವೃತ್ತಿಗೆ 15,999 ರೂ. ನಿಗದಿ ಮಾಡಲಾಗಿದೆ.
- ರಿಯಲ್ ಮಿ ವಾರ್ಷಿಕೋತ್ಸವದ ಭಾಗವಾಗಿ ಇಂದು ಮಧ್ಯಾಹ್ನ 12:30 ರಿಂದ ಈ ಫೋನ್ ಮಾರಾಟ ಕಾಣುತ್ತಿದೆ.
- ಈ ಹ್ಯಾಂಡ್‌ಸೆಟ್‌ನ ಅಧಿಕೃತ ಮಾರಾಟವು ಆಗಸ್ಟ್ 30 ರಂದು ಪ್ರಾರಂಭವಾಗುತ್ತದೆ.
- ರಿಯಲ್ ಮಿ 11x 5G ಮಿಡ್‌ನೈಟ್ ಬ್ಲ್ಯಾಕ್ ಮತ್ತು ಡಾನ್ ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರುತ್ತದೆ .
- ಕಂಪನಿಯು ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಿಗೆ 1,000 ರೂ. ರಿಯಾಯಿತಿಯನ್ನು ನೀಡುತ್ತಿದೆ. ಮತ್ತು 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆ ನೀಡಲಾಗಿದೆ.
ರಿಯಲ್ ಮಿ 11x 5G ಅನ್ನು ಎಲ್ಲಿ ಖರೀದಿಸಬಹುದು?:
ರಿಯಲ್ ಮಿ 11x 5G ಸ್ಮಾರ್ಟ್ಫೋನ್ ಇಂದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮತ್ತು ರಿಯಲ್ ಮಿಯ ಅಧಿಕೃತ ವೆಬ್‌ಸೈಟ್ ಮೂಲಕ ರಿಯಲ್ ವಾರ್ಷಿಕೋತ್ಸವದ ಮಾರಾಟದ ಭಾಗವಾಗಿ ಲಭ್ಯವಿರುತ್ತದೆ.
ರಿಯಲ್ ಮಿ 11x 5G ಫೀಚರ್ಸ್:
ಡಿಸ್‌ಪ್ಲೇ: ರಿಯಲ್ ಮಿ 11x 5G ಫೋನ್ 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 680 nits ಪೀಕ್ ಬ್ರೈಟ್‌ನೆಸ್‌ನೊಂದಿಗೆ 6.72-ಇಂಚಿನ FHD+ ಡಿಸ್ ಪ್ಲೇ ಯನ್ನು ಹೊಂದಿದೆ.
ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಬೆಲೆ ಸೋರಿಕೆ, ಈ ಬಾರಿ ಏನೆಲ್ಲ ಫೀಚರ್ಸ್ ಇರಲಿದೆ?
ಪ್ರೊಸೆಸರ್: ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಜೊತೆಗೆ Mali-G57 MC2 GPU ಹೊಂದಿದೆ.
RAM ಮತ್ತು ಸಂಗ್ರಹಣೆ: ರಿಯಲ್ ಮಿ 11x 5G ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡಲಾಗುತ್ತದೆ: 6GB + 128GB ಮತ್ತು 8GB + 128GB ಆಯ್ಕೆಗಳು.
ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI 4.0 ಕಸ್ಟಮ್ ಸ್ಕಿನ್‌ನಿಂದ ರನ್ ಆಗುತ್ತದೆ.
ಕ್ಯಾಮೆರಾಗಳು: ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದು 64MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಸೆಕೆಂಡರಿ ಸಂವೇದಕವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ.
ಬ್ಯಾಟರಿ, ಚಾರ್ಜಿಂಗ್: ರಿಯಲ್ ಮಿ 11x 5G ಫೋನ್ 5,000mAh ಬ್ಯಾಟರಿಯನ್ನು 33W SUPERVOOC ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಪ್ಯಾಕ್ ಮಾಡಲಾಗಿದೆ.
ಇತರೆ: ಭದ್ರತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಹೈ-ರೆಸ್ ಆಡಿಯೋ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ