ಒಂದೇ ವಾಟ್ಸ್​ಆ್ಯಪ್​ನಲ್ಲಿ ಅನೇಕ ಅಕೌಂಟ್: ಹೊಸ ಪ್ರಯೋಗಕ್ಕೆ ಮುಂದಾದ ಮೆಟಾ

WhatsApp New Switch Feature: ಈ ಹೊಸ ವೈಶಿಷ್ಟ್ಯದ ಮೂಲಕ ಒಂದು ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಬಹುದು. ಈಗಾಗಲೇ ಈ ಆಯ್ಕೆ ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್​ನಲ್ಲಿ ಇದೆ. ಶೀಘ್ರದಲ್ಲೇ ವಾಟ್ಸ್​ಆ್ಯಪ್​ ತನ್ನ ಬಳಕೆದಾರರ ಈ ಆಯ್ಕೆಯನ್ನು ನೀಡಲಿದೆ

ಒಂದೇ ವಾಟ್ಸ್​ಆ್ಯಪ್​ನಲ್ಲಿ ಅನೇಕ ಅಕೌಂಟ್: ಹೊಸ ಪ್ರಯೋಗಕ್ಕೆ ಮುಂದಾದ ಮೆಟಾ
WhatsApp Switch Feature
Follow us
Vinay Bhat
|

Updated on: Aug 11, 2023 | 1:51 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅನೇಕ ನೂತನ ಆಯ್ಕೆಗಳು ಪರೀಕ್ಷಾ ಹಂತದಲ್ಲಿದ್ದು, ಸದ್ಯದಲ್ಲೇ ಇದುಕೂಡ ಬಳಕೆದಾರರಿಗೆ ಸಿಗಲಿದೆ. ಇದರ ನಡುವೆ ವಾಟ್ಸ್​ಆ್ಯಪ್ ಮತ್ತೊಂದು ಉಪಯುಕ್ತ ಫೀಚರ್ ನೀಡಲು ಮುಂದಾಗಿದೆ. ಇನ್ನುಂದೆ ನಿಮಗೆ ಈ ಹೊಸ ವೈಶಿಷ್ಟ್ಯದ ಮೂಲಕ ಒಂದೇ ವಾಟ್ಸ್​ಆ್ಯಪ್​ನಲ್ಲಿ ವಿಭಿನ್ನ ಖಾತೆಗಳನ್ನು ಬಳಸಬಹುದಾಗಿದೆ.

ಶೀಘ್ರದಲ್ಲೇ ವಾಟ್ಸ್​ಆ್ಯಪ್​ ತನ್ನ ಬಳಕೆದಾರರ ಈ ಆಯ್ಕೆಯನ್ನು ನೀಡಲಿದೆ ಎಂದು ವರದಿ ಆಗಿದೆ. ಸುಲಭವಾಗಿ ಹೇಳಬೇಕೆಂದರೆ, ಈ ಹೊಸ ವೈಶಿಷ್ಟ್ಯದ ಮೂಲಕ ಒಂದು ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನಲ್ಲಿ ಅನೇಕ ವಾಟ್ಸ್​ಆ್ಯಪ್​ ಖಾತೆಗಳನ್ನು ಸ್ವಿಚ್ ರೀತಿಯಲ್ಲಿ ತೆರೆಯಬಹುದು. ಈಗಾಗಲೇ ಈ ಆಯ್ಕೆ ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್​ನಲ್ಲಿ ಇದೆ.

ಪ್ರಸ್ತುತ, ವಾಟ್ಸ್​ಆ್ಯಪ್​ ಬಳಕೆದಾರರಿಗೆ ಒಂದು ಮೊಬೈಲ್​ನಲ್ಲಿ ಒಂದು ಖಾತೆಯೊಂದಿಗೆ ಲಾಗ್ ಇನ್ ಮಾಡಲು ಮಾತ್ರ ಅನುಮತಿಸುತ್ತದೆ. ಆದ್ದರಿಂದ, ವಿಭಿನ್ನ ಫೋನ್ ಸಂಖ್ಯೆಗಳೊಂದಿಗೆ ಎರಡು ವಾಟ್ಸ್​ಆ್ಯಪ್​ ಖಾತೆಗಳನ್ನು ಬಳಸುವ ಬಳಕೆದಾರರು ಎರಡು ಮೊಬೈಲ್​ಗಳನ್ನು ಬಳಸಬೇಕಾಗುತ್ತದೆ.

ಇದನ್ನೂ ಓದಿ
Image
ಸ್ಮಾರ್ಟ್​ಫೋನ್​ನಿಂದ ಟ್ವಿಟ್ಟರ್ ಮೂಲಕ ಲಕ್ಷ ಲಕ್ಷ ಹಣ ಗಳಿಸಿ: ನೀವು ಮಾಡಬೇಕಾಗಿರುವುದು ಇಷ್ಟೇ
Image
ಅಕ್ಟೋಬರ್​ನಲ್ಲಿ ಅಮೆಜಾನ್​ನಿಂದ ಪ್ರೈಮ್ ಬಿಗ್ ಡೇ ಡೀಲ್: ನೀವು ಪ್ರೈಮ್ ಸದಸ್ಯರಾಗುವುದು ಹೇಗೆ?
Image
ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ಗೊತ್ತಾ?
Image
15,000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್​ ಬೇಕೇ?: ಇಲ್ಲಿದೆ ನೋಡಿ 5 ಆಯ್ಕೆ

6,000mAh ಬ್ಯಾಟರಿ ಸಹಿತ ಮಾರುಕಟ್ಟೆಗೆ ಬಂತು ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್

ಈ ವೈಶಿಷ್ಟ್ಯವು ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ ಮತ್ತು ಮುಂಬರುವ ವಾರಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಹೊರತರಲಾಗುವುದು ಎಂದು ವರದಿಗಳು ಹೇಳಿದೆ. ಆಂಡ್ರಾಯ್ಡ್ ಆವೃತ್ತಿ 2.23.17.8 ಗಾಗಿ ವಾಟ್ಸ್​ಆ್ಯಪ್​ ಬೀಟಾವನ್ನು ಅಪ್‌ಡೇಟ್ ಮಾಡಿದರೆ ಈ ಆಯ್ಕೆ ಸಿಗಲಿದೆ. ಆದಾಗ್ಯೂ ಕೆಲವು ಬಳಕೆದಾರರಿಗೆ ಹಿಂದಿನ 2.23.17.7 ಆವೃತ್ತಿಯಲ್ಲಿ ಈ ವೈಶಿಷ್ಟ್ಯವನ್ನು ಉಪಯೋಗಿಸಲು ಸಾಧ್ಯವಾಗುತ್ತಿದೆ.

ಈ ವೈಶಿಷ್ಟ್ಯ ಬಳಸಲು, ಬಳಕೆದಾರರು QR ಕೋಡ್ ಬಟನ್ ಬಳಿ ಇರುವ ಬಾಣದ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಹೊಸ ವಾಟ್ಸ್​ಆ್ಯಪ್​ ಖಾತೆಯನ್ನು ಸೇರಿಸಲು ಸಾಧ್ಯವಾಗುತ್ತದೆ. ಅದೇ ಮೆನುವಿನಲ್ಲಿ ಬೇರೆ ಖಾತೆಗೆ ಬದಲಾಯಿಸುವ ಆಯ್ಕೆ ಇದೆ. ಹೊಸದಾಗಿ ಸೇರಿಸಲಾದ ಖಾತೆಯನ್ನು ಲಾಗ್ ಔಟ್ ಮಾಡಲು ಆಯ್ಕೆ ಕೂಡ ನೀಡಲಾಗಿದೆ.

ಈ ವೈಶಿಷ್ಟ್ಯವು ಬಳಕೆದಾರರಿಗೆ ಬಹು ಖಾತೆಗಳನ್ನು ನಿರ್ವಹಿಸುವ ಅನುಕೂಲವನ್ನು ಒದಗಿಸುವುದಲ್ಲದೆ, ಒಂದೇ ಅಪ್ಲಿಕೇಶನ್‌ನಲ್ಲಿ ಖಾಸಗಿ ಚಾಟ್‌ಗಳು, ಕೆಲಸದ ಸಂಭಾಷಣೆಗಳು ಮತ್ತು ಇತರ ಸಂದೇಶಗಳಿಗೆ ಸಹಾಯ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ