- Kannada News Photo gallery Here is the best smartphones under RS 15,000 in India Redmi Samsung Realme and More
15,000 ರೂ. ಒಳಗೆ ಆಕರ್ಷಕ ಸ್ಮಾರ್ಟ್‌ಫೋನ್ ಬೇಕೇ?: ಇಲ್ಲಿದೆ ನೋಡಿ 5 ಆಯ್ಕೆ
Smartphones under Rs. 15000: ಈಗಿನ ಹೆಚ್ಚಿನ ಜನರು ಬಜೆಟ್ ಬೆಲೆಯ ಫೋನುಗಳ ಕಡೆ ಮುಖ ಮಾಡಿರುವುದರಿಂದ 20,000 ರೂ. ಒಳಗಡೆಯೇ ಹೆಚ್ಚಿನ ಮೊಬೈಲ್ ಅನಾವರಣಗೊಳ್ಳುತ್ತಿದೆ. ಹಾಗಾದರೆ, ಸದ್ಯ ಮಾರುಕಟ್ಟೆಯಲ್ಲಿ 15,000 ರೂ. ಒಳಗಡೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ಫೋನ್ಸ್ ಯಾವುದು ಎಂಬುದನ್ನು ನೋಡೋಣ.
Updated on: Aug 11, 2023 | 6:55 AM

ಇಂದು ಐದು ಸಾವಿರದಿಂದ ಹಿಡಿದು ಒಂದು ಲಕ್ಷಕ್ಕೂ ಅಧಿಕ ಬೆಲೆಯ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿದೆ. ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಫೋನುಗಳು ಅನಾವರಣಗೊಳ್ಳುತ್ತದೆ. ಇದರಲ್ಲಿ ಎಲ್ಲವೂ ಯಶಸ್ಸು ಸಾಧಿಸುವುದಿಲ್ಲ.

ಈಗಂತು ಕಡಿಮೆ ಬೆಲೆಗೆ ದೊರಕುವ ಆಕರ್ಷಕ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಇರುವಂತಹ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ಬೇಡಿಕೆ ಇದೆ. ಇದರಲ್ಲಿ ರಿಯಲ್ ಮಿ, ಸ್ಯಾಮ್ಸಂಗ್ ನಂತಹ ಫೋನುಗಳು ಹೆಚ್ಚು ಕಾಣಿಸಿಕೊಂಡಿವೆ. ಇವುಗಳು 5ಜಿ ಬೆಂಬಲವನ್ನು ಕೂಡ ಪಡೆದುಕೊಂಡಿದೆ.

ಈಗಿನ ಹೆಚ್ಚಿನ ಜನರು ಬಜೆಟ್ ಬೆಲೆಯ ಫೋನುಗಳ ಕಡೆ ಮುಖ ಮಾಡಿರುವುದರಿಂದ 20,000 ರೂ. ಒಳಗಡೆಯೇ ಹೆಚ್ಚಿನ ಮೊಬೈಲ್ ಅನಾವರಣಗೊಳ್ಳುತ್ತಿದೆ. ಹಾಗಾದರೆ, ಸದ್ಯ ಮಾರುಕಟ್ಟೆಯಲ್ಲಿ 15,000 ರೂ. ಒಳಗಡೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್ಫೋನ್ಸ್ ಯಾವುದು ಎಂಬುದನ್ನು ನೋಡೋಣ.

ರಿಯಲ್ ಮಿ ನಾರ್ಜೊ N53: ಈ ಸ್ಮಾರ್ಟ್‌ಫೋನ್ 6GB+128GB ಸಂಗ್ರಹಣೆ ಮತ್ತು 33W ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದು 90 Hz ರಿಫ್ರೆಶ್ರೇಟ್ ನೀಡಲಾಗಿದ್ದು ಸ್ಮೂತ್ ಡಿಸ್ ಪ್ಲೇಯೊಂದಿದೆ ಬಂದಿದೆ. ನೀವು ಇದನ್ನು ಅಮೆಜಾನ್‌ನಲ್ಲಿ ಶೇ. 15 ರಷ್ಟು ರಿಯಾಯಿತಿಯೊಂದಿಗೆ ಕೇವಲ 10,999 ರೂ. ಗೆ ಖರೀದಿಸಬಹುದು.

ಐಕ್ಯೂ Z6 ಲೈಟ್ 5G: ಇದು 6GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಅಮೆಜಾನ್‌ನಲ್ಲಿ ಲಭ್ಯವಿರುವ ಸ್ಟೆಲ್ಲರ್ ಗ್ರೀನ್ ಮಾದರಿಯಾಗಿದೆ. ಇದು ವಿಶ್ವದ ಮೊದಲ ಸ್ನಾಪ್ಡ್ರಾಗನ್ 4 Gen 1 ಸ್ಮಾರ್ಟ್‌ಫೋನ್. ಅಮೆಜಾನ್ ಈ ಸ್ಮಾರ್ಟ್‌ಫೋನ್ ಮೇಲೆ ಶೇ. 28 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಸದ್ಯ ಈ ಫೋನನ್ನು ನೀವು 14,499 ರೂ. ಗೆ ನಿಮ್ಮದಾಗಿಸಬಹುದು. ಇದರ ಮೂಲಬೆಲೆ ರೂ. 19,999.

ಸ್ಯಾಮ್ಸಂಗ್ ಗ್ಯಾಲಕ್ಸಿ M13: ಇದು ಅಕ್ವಾ ಗ್ರೀನ್ ಮಾದರಿಯಾಗಿದ್ದು, ಅಮೆಜಾನ್‌ನಲ್ಲಿ ಫ್ಲಾಟ್ 27% ರಿಯಾಯಿತಿಯೊಂದಿಗೆ ಲಭ್ಯವಿದೆ. 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಜೊತೆಗೆ 6000mAh ಬ್ಯಾಟರಿಯನ್ನು ಹೊಂದಿದೆ. ನೀವು ಇದನ್ನು ಕೇವಲ 10,999 ರೂ.ಗೆ ಖರೀದಿಸಬಹುದು.

ಸ್ಯಾಮ್ಸಂಗ್ ಗ್ಯಾಲಕ್ಸಿ M14 5G: ಈ ಫೋನ್4GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದರಲ್ಲಿ 50MP ಟ್ರಿಪಲ್ ಕ್ಯಾಮ್ ಜೊತೆಗೆ 6000 mAhಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 13 ಜೊತೆಗೆ 5nm ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಅಮೆಜಾನ್‌ನಲ್ಲಿ 17% ರಿಯಾಯಿತಿಯೊಂದಿಗೆ ಲಭ್ಯವಿದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 14990 ರೂ. ಗೆ ಪಡೆದುಕೊಳ್ಳಬಹುದು.

ರೆಡ್ಮಿ 11 ಪ್ರೈಮ್ 5G: ಈ 5G ಸ್ಮಾರ್ಟ್‌ಫೋನ್ MTK ಡೈಮೆನ್ಸಿಟಿ 700 ಮತ್ತು 50 MP ಡ್ಯುಯಲ್ ಕ್ಯಾಮೆರಾ ಜೊತೆಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 19% ರಿಯಾಯಿತಿ ಲಭ್ಯವಿದ್ದು, 12999ರೂ. ಗೆ ಪಡೆದುಕೊಳ್ಳಬಹುದು. ಇದರ ಜೊತೆಗೆ 12,250 ರೂ. ರವರೆಗಿನ ಎಕ್ಸ್ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ.



















