ಸ್ಮಾರ್ಟ್​ಫೋನ್​ನಿಂದ ಟ್ವಿಟ್ಟರ್ ಮೂಲಕ ಲಕ್ಷ ಲಕ್ಷ ಹಣ ಗಳಿಸಿ: ನೀವು ಮಾಡಬೇಕಾಗಿರುವುದು ಇಷ್ಟೇ

How to Earn Money from Twitter: ಟ್ವಿಟ್ಟರ್​ನಿಂದ ಬಳಕೆದಾರರು ಇಂದು ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ನೀವು ಕೂಡ ದೊಡ್ಡ ಮಟ್ಟದ ಹಣವನ್ನು ಸಂಪಾದಿಸುವ ಆಲೋಚನೆಯಲ್ಲಿದ್ದರೆ ಈ ವಿಧಾನವನ್ನು ಅನುಸರಿಸುವ ಮೂಲಕ ಹಣ ಗಳಿಸಲು ಪ್ರಾರಂಭಿಸಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹಣ ಗಳಿಸಿದ ಬಗ್ಗೆ ಸ್ಕ್ರೀನ್ ಶಾಟ್ ಕೂಡ ಹಂಚಿಕೊಂಡಿದ್ದಾರೆ.

ಸ್ಮಾರ್ಟ್​ಫೋನ್​ನಿಂದ ಟ್ವಿಟ್ಟರ್ ಮೂಲಕ ಲಕ್ಷ ಲಕ್ಷ ಹಣ ಗಳಿಸಿ: ನೀವು ಮಾಡಬೇಕಾಗಿರುವುದು ಇಷ್ಟೇ
Twitter X
Follow us
Vinay Bhat
|

Updated on: Aug 11, 2023 | 12:40 PM

ಇಂದು ಹಣ ಗಳಿಸಲು ಅನೇಕ ಮಾರ್ಗಗಳಿವೆ. ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಡಿತವಿದ್ದರೆ ಸುಲಭವಾಗಿ ಹಣ ಸಂಪಾದಿಸಬಹುದು. ನೀವು ಸೋಷಿಯಲ್ ಮೀಡಿಯಾ ಹಬ್ ಆಗಿ ಲಕ್ಷ ಲಕ್ಷ ಹಣ ಗಳಿಸಬಹುದು. ಯೂಟ್ಯೂಬ್, ಫೇಸ್​ಬುಕ್, ಇನ್​ಸ್ಟಾಗ್ರಾಮ್ ಮೂಲಕ ಈಗಾಗಲೇ ಅನೇಕ ಜನರು ಹಣ ಗಳಿಸುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಇದೀಗ ಎಕ್ಸ್ (Twitter) ಮೂಲಕವೂ ಹಣ ಸಂಪಾದಿಸಬಹುದು. ಟ್ವಿಟ್ಟರ್ ತನ್ನ ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ಒದಗಿಸಿದೆ. ಅನೇಕರು ಹಣವನ್ನು ಸಂಪಾದಿಸಿದ್ದಾರೆ ಕೂಡ. ತಮ್ಮ ಆದಾಯದ ಬಗ್ಗೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಜನರು ಹಂಚಿಕೊಂಡ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಟ್ವಿಟ್ಟರ್ (X) ಬಳಕೆದಾರರು ಹಣ ಪಡೆದುಕೊಳ್ಳುತ್ತಿದ್ದಾರೆ. ನೀವು ಕೂಡ ಟ್ವಿಟ್ಟರ್​ನಿಂದ ಹಣ ಗಳಿಸುವ ಯೋಚನೆಯಲ್ಲಿದ್ದರೆ, ಈ ಸರಳ ವಿಧಾನವನ್ನು ಅನುಸರಿಸಿದರೆ ಆಯಿತು. ಆದರೆ, ಇದಕ್ಕಾಗಿ ನೀವು ಕಂಪನಿಯ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಬೇಕು.

ಇದನ್ನೂ ಓದಿ
Image
ಅಕ್ಟೋಬರ್​ನಲ್ಲಿ ಅಮೆಜಾನ್​ನಿಂದ ಪ್ರೈಮ್ ಬಿಗ್ ಡೇ ಡೀಲ್: ನೀವು ಪ್ರೈಮ್ ಸದಸ್ಯರಾಗುವುದು ಹೇಗೆ?
Image
ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ಗೊತ್ತಾ?
Image
15,000 ರೂ. ಒಳಗೆ ಆಕರ್ಷಕ ಸ್ಮಾರ್ಟ್​ಫೋನ್​ ಬೇಕೇ?: ಇಲ್ಲಿದೆ ನೋಡಿ 5 ಆಯ್ಕೆ
Image
6,000mAh ಬ್ಯಾಟರಿ ಸಹಿತ ಮಾರುಕಟ್ಟೆಗೆ ಬಂತು ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್

ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಝಡ್​ಟಿಇ ಬ್ಲೇಡ್ A73 5G ಸ್ಮಾರ್ಟ್​ಫೋನ್: ಬೆಲೆ ಎಷ್ಟು?, ಏನು ಫೀಚರ್ಸ್?

ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಜಾಹೀರಾತುಗಳ ಆದಾಯ ಕಾರ್ಯಕ್ರಮದಲ್ಲಿ, ಅರ್ಹ ಬಳಕೆದಾರರು ಟ್ವಿಟ್ಟರ್​ ಜಾಹೀರಾತು ಆದಾಯದ ಪಾಲನ್ನು ಪಡೆಯುತ್ತಾರೆ ಎಂದಿದ್ದಾರೆ. ಅದರಂತೆ ನೀವು ಕೂಡ ಟ್ವಿಟ್ಟರ್​ನಿಂದ ಹಣ ಗಳಿಸಲು ಬಯಸಿದರೆ ಇದಕ್ಕಾಗಿ ನೀವು 500 ಕ್ಕಿಂತ ಫಾಲೋವರ್ಸ್ ಹೊಂದಿರಬೇಕು. ಇದಲ್ಲದೇ.. ನಿಮ್ಮ ಖಾತೆಯು ಕಳೆದ 3 ತಿಂಗಳಲ್ಲಿ 15 ಮಿಲಿಯನ್ ಟ್ವೀಟ್ ಇಂಪ್ರೆಶನ್‌ಗಳನ್ನು ಹೊಂದಿರಬೇಕು. ನೀವು ಈ  ಷರತ್ತುಗಳನ್ನು ಪೂರೈಸಿದರೆ, ನಂತರ ಎಲಾನ್ ಮಸ್ಕ್ ಜಾಹೀರಾತುಗಳ ಆದಾಯ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.

ಇತ್ತೀಚಿನ ದಿನಗಳಲ್ಲಿ ಅನೇಕ ಬಳಕೆದಾರರು ತಮ್ಮ ಗಳಿಕೆಯ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮ ಟ್ವಿಟ್ಟರ್​ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಸ್ಕ್ರೀನ್‌ಶಾಟ್‌ಗಳ ಪ್ರಕಾರ.. ಕ್ರಿಯೇಟರ್‌ಗಳು ಇನ್​ಸ್ಟಾಗ್ರಾಮ್ ಮತ್ತು ಫೇಸ್​ಬುಕ್ ನಂತೆಯೆ ಟ್ವಿಟ್ಟರ್​ನಿಂದ ಹಣವನ್ನು ಪಡೆಯಲು ಪ್ರಾರಂಭಿಸಿದ್ದಾರೆ.

Twitter (X) ಚಂದಾದಾರಿಕೆ ಯೋಜನೆ:

ನೀವು ಮೊದಲು ಟ್ವಿಟ್ಟರ್​ X ಚಂದಾದಾರಿಕೆಯ ಬಗ್ಗೆ ತಿಳಿದುಕೊಳ್ಳಬೇಕು. ಭಾರತದಲ್ಲಿನ ವೆಬ್ ಬಳಕೆದಾರರ ಮಾಸಿಕ ಚಂದಾದಾರಿಕೆ ಯೋಜನೆಯನ್ನು ರೂ. 650 ರಿಂದ ಆರಂಭವಾಗುತ್ತದೆ. ಅಂತೆಯೆ ಮೊಬೈಲ್ ಬಳಕೆದಾರರಿಗೆ 900 ರೂ. ಮಾಸಿಕ ಚಂದಾದಾರಿಕೆ ಯೋಜನೆ ಇದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್​ನ ವಾರ್ಷಿಕ ಯೋಜನೆಯನ್ನು ನೀವು ತೆಗೆದುಕೊಳ್ಳಬೇಕಾದರೆ ಇದಕ್ಕಾಗಿ ನೀವು ಪ್ರತಿ ವರ್ಷ 6,800 ರೂ. ಪಾವತಿಸಬೇಕು. ಈ ಯೋಜನೆಯನ್ನು ತೆಗೆದುಕೊಂಡರೆ ಇದು ಮಾಸಿಕ ಚಂದಾದಾರಿಕೆ ಯೋಜನೆಗಿಂತ ಅಗ್ಗವಾಗಿರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ