ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ಝಡ್ಟಿಇ ಬ್ಲೇಡ್ A73 5G ಸ್ಮಾರ್ಟ್‌ಫೋನ್: ಬೆಲೆ ಎಷ್ಟು?, ಏನು ಫೀಚರ್ಸ್?
ZTE Blade A73 5G Launched: ZTE ಬ್ಲೇಡ್ A73 5G ಹ್ಯಾಂಡ್‌ಸೆಟ್ ಯುನಿಸಕ್ T760 ಪ್ರೊಸೆಸರ್ ನಿಂದ ಚಾಲಿತವಾಗಿದ್ದು, ಭರ್ಜರಿ ಬ್ಯಾಟರಿ, ಕ್ಯಾಮೆರಾ ಆಯ್ಕೆ ಕೂಡ ನೀಡಲಾಗಿದೆ. ಸದ್ಯಕ್ಕೆ ಮಲೇಷ್ಯಾದಲ್ಲಿ ಬಿಡುಗಡೆ ಆಗಿರುವ ಈ ಫೋನ್ ಭಾರತಕ್ಕೂ ಬರುವ ಸಾಧ್ಯತೆ ಇದ್ದು ಬಜೆಟ್ ಬೆಲೆಗೆ ಲಭ್ಯವಿದೆ.
ಟೆಕ್ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡುವ ಚೀನಾ ಮೂಲದ ಪ್ರಸಿದ್ಧ ಝಡ್ಟಿಇ ಕಂಪನಿ ಇದೀಗ ಹೊಸ ಮೊಬೈಲ್ನೊಂದಿಗೆ ಬಂದಿದೆ. ಇಂದು ಮಾರುಕಟ್ಟೆಯಲ್ಲಿ ಝಡ್ಟಿಇ ಬ್ಲೇಡ್ A73 5G (ZTE Blade A73 5G) ಸ್ಮಾರ್ಟ್‌ಫೋನ್ ಅನಾವರಣಗೊಂಡಿದೆ. ಈ ಫೋನ್ 90Hz ರಿಫ್ರೆಶ್ ದರದೊಂದಿಗೆ 6.52-ಇಂಚಿನ HD+ ಡಿಸ್ ಪ್ಲೇಯನ್ನು ಹೊಂದಿದೆ. ZTE ಹ್ಯಾಂಡ್‌ಸೆಟ್ ಯುನಿಸಕ್ T760 ಪ್ರೊಸೆಸರ್ ನಿಂದ ಚಾಲಿತವಾಗಿದ್ದು, ಭರ್ಜರಿ ಬ್ಯಾಟರಿ, ಕ್ಯಾಮೆರಾ ಆಯ್ಕೆ ಕೂಡ ನೀಡಲಾಗಿದೆ. ಸದ್ಯಕ್ಕೆ ಮಲೇಷ್ಯಾದಲ್ಲಿ ಬಿಡುಗಡೆ ಆಗಿರುವ ಈ ಫೋನ್ ಭಾರತಕ್ಕೂ ಬರುವ ಸಾಧ್ಯತೆ ಇದ್ದು ಬಜೆಟ್ ಬೆಲೆಗೆ ಲಭ್ಯವಿದೆ.
ZTE ಬ್ಲೇರ್ A73 5G ಬೆಲೆ, ಲಭ್ಯತೆ:
ಮಲೇಷ್ಯಾದಲ್ಲಿ ಝಡ್ಟಿಇ ಬ್ಲೇಡ್ A73 5G ಬೆಲೆ MYR 749, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 13,500 ರೂ. ಇರಬಹುದು. ಈ ಸ್ಮಾರ್ಟ್‌ಫೋನ್ ಅನ್ನು ಕೇವಲ ಗ್ರೇ ಬಣ್ಣದ ಆಯ್ಕೆಯಲ್ಲಿ ನೀಡಲಾಗುತ್ತಿದೆ. ಇದು Shopee ವೆಬ್‌ಸೈಟ್‌ನಲ್ಲಿ ಮಾರಾಟ ಕಾಣಲಿದೆ.
ಯೂಟ್ಯೂಬ್ ಹೋಮ್ ಪೇಜ್ ಬ್ಲಾಂಕ್ ಆಗಿ ಕಾಣಿಸುತ್ತಾ?: ಹಾಗಿದ್ರೆ ಸೆಟ್ಟಿಂಗ್ನಲ್ಲಿ ಬದಲಾವಣೆ ಮಾಡಿ
ಝಡ್ಟಿಇ ಬ್ಲೇಡ್ A73 5G ಫೀಚರ್ಸ್:
ಹೊಸದಾಗಿ ಬಿಡುಗಡೆಯಾದ ಝಡ್ಟಿಇ ಬ್ಲೇಡ್ A73 5G ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್-ಸಾಮರ್ಥ್ಯವಿದ್ದು ಆಂಡ್ರಾಯ್ಡ್ 13 ಔಟ್-ಆಫ್-ಬಾಕ್ಸ್‌ನೊಂದಿಗೆ ಲೋಡ್ ಆಗಿದೆ. ಇದು 90Hz ರಿಫ್ರೆಶ್ ದರದೊಂದಿಗೆ 6.52-ಇಂಚಿನ HD+ ಡಿಸ್ಪ್ಲೇ ಮತ್ತು ಸೆಲ್ಫಿ ಕ್ಯಾಮೆರಾವನ್ನು ಹೊಂದಿರುವ ವಾಟರ್ ಡ್ರಾಪ್ ನಾಚ್ನೊಂದಿಗೆ ರಿಲೀಸ್ ಆಗಿದೆ.
ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ ಯುನಿಸೊಕ್ T760 ಪ್ರೊಸೆಸರ್ನಿಂದ ಚಾಲಿತವಾಗಿದ್ದು, 4GB RAM ಮತ್ತು 128GB ಅಂತರ್ಗತ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಹೆಚ್ಚುವರಿಯಾಗಿ, RAM ಅನ್ನು ಮೆಮೊರಿ ಫ್ಯೂಷನ್ ತಂತ್ರಜ್ಞಾನದ ಮೂಲಕ 4GB ವರೆಗೆ ವಿಸ್ತರಿಸಬಹುದು, ಇದು ವರ್ಚುವಲ್ RAM ಆಗಿ ಬಳಸಲು ಅನುಮತಿಸುತ್ತದೆ. ಇದು 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ ಝಡ್ಟಿಇ ಬ್ಲೇಡ್ A73 5G ಸ್ಮಾರ್ಟ್‌ಫೋನ್ 13-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದರ ಜೊತೆಗೆ 2-ಮೆಗಾಪಿಕ್ಸೆಲ್ ಕ್ಯಾಮೆರಾ ಕೂಡ ಇದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಝಡ್ಟಿಇ ಬ್ಲೇಡ್ A73 5G ನಲ್ಲಿನ ಸಂಪರ್ಕ ಆಯ್ಕೆಗಳು 5G, WiFi, Bluetooth 5.0, ಮತ್ತು NFC ಅನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಗೈರೊಸ್ಕೋಪ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಇಂದು ಮಲೇಷ್ಯಾದಲ್ಲಿ ಅನಾವರಣಗೊಂಡಿದೆ. ಕೆಲ ತಿಂಗಳ ಬಳಿಕ ಭಾರತಕ್ಕೂ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ