ಜಿಯೋ ಬಳಕೆದಾರರಿಗೆ ಧಮಾಕ ಆಫರ್: ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಬಂಪರ್ ಪ್ಲಾನ್ ಬಿಡುಗಡೆ

JIO Independence Day Offer: ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಜಿಯೋ ತನ್ನ ಬಳಕೆದಾರರಿಗೆ ಧಮಾಕ ಆಫರ್ ಬಿಡುಗಡೆ ಮಾಡಿದೆ. ಇದರಲ್ಲಿ ಕರೆ ಮತ್ತು ಡೇಟಾದ ಜೊತೆಗೆ ಜಿಯೋದ ಕೊಡುಗೆಯು ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ. ಇದರಿಂದ ಫುಡ್ ಆರ್ಡರ್, ಪ್ರಯಾಣ, ಆನ್‌ಲೈನ್ ಶಾಪಿಂಗ್ ಮತ್ತು ಹೆಚ್ಚಿನವುಗಳ ಮೇಲೆ ಬಂಪರ್ ರಿಯಾಯಿತಿ ಇದೆ.

ಜಿಯೋ ಬಳಕೆದಾರರಿಗೆ ಧಮಾಕ ಆಫರ್: ಸ್ವಾತಂತ್ರ್ಯ ದಿನೋತ್ಸವ ಪ್ರಯುಕ್ತ ಬಂಪರ್ ಪ್ಲಾನ್ ಬಿಡುಗಡೆ
JIO Offer
Follow us
Vinay Bhat
|

Updated on: Aug 10, 2023 | 2:22 PM

ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಪ್ರಸಿದ್ಧ ರಿಲಯನ್ಸ್ ಜಿಯೋ ಸ್ವಾತಂತ್ರ್ಯ ದಿನೋತ್ಸವದ (Independence Day) ಪ್ರಯುಕ್ತ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಬಂಪರ್ ಆಫರ್ ಅನ್ನು ಬಿಡುಗಡೆ ಮಾಡಿದೆ. 2,999 ರೂ. ವಾರ್ಷಿಕ ರೀಚಾರ್ಜ್ ಪ್ಯಾಕ್ ಅನ್ನು ಆಯ್ಕೆ ಮಾಡಿಕೊಂಡರೆ ಹಲವಾರು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಕರೆ ಮತ್ತು ಡೇಟಾದ ಜೊತೆಗೆ ಜಿಯೋದ (Jio) ಕೊಡುಗೆಯು ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ. ಇದರಿಂದ ಫುಡ್ ಆರ್ಡರ್, ಪ್ರಯಾಣ, ಆನ್‌ಲೈನ್ ಶಾಪಿಂಗ್ (Shopping) ಮತ್ತು ಹೆಚ್ಚಿನವುಗಳ ಮೇಲೆ ಬಂಪರ್ ರಿಯಾಯಿತಿ ಇದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋದ ವಾರ್ಷಿಕ 2,999 ರೂ. ಪ್ಲಾನ್‌ನಲ್ಲಿ ಬಳಕೆದಾರರು ದಿನಕ್ಕೆ 2.5GB ಡೇಟಾ ಉಚಿತ ಡೇಟಾ ಪ್ರಯೋಜನವನ್ನು ಪಡೆಯಬಹುದು. ಇದರ ಜೊತೆಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಗಳನ್ನು 365 ದಿನಗಳವರೆಗೆ ಉಚಿತವಾಗಿ ಪಡೆಯುತ್ತಾರೆ. ಮೂಲತಃ ಬಳಕೆದಾರರಿಗೆ ಒಟ್ಟು 912.5GB ಡೇಟಾ ಸಿಗಲಿದೆ. ಈ ಪ್ಯಾಕ್ 5G ಡೇಟಾವನ್ನು ನೀಡುತ್ತದೆ.

Fever Detector App: ಜ್ವರ ಬಂದರೆ ಸ್ಮಾರ್ಟ್‌ಫೋನ್ ಮೂಲಕವೇ ಪರೀಕ್ಷೆ ಮಾಡಲು ಹೊಸ ಅಪ್ಲಿಕೇಶನ್

ಇದನ್ನೂ ಓದಿ
Image
ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಿದ ಮೊದಲ ವಿಡಿಯೋ ಯಾವುದು ಗೊತ್ತೇ?: ಇಲ್ಲಿದೆ ನೋಡಿ
Image
ಇಂದಿನಿಂದ ಇನ್ಫಿನಿಕ್ಸ್ GT 10 ಪ್ರೊ ಮಾರಾಟ ಆರಂಭ: ಈ ಸ್ಟೈಲಿಶ್ ಸ್ಮಾರ್ಟ್​ಫೋನ್ ಖರೀದಿಗೆ ಕ್ಯೂ ಗ್ಯಾರಂಟ
Image
ಥೇಟ್ ವಾಟ್ಸ್​ಆ್ಯಪ್ ರೀತಿಯ ಹೊಸ ಆ್ಯಪ್ ಬಿಡುಗಡೆ ಮಾಡಿದ ಪಾಕಿಸ್ತಾನ: ಯಾವುದು?, ಏನು ಫೀಚರ್ಸ್ ಇದೆ?
Image
ಯೂಟ್ಯೂಬ್ ಹೋಮ್ ಪೇಜ್ ಬ್ಲಾಂಕ್ ಆಗಿ ಕಾಣಿಸುತ್ತಾ?: ಹಾಗಿದ್ರೆ ಸೆಟ್ಟಿಂಗ್​ನಲ್ಲಿ ಬದಲಾವಣೆ ಮಾಡಿ

ಇದರೊಂದಿಗೆ ಜಿಯೋದ ಸ್ವಾತಂತ್ರ್ಯ ದಿನದ ಕೊಡುಗೆ 2023 ಸಹ ಹೆಚ್ಚುವರಿವಾಗಿ ಪಡೆಯಬಹುದು. 249 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ವಿಗ್ಗಿ ಆರ್ಡರ್‌ಗಳ ಮೇಲೆ 100 ರೂ. ರಿಯಾಯಿತಿ ಘೋಷಿಸಲಾಗಿದೆ. ಹಾಗೆಯೇ ಯಾತ್ರಾ ಮೂಲಕ ಬುಕ್ ಮಾಡಿದ ಫ್ಲೈಟ್‌ಗಳಲ್ಲಿ 1,500 ರೂ. ವರೆಗಿನ ಉಳಿತಾಯ ಮಾಡಬಹುದು. ಹೆಚ್ಚುವರಿಯಾಗಿ, ಯಾತ್ರಾ ಮೂಲಕ ದೇಶೀಯ ಹೋಟೆಲ್ ಬುಕಿಂಗ್‌ನಲ್ಲಿ ಬಳಕೆದಾರರು 15 ಪ್ರತಿಶತ ರಿಯಾಯಿತಿಯನ್ನು (ರೂ. 4,000 ವರೆಗೆ) ಆನಂದಿಸಬಹುದು.

ಇನ್ನು Ajio ನಲ್ಲಿ ಆಯ್ದ ಉತ್ಪನ್ನಗಳಿಗೆ ರೂ. 999 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆರ್ಡರ್‌ಗಳ ಮೇಲೆ ರೂ. 200 ರಿಯಾಯಿತಿಯೂ ಇದೆ. Netmeds ನಲ್ಲಿ ಹೆಚ್ಚುವರಿ NMS ಸೂಪರ್‌ಕ್ಯಾಶ್ ಜೊತೆಗೆ ರೂ. 999 ಕ್ಕಿಂತ ಹೆಚ್ಚಿನ ಆರ್ಡರ್‌ಗಳಿಗೆ 20 ಪ್ರತಿಶತ ರಿಯಾಯಿತಿಯನ್ನು ಸಹ ಪಡೆಯಬಹುದು. ಇದಲ್ಲದೆ, ರಿಲಯನ್ಸ್ ಡಿಜಿಟಲ್‌ನಿಂದ ಖರೀದಿಸಿದ ಆಯ್ದ ಆಡಿಯೋ ಉತ್ಪನ್ನಗಳು ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ 10 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು.

  • ಈ ಆಫರ್ ಬೇಕಿದ್ದರೆ ಜಿಯೋ ಪ್ರಿಪೇಯ್ಡ್ ಬಳಕೆದಾರರು ಮೊದಲು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ MyJio ಅಪ್ಲಿಕೇಶನ್ ಅನ್ನು ತೆರೆಯಬೇಕು.
  • ಈಗ, ನೀವು ಕೆಳಭಾಗದಲ್ಲಿರುವ ರೀಚಾರ್ಜ್ ಟ್ಯಾಬ್ ಅನ್ನು ಟ್ಯಾಪ್ ಮಾಡಬೇಕು. 2,999 ಪ್ಲಾನ್ ಆಫರ್ ಅನ್ನು ಆಯ್ಕೆ ಮಾಡಿ.
  • ಈಗ ನೀವು ರೀಚಾರ್ಜ್ ಮಾಡಲು ಬಯಸುವ ಜಿಯೋ ಸಂಖ್ಯೆಯನ್ನು ನಮೂದಿಸಬೇಕು.
  • ಯಾವುದೇ UPI ವಿಧಾನ, ನೆಟ್ ಬ್ಯಾಂಕಿಂಗ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಪಾವತಿಯನ್ನು ಪೂರ್ಣಗೊಳಿಸಿ.
  • ಪಾವತಿಯನ್ನು ಮಾಡಿದ ನಂತರ, ವಾರ್ಷಿಕ ಯೋಜನೆಯನ್ನು ಸಂಖ್ಯೆಯಲ್ಲಿ ಸಕ್ರಿಯಗೊಳಿಸಲಾಗುತ್ತದೆ.

ಈ ಆಫರ್ ಈಗಾಗಲೇ ಪ್ರಿಪೇಯ್ಡ್ ಬಳಕೆದಾರರಿಗೆ ಲೈವ್ ಆಗಿದೆ, ಆದ್ದರಿಂದ ಜನರು ಇದನ್ನು ಕ್ಲೈಮ್ ಮಾಡಬಹುದು. ಆದರೆ, ಈ ಆಫರ್ ಯಾವಾಗ ಮುಕ್ತಾಯವಾಗುತ್ತದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ. ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಸಹ ಆಫರ್ ಲಭ್ಯವುದೆ. ಜನರು ಇದರ ಮೂಲಕವೂ ರೀಚಾರ್ಜ್ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್