Fever Detector App: ಜ್ವರ ಬಂದರೆ ಸ್ಮಾರ್ಟ್‌ಫೋನ್ ಮೂಲಕವೇ ಪರೀಕ್ಷೆ ಮಾಡಲು ಹೊಸ ಅಪ್ಲಿಕೇಶನ್

ಇನ್ನು ಮುಂದೆ ಜ್ವರ, ಡೆಂಗ್ಯೂ ಬಂದರೆ ಮನೆಯಲ್ಲಿ ಪರೀಕ್ಷೆ ಮಾಡಲು ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಬಂದಿದೆ. ಸ್ಮಾರ್ಟ್‌ಫೋನ್​​ನಲ್ಲಿ ಫೀವರ್ ಡಿಟೆಕ್ಟರ್ ಅಪ್ಲಿಕೇಶನ್​​ನ್ನು ಪರಿಚಯಿಸಿದೆ.

Fever Detector App: ಜ್ವರ ಬಂದರೆ ಸ್ಮಾರ್ಟ್‌ಫೋನ್ ಮೂಲಕವೇ ಪರೀಕ್ಷೆ ಮಾಡಲು ಹೊಸ ಅಪ್ಲಿಕೇಶನ್
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Aug 09, 2023 | 5:30 PM

ಇತ್ತೀಚೆಗೆ ವಾತಾವರಣದಿಂದ ರೋಗಗಳು ಹರಡುವುದು ಹೆಚ್ಚು. ಅದರಲ್ಲೂ ಈಗ ಮಾನ್ಸೂನ್ ಸಮಯದಲ್ಲಿ ರೋಗಗಳ ಕಾಲ ಎಂದು ಹೇಳಬಹುದು. ಈ ಕಾಲದಲ್ಲಿ ಜ್ವರ, ಡೆಂಗ್ಯೂ, ಇನ್ನೂ ಅನೇಕ ಅನಾರೋಗ್ಯಗಳ ಉಂಟಾಗುತ್ತದೆ. ಇಂತಹ ಸಮಯದಲ್ಲಿ ವೈದ್ಯರ ಬಳಿ ಆ ಪರೀಕ್ಷೆ ಈ ಪರೀಕ್ಷೆ ಎಂದು ಪದೇ ಪದೇ ಹೋಗಬೇಕಾಗುತ್ತದೆ. ಆದರೆ ಇನ್ನು ಮುಂದೆ ಆ ಕಷ್ಟ ನೀವು ತೆಗೆದುಕೊಳ್ಳಬೇಕಿಲ್ಲ. ಮನೆಯಲ್ಲಿ ಕುಳಿತು ಈ ಪರೀಕ್ಷೆಗಳನ್ನು ಮಾಡಲು ಹೊಸ ತಂತ್ರಜ್ಞಾನ ಬಂದಿದೆ. ಮನೆಯಲ್ಲಿಯೇ ಸ್ಮಾರ್ಟ್‌ಫೋನ್ ಮೂಲಕ ಜ್ವರ, ಡೆಂಗ್ಯೂಗಳ ಬಗ್ಗೆ ಪರೀಕ್ಷೆ ಮಾಡಬಹುದು. ಇದರ ಜತೆಗೆ ನಿಮ್ಮ ದೇಹದ ಉಷ್ಣತೆಯನ್ನು ಸಹ ನೀವು ಪರಿಶೀಲಿಸಬಹುದಾದ ಒಂದು ಆಪ್ಲಿಕೇಶನ್​​ನ್ನು​ ಪರಿಚಯ ಮಾಡಲಾಗಿದೆ. ಹೌದು ಸ್ಮಾರ್ಟ್‌ಫೋನ್​​ನಲ್ಲಿ ಫೀವರ್ ಡಿಟೆಕ್ಟರ್ ಅಪ್ಲಿಕೇಶನ್​​ನ್ನು ಪರಿಚಯಿಸಲಾಗಿದೆ. ಇದು ಥರ್ಮಾಮೀಟರ್‌ನಂತೆ ಕಾರ್ಯನಿರ್ವಹಿಸುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್​​ನಲ್ಲಿ ಈ ಆಪ್ಲಿಕೇಶನ್​​ನ್ನು ಡೌನ್​​ಲೋಡ್​​ ಮಾಡಿಕೊಂಡು. ನಿಮ್ಮ ದೇಹದಲ್ಲಿ ಆಗುವ ಆರೋಗ್ಯ ಬದಲಾವಣೆಗಳನ್ನು ಪತ್ತೆ ಮಾಡಬಹುದು. ನಂತರ ವೈದ್ಯರ ಸಲಹೆಯನ್ನು ಪಡೆದು ಮುಂದಿನ ಚಿಕಿತ್ಸೆ ಪಡೆಯಬಹುದು.

ಫೀವರ್‌ಫೋನ್ ಅಪ್ಲಿಕೇಶನ್ ಡೆಂಗ್ಯೂ ಜ್ವರವನ್ನು ಪತ್ತೆ ಮಾಡುತ್ತದೆ:

ವಾಷಿಂಗ್ಟನ್ ವಿಶ್ವವಿದ್ಯಾಲಯದ (ಯುಡಬ್ಲ್ಯು) ಸಂಶೋಧಕರು ಈ ಅಪ್ಲಿಕೇಶನ್ ಪತ್ತೆ ಮಾಡಿದ್ದಾರೆ. ಸ್ಮಾರ್ಟ್‌ಫೋನ್​​ನ್ನು ಥರ್ಮಾಮೀಟರ್ ಆಗಿ ಪರಿವರ್ತನೆ ಮಾಡಿ. ಇದಕ್ಕೆ ಫೀವರ್‌ಫೋನ್ ಅಪ್ಲಿಕೇಶನ್ ಎಂಬು ಹೆಸರಿನಿಂದ ಕರೆದಿದ್ದಾರೆ. ಯಾವುದೇ ಹಾರ್ಡ್‌ವೇರ್ ಸಂಪರ್ಕವಿಲ್ಲದೆಯೇ ನಿಮ್ಮ ಜ್ವರವನ್ನು ಪರೀಕ್ಷೆ ಮಾಡುತ್ತದೆ. ಇದನ್ನು UW ವಿದ್ಯಾರ್ಥಿ ಜೋಸೆಫ್ ಬ್ರೆಡಾ ಸಂಶೋಧನೆಯನ್ನು ಪ್ರಾರಂಭ ಮಾಡಿದ್ದಾರೆ.

ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ?

ನಿಮ್ಮ ತಾಪಮಾನವನ್ನು ಅಪ್ಲಿಕೇಶನ್ ಮೂಲಕ ಫೋನ್‌ನಲ್ಲಿ ಮೇಲ್ವಿಚಾರಣೆ ಮಾಡಬಹುದು. ಈ ಅಪ್ಲಿಕೇಶನ್ ಫೋನ್‌ ಸಮೀಪದಲ್ಲಿರುವ ಯಾವುದೇ ಬಿಸಿ ವಸ್ತುಗಳನ್ನಾದರು ಪತ್ತೆ ಮಾಡುತ್ತದೆ. Feverfone ಅಪ್ಲಿಕೇಶನ್ ಅನ್ನು ಆನ್ ಮಾಡಿ, ನಂತರ ಅದನ್ನು ನಿಮ್ಮ ಹಣೆಯ ಮುಂದೆ ಹಿಡಿದುಕೊಳ್ಳಿ. ಫೋನಿನ ಟಚ್ ಸ್ಕ್ರೀನ್ ಹಣೆಯ ಮುಂದೆ ಇರುವಂತೆ ನೋಡಿಕೊಳ್ಳಿ. ಒಂದು ವೇಳೆ ಪರದೆಯ ಮೇಲೆ ತಾಪಮಾನವು ಬದಲಾದರೆ, ಜ್ವರ ಇದೆ ಎಂದು ತೋರಿಸಿದಂತೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಅಪ್ಲಿಕೇಶನ್ ಹೊರತುಪಡಿಸಿ ಇನ್ನೂ ಅನೇಕ ಅಪ್ಲಿಕೇಶನ್‌ಗಳಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪೋಖ್ರಾನ್‌ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಲು ಕಾರಣವೇನು?

ದೇಹದ ತಾಪಮಾನ ಥರ್ಮಾಮೀಟರ್:

ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಡೌನ್‌ಲೋಡ್‌ ಮಾಡಿದ್ದಾರೆ. ಈ ಅಪ್ಲಿಕೇಶನ್ ನಿಮ್ಮ ದೇಹದ ಉಷ್ಣತೆಯನ್ನು ಪರಿಶೀಲಿಸಬಹುದು, ಜತೆಗೆ ಇದರಿಂದ ನಿಮಗೆ ಜ್ವರವಿದೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

ದೇಹದ ಉಷ್ಣತೆ ಆಪ್:

ಈ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ 3.7 ರೇಟಿಂಗ್ ಪಡೆದುಕೊಂಡಿದ್ದು, ಇದುವರೆಗೆ 5 ಲಕ್ಷ ಬಳಕೆದಾರರು ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ಜ್ವರ ಟ್ರ್ಯಾಕರ್‌ಗಾಗಿ ಥರ್ಮಾಮೀಟರ್:

ನೀವು ಈ ಅಪ್ಲಿಕೇಶನ್‌ನಿಂದ ನಿಮ್ಮ ದೇಹದ ಉಷ್ಣತೆಯನ್ನು ಪರಿಶೀಲಿಸಬಹುದು. ಈ ಆ್ಯಪ್ ಅನ್ನು ಇದುವರೆಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1 ಲಕ್ಷ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದು, ಇದು 3.2 ರೇಟಿಂಗ್ ಅನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Wed, 9 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ