Smartphones under Rs. 15000: 15,000 ರೂ. ಒಳಗಡೆ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

ಇವುಗಳು 5ಜಿ ಬೆಂಬಲವನ್ನು ಕೂಡ ಪಡೆದುಕೊಂಡಿದೆ. ಹಾಗಾದರೆ ಸದ್ಯ ಮಾರುಕಟ್ಟೆಯಲ್ಲಿ 15,000 ರೂ. ಒಳಗಡೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​ಫೋನ್ಸ್ ಯಾವುದು ಎಂಬುದನ್ನು ನೋಡೋಣ.

Smartphones under Rs. 15000: 15,000 ರೂ. ಒಳಗಡೆ ನೀವು ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Smartphones
Follow us
Vinay Bhat
|

Updated on: Jul 23, 2023 | 11:53 AM

ಇಂದು ಐದು ಸಾವಿರದಿಂದ ಹಿಡಿದು ಒಂದು ಲಕ್ಷಕ್ಕೂ ಅಧಿಕ ಬೆಲೆಯ ಸ್ಮಾರ್ಟ್​ಫೋನ್​ಗಳು (Smartphones) ಮಾರುಕಟ್ಟೆಯಲ್ಲಿದೆ. ವಾರಕ್ಕೆ ಕಡಿಮೆ ಎಂದರೂ ಎರಡರಿಂದ ಮೂರು ಫೋನುಗಳು ಅನಾವರಣಗೊಳ್ಳುತ್ತದೆ. ಇದರಲ್ಲಿ ಎಲ್ಲವೂ ಯಶಸ್ಸು ಸಾಧಿಸುವುದಿಲ್ಲ. ಈಗಂತು ಕಡಿಮೆ ಬೆಲೆಗೆ ದೊರಕುವ ಆಕರ್ಷಕ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಇರುವಂತಹ ಸ್ಮಾರ್ಟ್​ಫೋನ್​ಗಳಿಗೆ ಭರ್ಜರಿ ಬೇಡಿಕೆ ಇದೆ. ಇದರಲ್ಲಿ ರಿಯಲ್ ಮಿ (Realme), ಸ್ಯಾಮ್​ಸಂಗ್ (Samsung) ನಂತಹ ಫೋನುಗಳು ಹೆಚ್ಚು ಕಾಣಿಸಿಕೊಂಡಿವೆ. ಇವುಗಳು 5ಜಿ ಬೆಂಬಲವನ್ನು ಕೂಡ ಪಡೆದುಕೊಂಡಿದೆ. ಹಾಗಾದರೆ ಸದ್ಯ ಮಾರುಕಟ್ಟೆಯಲ್ಲಿ 15,000 ರೂ. ಒಳಗಡೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​ಫೋನ್ಸ್ ಯಾವುದು ಎಂಬುದನ್ನು ನೋಡೋಣ.

ರಿಯಲ್ ಮಿ ನಾರ್ಜೊ N53:

ಈ ಸ್ಮಾರ್ಟ್‌ಫೋನ್ 6GB+128GB ಸಂಗ್ರಹಣೆ ಮತ್ತು 33W ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಇದು 90 Hz ರಿಫ್ರೆಶ್​ರೇಟ್ ನೀಡಲಾಗಿದ್ದು ಸ್ಮೂತ್ ಡಿಸ್ ಪ್ಲೇಯೊಂದಿದೆ ಬಂದಿದೆ. ನೀವು ಇದನ್ನು ಅಮೆಜಾನ್​ನಲ್ಲಿ ಶೇ. 15 ರಷ್ಟು ರಿಯಾಯಿತಿಯೊಂದಿಗೆ ಕೇವಲ 10,999 ರೂ. ಗೆ ಖರೀದಿಸಬಹುದು.

ಐಕ್ಯೂ Z6 ಲೈಟ್ 5G:

ಇದು 6GB RAM ಮತ್ತು 128GB ಆಂತರಿಕ ಸಂಗ್ರಹಣೆಯೊಂದಿಗೆ ಅಮೆಜಾನ್‌ನಲ್ಲಿ ಲಭ್ಯವಿರುವ ಸ್ಟೆಲ್ಲರ್ ಗ್ರೀನ್ ಮಾದರಿಯಾಗಿದೆ. ಇದು ವಿಶ್ವದ ಮೊದಲ ಸ್ನಾಪ್​ಡ್ರಾಗನ್ 4 Gen 1 ಸ್ಮಾರ್ಟ್‌ಫೋನ್. ಅಮೆಜಾನ್ ಈ ಸ್ಮಾರ್ಟ್‌ಫೋನ್‌ ಮೇಲೆ ಶೇ. 28 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಸದ್ಯ ಈ ಫೋನನ್ನು ನೀವು 14,499 ರೂ. ಗೆ ನಿಮ್ಮದಾಗಿಸಬಹುದು. ಇದರ ಮೂಲಬೆಲೆ ರೂ. 19,999.

ಇದನ್ನೂ ಓದಿ
Image
Realme C51: ರಿಯಲ್ ಮಿ C ಸರಣಿಯಲ್ಲಿ ಬರುತ್ತಿದೆ ಮತ್ತೊಂದು ಸ್ಮಾರ್ಟ್​ಫೋನ್: ಈ ಬಾರಿಯ ಕ್ಯಾಮೆರಾ ಎಷ್ಟು MP ಗೊತ್ತೇ?
Image
Vu Masterpiece QLED: ವ್ಯೂ 98 ಇಂಚಿನ ಲೇಟೆಸ್ಟ್ ಒಎಲ್‌ಇಡಿ ಟಿವಿ ಬೆಲೆ ₹6 ಲಕ್ಷ ಮಾತ್ರ!
Image
Realme GT 2: 40,000 ರೂ. ವಿನ ಈ ಸ್ಮಾರ್ಟ್​ಫೋನ್ ಬೆಲೆ ಈಗ ಕೇವಲ 27,999 ರೂ.
Image
Netflix Password: ಇನ್ನು ನೆಟ್​ಫ್ಲಿಕ್ಸ್ ಪಾಸ್​ವರ್ಡ್ ಶೇರ್ ಮಾಡಲು ಸಾಧ್ಯವಿಲ್ಲ!

OnePlus Nord CE 2 lite 5G: ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಕೂಡಲೇ ಖರೀದಿಸಿ

ಸ್ಯಾಮ್​ಸಂಗ್ ಗ್ಯಾಲಕ್ಸಿ M13:

ಇದು ಅಕ್ವಾ ಗ್ರೀನ್ ಮಾದರಿಯಾಗಿದ್ದು, ಅಮೆಜಾನ್‌ನಲ್ಲಿ ಫ್ಲಾಟ್ 27% ರಿಯಾಯಿತಿಯೊಂದಿಗೆ ಲಭ್ಯವಿದೆ. 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಜೊತೆಗೆ 6000mAh ಬ್ಯಾಟರಿಯನ್ನು ಹೊಂದಿದೆ. ನೀವು ಇದನ್ನು ಕೇವಲ 10,999 ರೂ.ಗೆ ಖರೀದಿಸಬಹುದು.

ಸ್ಯಾಮ್​ಸಂಗ್ ಗ್ಯಾಲಕ್ಸಿ M14 5G:

ಈ ಫೋನ್4GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದರಲ್ಲಿ 50MP ಟ್ರಿಪಲ್ ಕ್ಯಾಮ್ ಜೊತೆಗೆ 6000 mAhಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಆಂಡ್ರಾಯ್ಡ್ 13 ಜೊತೆಗೆ 5nm ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಅಮೆಜಾನ್​ನಲ್ಲಿ 17% ರಿಯಾಯಿತಿಯೊಂದಿಗೆ ಲಭ್ಯವಿದೆ. ನೀವು ಈ ಸ್ಮಾರ್ಟ್‌ಫೋನ್ ಅನ್ನು ಕೇವಲ 14990 ರೂ. ಗೆ ಪಡೆದುಕೊಳ್ಳಬಹುದು.

ರೆಡ್ಮಿ 11 ಪ್ರೈಮ್ 5G:

ಈ 5G ಸ್ಮಾರ್ಟ್‌ಫೋನ್ MTK ಡೈಮೆನ್ಸಿಟಿ 700 ಮತ್ತು 50 MP ಡ್ಯುಯಲ್ ಕ್ಯಾಮೆರಾ ಜೊತೆಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 19% ರಿಯಾಯಿತಿ ಲಭ್ಯವಿದ್ದು, 12999ರೂ. ಗೆ ಪಡೆದುಕೊಳ್ಳಬಹುದು. ಇದರ ಜೊತೆಗೆ 12,250 ರೂ. ರವರೆಗಿನ ಎಕ್ಸ್​ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು