- Kannada News Photo gallery oneplus nord ce 2 lite 5g smartphone big discount on Amazon India check latest price
OnePlus Nord CE 2 lite 5G: ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಕೂಡಲೇ ಖರೀದಿಸಿ
Amazon Offer: ನಾರ್ಡ್ CE 2 5G ಸ್ಮಾರ್ಟ್ಫೋನ್ನ 6GB RAM ಮತ್ತು 128GB ಸ್ಟೋರೇಜ್ ಬೇಸ್ ಮಾಡೆಲ್‌ನ ಮೂಲಬೆಲೆ 19,999 ರೂ.. ಅಮೆಜಾನ್ನಲ್ಲಿ ಈ ಮೊಬೈಲ್ ಶೇ. 10 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಫೋನ್ ಈಗ 17,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.
Updated on: Jul 22, 2023 | 1:08 PM

ಇತ್ತೀಚೆಗಷ್ಟೆ ಪ್ರಸಿದ್ಧ ಒನ್‌ಪ್ಲಸ್ ಕಂಪನಿ ತನ್ನ ನಾರ್ಡ್ ಸರಣಿ ಅಡಿಯಲ್ಲಿ ಹೊಸ ನಾರ್ಡ್ 3 ಫೋನ್ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಕಳೆದ ವರ್ಷ ರಿಲೀಸ್ ಮಾಡಿದ ಒನ್‌ಪ್ಲಸ್ ನಾರ್ಡ್ CE 2 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ.

ಆಕರ್ಷಕ ಡಿಸೈನ್, ಭರ್ಜರಿ ಫೀಚರ್ಗಳಿಂದ ತುಂಬಿರುವ ಈ ಸ್ಮಾರ್ಟ್‌ಫೋನ್ ಅತಿ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ. ಈ ಫೋನಿನಲ್ಲಿ 33W ಸೂಪರ್VOOC ವೇಗದ ಚಾರ್ಜಿಂಗ್ ಕೂಡ ನೀಡಲಾಗಿದೆ.

ನಾರ್ಡ್ CE 2 5G ಸ್ಮಾರ್ಟ್ಫೋನ್ನ 6GB RAM ಮತ್ತು 128GB ಸ್ಟೋರೇಜ್ ಬೇಸ್ ಮಾಡೆಲ್‌ನ ಮೂಲಬೆಲೆ 19,999 ರೂ.. ಅಮೆಜಾನ್ನಲ್ಲಿ ಈ ಮೊಬೈಲ್ ಶೇ. 10 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಫೋನ್ ಈಗ 17,999ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಒನ್‌ಪ್ಲಸ್ ನಾರ್ಡ್ CE 2 ಲೈಟ್ 5G ಸ್ಮಾರ್ಟ್‌ಫೋನ್ 1,080 x 2,412 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.59 ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ.

ವಿಶೇಷವಾಗಿ ಇದರಲ್ಲಿ ಗೇಮಿಂಗ್ಗಾಗಿ 240Hz ರೀಫ್ರೆಶ್ ರೇಟ್ ನೀಡಲಾಗಿದೆ. ಇದಕ್ಕೆ ತಕ್ಕಂತೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗ್ನ್ 695 SoC ಪ್ರೊಸೆಸರ್ ಪ್ರೊಸೆಸರ್ ಬಲವನ್ನು ಪಡೆದಿದೆ. ಆಂಡ್ರಾಯ್ಡ್ 12 ಓಎಸ್ನಿಂದ ಕಾರ್ಯನಿರ್ವಹಿಸುತ್ತದೆ.

ಆಕರ್ಷಕವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಕೂಡ ನೀಡಲಾಗಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಮೂಲಕ 33W ಸೂಪರ್VOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ವೈಫೈ 6, ಬ್ಲೂಟೂತ್ 5.2, NFC, GPS ಮತ್ತು A-GPS ಸೇರಿವೆ. ಇದಲ್ಲದೆ ಅಕ್ಸಿಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸಾರ್ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆಗಳು ಇದರಲ್ಲಿದೆ.




