Realme C51: ರಿಯಲ್ ಮಿ C ಸರಣಿಯಲ್ಲಿ ಬರುತ್ತಿದೆ ಮತ್ತೊಂದು ಸ್ಮಾರ್ಟ್​ಫೋನ್: ಈ ಬಾರಿಯ ಕ್ಯಾಮೆರಾ ಎಷ್ಟು MP ಗೊತ್ತೇ?

ರಿಯಲ್ ಮಿ ಇದೀಗ ತನ್ನ C ಸರಣಿ ಅಡಿಯಲ್ಲಿ ಮತ್ತೊಂದು ಹೊಸ ರಿಯಲ್ ಮಿ C51 (Realme C51) ಫೋನನ್ನು ರಿಲೀಸ್ ಮಾಡಲು ಮುಂದಾಗಿದೆ. ಇದರ ಕೆಲ ಫೀಚರ್ಸ್ ಕೂಡ ಸೋರಿಕೆ ಆಗಿದೆ.

Realme C51: ರಿಯಲ್ ಮಿ C ಸರಣಿಯಲ್ಲಿ ಬರುತ್ತಿದೆ ಮತ್ತೊಂದು ಸ್ಮಾರ್ಟ್​ಫೋನ್: ಈ ಬಾರಿಯ ಕ್ಯಾಮೆರಾ ಎಷ್ಟು MP ಗೊತ್ತೇ?
Realme C51
Follow us
Vinay Bhat
|

Updated on:Jul 23, 2023 | 11:12 AM

ವಿದೇಶಿ ಮೂಲದ ಪ್ರಸಿದ್ಧ ರಿಯಲ್ ಮಿ (Realme) ಸಂಸ್ಥೆ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್​ಫೋನ್​ಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುತ್ತಿರುವ ರಿಯಲ್ ಮಿ ಈಗಾಗಲೇ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ರಿಯಲ್ ಮಿ 11 ಪ್ರೊ+ ಫೋನನ್ನು ಪರಿಚಯಿಸಿದೆ. ಕಳೆದ ವಾರವರಷ್ಟೆ 108 ಮೆಗಾ ಪಿಕ್ಸೆಲ್ ಕ್ಯಾಮೆರಾದ ರಿಯಲ್ ಮಿ C53 (Realme C53) ಫೋನನ್ನು ಅನಾವರಣ ಮಾಡಿತ್ತು. ಇದೀಗ ತನ್ನ C ಸರಣಿ ಅಡಿಯಲ್ಲಿ ಮತ್ತೊಂದು ಹೊಸ ರಿಯಲ್ ಮಿ C51 (Realme C51) ಫೋನನ್ನು ರಿಲೀಸ್ ಮಾಡಲು ಮುಂದಾಗಿದೆ. ಇದರ ಕೆಲ ಫೀಚರ್ಸ್ ಕೂಡ ಸೋರಿಕೆ ಆಗಿದೆ.

ಇತ್ತೀಚೆಗೆ ಬಿಡುಗಡೆಯಾದ ರಿಯಲ್ ಮಿ C55 ಮತ್ತು ರಿಯಲ್ ಮಿ ನಾರ್ಜೊ N53 ಯಂತೆ ಹೊಸ ರಿಯಲ್ ಮಿ ಫೋನ್ ಆ್ಯಪಲ್​ನ ಡೈನಾಮಿಕ್ ಇಸ್ಲ್ಯಾಂಡ್​ನಂತಹ ಮಿನಿ ಕ್ಯಾಪ್ಸುಲ್ ವೈಶಿಷ್ಟ್ಯದೊಂದಿಗಿದೆ. ಇದು ಎಲ್ಇಡಿ ಫ್ಲ್ಯಾಷ್ ಜೊತೆಗೆ ಹಿಂಭಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ವಾಲ್ಯೂಮ್ ರಾಕರ್‌ಗಳು ಮತ್ತು ಪವರ್ ಬಟನ್ ಅನ್ನು ಎಡ ಭಾಗದಲ್ಲಿ ನೀಡಲಾಗಿದೆ.

Oppo K11 5G: ಬಿಡುಗಡೆಗೆ ಸಿದ್ದವಾದ ಒಪ್ಪೋ K11 5G ಸ್ಮಾರ್ಟ್​ಫೋನ್: ಆಕರ್ಷಕ ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್

ಇದನ್ನೂ ಓದಿ
Image
Vu Masterpiece QLED: ವ್ಯೂ 98 ಇಂಚಿನ ಲೇಟೆಸ್ಟ್ ಒಎಲ್‌ಇಡಿ ಟಿವಿ ಬೆಲೆ ₹6 ಲಕ್ಷ ಮಾತ್ರ!
Image
Realme GT 2: 40,000 ರೂ. ವಿನ ಈ ಸ್ಮಾರ್ಟ್​ಫೋನ್ ಬೆಲೆ ಈಗ ಕೇವಲ 27,999 ರೂ.
Image
Netflix Password: ಇನ್ನು ನೆಟ್​ಫ್ಲಿಕ್ಸ್ ಪಾಸ್​ವರ್ಡ್ ಶೇರ್ ಮಾಡಲು ಸಾಧ್ಯವಿಲ್ಲ!
Image
OnePlus Nord CE 2 lite 5G: ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಕೂಡಲೇ ಖರೀದಿಸಿ

ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ, ರಿಯಲ್ ಮಿ C51 ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ UI T- ಆವೃತ್ತಿಯಲ್ಲಿ 6.7-ಇಂಚಿನ LCD ಡಿಸ್ ಪ್ಲೇ ಮತ್ತು 90Hz ರಿಫ್ರೆಶ್ ದರದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಯುನಿಸಕ್ T612 ಪ್ರೊಸೆಸರ್​ನಿಂದ ಚಾಲಿತವಾಗಿದೆ. ಆಂತರಿಕ ಸಂಗ್ರಹಣೆಯನ್ನು ಮೈಕ್ರೊ SD ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು.

ರಿಯಲ್ ಮಿ C51 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ ಸೆಕೆಂಡರಿ ಶೂಟರ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್​ನೊಂದಿಗೆ ಬರುತ್ತದೆ. ಸೆಲ್ಫಿಗಾಗಿ, ಇದರ ಮುಂಭಾಗದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯೊಂದಿಗೆ ರಿಲೀಸ್ ಆಗಲಿದೆ ಎನ್ನಲಾಗಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿರಬಹುದು.

ಆದಾಗ್ಯೂ, ರಿಯಲ್ ಮಿ C51 ಬಿಡುಗಡೆ ಯಾವಾಗ ಎಂಬುದನ್ನು ಕಂಪನಿ ಇನ್ನೂ ಖಚಿತಪಡಿಸಿಲ್ಲ. ಫೋನ್ ಈ ಹಿಂದೆ ಥೈಲ್ಯಾಂಡ್‌ನ ರಾಷ್ಟ್ರೀಯ ಪ್ರಸಾರ ಮತ್ತು ದೂರಸಂಪರ್ಕ ಆಯೋಗ (NBTC), ಯುರೇಷಿಯನ್ ಆರ್ಥಿಕ ಆಯೋಗ (EEC), ಇಂಡೋನೇಷ್ಯಾ ಸೇರಿದಂತೆ ಅನೇಕ ಪ್ರಮಾಣೀಕರಣ ವೆಬ್‌ಸೈಟ್‌ಗಳಲ್ಲಿ RMX3830 ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿತ್ತು . ಇದನ್ನು ಮೊದಲು BIS (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ವೆಬ್‌ಸೈಟ್‌ನಲ್ಲಿಯೂ ಗುರುತಿಸಲಾಗಿತ್ತು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:11 am, Sun, 23 July 23

ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು