ಸಹೋದರ ಸಹೋದರಿ ನಡುವಿನ ಭಾವನಾತ್ಮಕ ಬಾಂಧವ್ಯದ ಸಾಕಲ್ಯ ಸಾಕ್ಷಾತ್ಕಾರವೇ ಈ ರಕ್ಷಾಬಂಧನ (Raksha Bandhan). ರಕ್ಷಾ ಬಂಧನ ಹಬ್ಬ ಸಹೋದರ ಮತ್ತು ಸಹೋದರಿಯ ನಡುವಿನ ಪವಿತ್ರ ಬಾಂಧವ್ಯದ ಪ್ರತೀಕ. ಪ್ರತಿ ವರ್ಷ ಶ್ರಾವಣ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. 2022ನೇ ಸಾಲಿನಲ್ಲಿ ರಕ್ಷಾಬಂಧನದ ಹಬ್ಬವನ್ನು ಆಗಸ್ಟ್ 11ರಂದು ಆಚರಿಸಲಾಗುವುದು. ರಕ್ಷಾ ಬಂಧನ ದಿನ ಸಹೋದರಿ ತನ್ನ ಸಹೋದರನ ಕೈಗೆ ರಾಖಿಯನ್ನು ಕಟ್ಟಿ, ಅವನ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಪ್ರಾರ್ಥಿಸುತ್ತಾಳೆ. ಇದಕ್ಕೆ ಪ್ರತಿಯಾಗಿ, ಸಹೋದರ ಎಂಥದ್ದೆ ಪರಿಸ್ಥಿತಿಯಲ್ಲಿ ಸಹೋದರಿಯನ್ನು ರಕ್ಷಿಸುವ ಭರವಸೆಯೊಂದಿಗೆ ವಿನಿಮಯವಾಗಿ ಉಡುಗೊರೆಯನ್ನು ನೀಡುತ್ತಾನೆ. ಅಂತೆಯೆ ಈ ಬಾರಿ ನೀವು ನಿಮ್ಮ ಸಹೋದರ, ಸಹೋದರಿಯರಿಗೆ ವಿಶೇಷವಾದ ಉಡುಗೊರೆ ನೀಡುವ ಪ್ಲಾನ್ನಲ್ಲಿದ್ದರೆ, ಇಲ್ಲಿದೆ ನೋಡಿ 10,000 ರೂ. ಒಳಗೆ ಕೊಡಬಹುದಾದ ಅತ್ಯುತ್ತಮ ಗ್ಯಾಡ್ಜೆಟ್ಸ್ ಗಿಫ್ಟ್ (Gift).
ಅಮೆಜಾನ್ ಎಕೋ ಶೋ 5: ಅಮೆಜಾನ್ನಲ್ಲಿ ಸದ್ಯ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಡೆಯುತ್ತಿದೆ. ಇದರಲ್ಲಿ ಅನೇಕ ಪ್ರಾಡಕ್ಟ್ಗಳು ಆಕರ್ಷಕ ಡಿಸ್ಕೌಂಟ್ನಲ್ಲಿ ಕಾಣಿಸಿಕೊಂಡಿದೆ. ಅವುಗಳಲ್ಲಿ ಅಮೆಜಾನ್ ಎಕೋ ಶೋ 5 ಸ್ಮಾರ್ಟ್ ಸ್ಪೀಕರ್ ಕೂಡ ಒಂದು. ಇದು 5.5 ಇಂಚಿನ ಡಿಸ್ ಪ್ಲೇ ಹೊಂದಿದ್ದು, 2 ಮೆಗಾಫಿಕ್ಸೆಲ್ನ ಫ್ರಂಟ್ ಕ್ಯಾಮೆರಾ ಕೂಡ ಇದೆ. ಇದರ ಬೆಲೆ 4,499 ರೂ.
ಜೆಬಿಎಲ್ ಫ್ಲಿಪ್ 4: ನೀವು ಪಾರ್ಟಿ ಸ್ಪೀಕರ್ ಅನ್ನು ಉಡುಗೊರೆಯಾಗಿ ನೀಡಲು ಬಯಸಿದರೆ ಜೆಬಿಎಲ್ ಫ್ಲಿಪ್ 4 ಉತ್ತಮ ಆಯ್ಕೆ. ಇದನ್ನು ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ಉಪಯೋಗಿಸಬಹುದು. ಇದರ ಬೆಲೆ 5,998 ರೂ. ಆಗಿದೆ. ಜೊತೆಗೆ ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,250 ರೂ. ಗಳ ರಿಯಾಯಿತಿ ಸಿಗಲಿದೆ.
ವೈಯರ್ಲೆಸ್ ಇಯರ್ ಬರ್ಡ್ಸ್: ರಕ್ಷಾ ಬಂಧನ ಉಡುಗೊರೆಗೆ ಇಯರ್ ಬರ್ಡ್ಸ್ ಕೂಡ ಉತ್ತಮ ಆಯ್ಕೆ. ಇದರಲ್ಲಿ ಆ್ಯಂಕೆರ್ ಲಿಬರ್ಟಿ ಏರ್ 2 ಪ್ರೊ ಅತ್ಯುತ್ತಮವಾಗಿದೆ. ಇದರ ಬೆಲೆ 8,499 ರೂ. ಕೊಂಚ ದುಬಾರಿಯಾದರೂ ಅದ್ಭುತ ಅನುಭವ ನೀಡುತ್ತದೆ.
ಒನ್‌ಪ್ಲಸ್ ಬುಲೆಟ್ ವೈಯರ್ಲೆಸ್ Z2: ನೆಕ್ಬ್ಯಾಂಡ್ ಶೈಲಿಯ ಇಯರ್ ಫೋನ್ ನೀಡಬೇಕು ಎಂದಿದ್ದರೆ ಒನ್‌ಪ್ಲಸ್ ಬುಲೆಟ್ ವೈಯರ್ಲೆಸ್ Z2 ಬೆಸ್ಟ್ ಎಂದೇ ಹೇಳಬಹುದು. ಇದರ ಬೆಲೆ ಕೂಡ ಕಡಿಮೆ ಇದ್ದು 1,799 ರೂ. ಆಗಿದೆ.