
ಬೆಂಗಳೂರು (ಸೆ. 17): ನಿಮಗೆ ತಿಳಿದಿಲ್ಲದ ಹಲವು ವಾಟ್ಸ್ಆ್ಯಪ್ (WhatsApp) ಟ್ರಿಕ್‌ಗಳಿವೆ. ಇಂದು ನಾವು ಅಂತಹ ಒಂದು ಟ್ರಿಕ್ ಬಗ್ಗೆ ನಿಮಗೆ ಹೇಳುತ್ತಿದ್ದೇವೆ. ಕೆಲವೊಮ್ಮೆ ನಾವು ಯಾರೊಬ್ಬರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ಅವರಿಗೆ ತಿಳಿಯದೆ ನೋಡಬೇಕು ಎಂದು ಅಂದುಕೊಳ್ಳುತ್ತೀರಿ. ಆದರೆ, ಇದು ಹೇಗೆ ಎಂಬುದು ಅನೇಕರಿಗೆ ತಿಳಿದಿಲ್ಲ. ನೀವು ಕೂಡ ಅದೇ ರೀತಿ ಬಯಸಿದರೆ, ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ಯಾರಿಗೂ ಗೊತ್ತಾಗದಂತೆ ವೀಕ್ಷಿಸಲು ಮೂರು ಮಾರ್ಗಗಳಿವೆ. ಅವು ಯಾವುವು?, ಇದನ್ನು ಹೇಗೆ ಆನ್ ಮಾಡುವುದು? ಎಂಬ ಕುರಿತ ಮಾಹಿತಿ ಇಲ್ಲಿದೆ.
ವಾಟ್ಸ್ಆ್ಯಪ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ರೀಡ್ ರಿಸಿಪ್ಟ್ ನಿಷ್ಕ್ರಿಯಗೊಳಿಸಲು ಅನುಮತಿಸುತ್ತದೆ. ಇದು ಯಾರಿಗೂ ತಿಳಿಯದಂತೆ ಸಂದೇಶಗಳನ್ನು ಓದಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯವು ನೀವು ಬಳಕೆದಾರರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ವೀಕ್ಷಿಸಿದಾಗ, ನಿಮ್ಮ ಹೆಸರು ಅವರ ಹಿಸ್ಟರು ಗೋಚರಿಸುವುದಿಲ್ಲ ಎಂದು ಖಚಿತಪಡಿಸುತ್ತದೆ. ಈ ವೈಶಿಷ್ಟ್ಯವನ್ನು ಹೇಗೆ ಸಕ್ರಿಯಗೊಳಿಸುವುದು:
ನಿಮ್ಮಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಇದ್ದರೆ, ನಿಮ್ಮ ಸಾಧನದ ಫೈಲ್ ಮ್ಯಾನೇಜರ್‌ಗೆ ಹೋಗುವ ಮೂಲಕ ನೀವು ವಾಟ್ಸ್ಆ್ಯಪ್ ಫೈಲ್‌ಗಳನ್ನು ಪರಿಶೀಲಿಸಬಹುದು. ಇದಕ್ಕಾಗಿ, ನೀವು ಫೈಲ್ ಮ್ಯಾನೇಜರ್‌ಗೆ ಹೋಗಬೇಕಾಗುತ್ತದೆ. ನಂತರ ಆಂತರಿಕ ಸಂಗ್ರಹಣೆಗೆ ಹೋಗಿ. ಇದರ ನಂತರ, ವಾಟ್ಸ್ಆ್ಯಪ್ಗೆ ಹೋಗಿ. ನಂತರ ಮೀಡಿಯಾ/ಸ್ಟೇಟಸ್‌ಗಳನ್ನು ಟ್ಯಾಪ್ ಮಾಡಿ. ಇದರ ನಂತರ, ನೀವು ಇಲ್ಲಿ ಎಲ್ಲಾ ವಾಟ್ಸ್ಆ್ಯಪ್ ಸ್ಟೇಟಸ್‌ಗಳನ್ನು ನೋಡುತ್ತೀರಿ. ನೀವು ಈ ಫೋಲ್ಡರ್ ಅನ್ನು ನೋಡದಿದ್ದರೆ, ಫೈಲ್ ಮ್ಯಾನೇಜರ್ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಹಿಡನ್ ಫೈಲ್‌ಗಳನ್ನು ತೋರಿಸು ಅನ್ನು ಸಕ್ರಿಯಗೊಳಿಸಿ. ಕೆಲವು ಫೋನ್‌ಗಳಲ್ಲಿ, ನೀವು ಇಂಟರ್ನಲ್ ಸ್ಟೋರೇಜ್ > ಆಂಡ್ರಾಯ್ಡ್ > ಮೀಡಿಯಾ > com.whatsapp > ವಾಟ್ಸ್ಆ್ಯಪ್> ಮೀಡಿಯಾಗೆ ಹೋಗುವ ಮೂಲಕ ಈ ಆಯ್ಕೆಯನ್ನು ಪಡೆಯುತ್ತೀರಿ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ