Honor 90 5G: ಧಮಾಕ ಆಫರ್: 200MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ 20,000ಕ್ಕೆ ಲಭ್ಯ

Amazon Great Republic Day sale 2023: ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಪ್ರಾರಂಭವಾಗಿದೆ. ಈ ಮಾರಾಟ ಸಮಾರಂಭದಲ್ಲಿ ಹಾನರ್ 90 ಸ್ಮಾರ್ಟ್‌ಫೋನ್‌ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 7 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 200MP ಪ್ರಾಥಮಿಕ ಸಂವೇದಕ ಇದೆ.

Honor 90 5G: ಧಮಾಕ ಆಫರ್: 200MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ 20,000ಕ್ಕೆ ಲಭ್ಯ
Honor 90 5G
Follow us
|

Updated on: Jan 13, 2024 | 3:00 PM

ಕೆಲ ಸಮಯದ ವರೆಗೆ ಭಾರತದಲ್ಲಿ ಸ್ಥಗಿತಗೊಂಡಿದ್ದ ಹಾನರ್ ಕಂಪನಿಯ ಸ್ಮಾರ್ಟ್​ಫೋನ್​ಗಳು ಕಳೆದ ವರ್ಷಾಂತ್ಯಕ್ಕೆ ಹಾನರ್ 90 (Honor 90 5G) ಸ್ಮಾರ್ಟ್‌ಫೋನ್‌ನೊಂದಿಗೆ ಮರಳಿತು. 200 ಮೆಗಾ ಫಿಕ್ಸೆಲ್ ಕ್ಯಾಮೆರಾ ಫೋನಿನ ಮೂಲಕ ಭಾರತಕ್ಕೆ ಕಮ್​ಬ್ಯಾಕ್ ಮಾಡಿದ ಹಾನರ್ ಇದೀಗ ಈ ಫೋನನ್ನು ಭರ್ಜರಿ ರಿಯಾಯಿತಿ ದರಕ್ಕೆ ಮಾರಾಟ ಮಾಡುತ್ತಿದೆ. 37,999 ರೂ. ಬೆಲೆಯೊಂದಿಗೆ ಬಿಡುಗಡೆ ಮಾಡಲಾದ ಹಾನರ್ 90 ಇದೀಗ ನಡೆಯುತ್ತಿರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ರೂ. 20,000 ಕ್ಕೆ ಖರೀದಿಸಬಹುದು.

ಹಾನರ್ 90 ಬೆಲೆ ಕಡಿತ

ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಪ್ರೈಮ್ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಪ್ರಾರಂಭವಾಗಿದೆ. ಈ ಮಾರಾಟ ಸಮಾರಂಭದಲ್ಲಿ ಹಾನರ್ 90 ಸ್ಮಾರ್ಟ್‌ಫೋನ್‌ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದರ 8/256GB ರೂಪಾಂತರಕ್ಕೆ 28,999 ಮತ್ತು 12/512GB ರೂಪಾಂತರಕ್ಕೆ 30,999 ರೂ. ಇದೆ. ಇದರ ಮೇಲೆ ಅಮೆಜಾನ್ ರೂ. 6,000 ರಿಯಾಯಿತಿ ನೀಡುತ್ತಿದೆ. ಈ ಮೂಲಕ 22,999 ರೂ. ಮತ್ತು 24,999 ರೂ. ಗಳಿಸಿಗೆ ಇದನ್ನು ಪಡೆಯಬಹುದು.

Oppo Reno 11 Pro 5G: ಒಪ್ಪೋ ಪ್ರಿಯರಿಗೆ ಬಂಪರ್ ಸುದ್ದಿ: ಸದ್ದಿಲ್ಲದೆ ರಿಲೀಸ್ ಆಯಿತು ಆಕರ್ಷಕ ಕ್ಯಾಮೆರಾದ ರೆನೋ 11 ಸರಣಿ ಫೋನ್

ಇದನ್ನೂ ಓದಿ
Image
ಭಾರತದಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್​ನ ಮೊದಲ ಫೀಚರ್ ಫೋನ್ ಬಿಡುಗಡೆ
Image
ಏರ್‌ಪ್ಲೇನ್ ಮೋಡ್‌ ಆನ್ ಮಾಡಿ ಇಂಟರ್ನೆಟ್ ಉಪಯೋಗಿಸುವ ಟ್ರಿಕ್ ಗೊತ್ತೇ?
Image
ಕ್ಯಾಮೆರಾ ಪ್ರಿಯರು ಶಾಕ್: ಬಂತು 180MP ಕ್ಯಾಮೆರಾದ ಹೊಸ ಮ್ಯಾಜಿಕ್ ಫೋನ್
Image
ಪಾಕಿಸ್ತಾನದಲ್ಲಿಲ್ಲ ಪ್ರೈಮ್-ಹಾಟ್​ಸ್ಟಾರ್: ಅವರು ಯಾವ OTT ಉಪಯೋಗಿಸ್ತಾರೆ?

ಇದಲ್ಲದೆ, SBI ಕಾರ್ಡ್ ಬಳಕೆದಾರರು ವಿವಿಧ ರಿಯಾಯಿತಿಗಳನ್ನು ಪಡೆಯುತ್ತಾರೆ. ಕ್ರೆಡಿಟ್ ಕಾರ್ಡ್ EMI ನಲ್ಲಿ ಗರಿಷ್ಠ ರಿಯಾಯಿತಿ ರೂ. 3,750 ವರೆಗೆ ಇದೆ. ಇದು ಫೋನ್‌ನ ಬೆಲೆಯನ್ನು ಅದರ ಮೂಲ ಬೆಲೆಗಿಂತ ಕಡಿಮೆ ಮಾಡಿ 19,249 ರೂ. ಗೆ ಇಳಿಯುತ್ತದೆ. ಆದರೆ, ಬಾಕ್ಸ್‌ನಲ್ಲಿ ಯಾವುದೇ ಚಾರ್ಜರ್ ಇರುವುದಿಲ್ಲ. ಹೀಗಿದ್ದರೂ ಹಾನರ್ ಬ್ರ್ಯಾಂಡ್ ಅಮೆಜಾನ್ ಮೂಲಕ 30W ಅಡಾಪ್ಟರ್ ಅನ್ನು ಉಚಿತವಾಗಿ ಒದಗಿಸುತ್ತದೆ. ದೀಪಾವಳಿ ನಂತರ ಈ ಸ್ಮಾರ್ಟ್​ಫೋನ್ ರಿಯಾಯಿತಿ ಪಡೆಯುತ್ತಿರುವುದು ಇದೇ ಮೊದಲು.

ಹಾನರ್ 90 ಫೀಚರ್ಸ್:

ಡಿಸ್‌ಪ್ಲೇ: ಹಾನರ್ 90 6.7-ಇಂಚಿನ 1.5K ಕ್ವಾಡ್-ಕರ್ವ್ಡ್ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 1,600 nits ಗರಿಷ್ಠ ಬ್ರೈಟ್‌ನೆಸ್ ಮತ್ತು 3840Hz PWM ಡಿಮ್ಮಿಂಗ್ ಟೆಕ್ ಅನ್ನು ಒಳಗೊಂಡಿದೆ.

ಪ್ರೊಸೆಸರ್: ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 7 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

RAM ಮತ್ತು ಸಂಗ್ರಹಣೆ: ಇದು 8GB ಅಥವಾ 12GB LPDDR5 RAM ಜೊತೆಗೆ ಕ್ರಮವಾಗಿ 256GB ಮತ್ತು 512GB UFS 3.1 ಸಂಗ್ರಹಣೆಯಲ್ಲಿ ಬರುತ್ತದೆ.

ಕ್ಯಾಮೆರಾಗಳು: ಟ್ರಿಪಲ್ ಹಿಂಬದಿಯ ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ 200MP ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ-ವೈಡ್ ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ 50MP ಮುಂಭಾಗದ ಕ್ಯಾಮೆರಾ ಇದೆ.

ಬ್ಯಾಟರಿ, ಚಾರ್ಜಿಂಗ್: ಈ ಸಾಧನವು 5,000mAh ಬ್ಯಾಟರಿಯನ್ನು ಹೊಂದಿದೆ.

ಸಾಫ್ಟ್‌ವೇರ್: ಆಂಡ್ರಾಯ್ಡ್ 13 ಆಧಾರಿತ MagicOS 7.1 ನೊಂದಿಗೆ ರನ್ ಆಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್