Tech Tips: ಫೋನ್​ನಲ್ಲಿ ಡಿಲೀಟ್ ಆದ ಫೋಟೋ-ವಿಡಿಯೋಗಳನ್ನು ರಿಕವರಿ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್

|

Updated on: Mar 16, 2024 | 12:01 PM

Photo-Video Deleted recovery app: ನಿಮ್ಮ ಫೋನ್​ನಲ್ಲಿ ಡಿಲೀಟ್ ಆದ ಫೋಟೋಗಳು ಮತ್ತು ವಿಡಿಯೋಗಳನ್ನು ಹೇಗೆ ಮರಳಿ ಪಡೆಯಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಇದಕ್ಕಾಗಿ ನೀವು ಈ ಸುಲಭ ಹಂತಗಳನ್ನು ಅನುಸರಿಸಬೇಕು, ನಂತರ ನಿಮ್ಮ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳು ಪುನಃ ನಿಮಗೆ ಸಿಗುತ್ತದೆ.

Tech Tips: ಫೋನ್​ನಲ್ಲಿ ಡಿಲೀಟ್ ಆದ ಫೋಟೋ-ವಿಡಿಯೋಗಳನ್ನು ರಿಕವರಿ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್ಸ್
Smartphone
Follow us on

ಟಚ್‌ಸ್ಕ್ರೀನ್ ಫೋನ್‌ಗಳಲ್ಲಿ (Smartphone) ಕೆಲವೊಮ್ಮೆ ಬರುವ ಸಮಸ್ಯೆ ಎಂದರೆ ನೀವು ಆಕಸ್ಮಿಕವಾಗಿ ಯಾವುದೊ ಟಚ್ ಮಾಡಿದರೆ, ಆಗ ಇನ್ನಾವುದೊ ಫೈಲ್ ತೆರೆಯುತ್ತದೆ. ಇಲ್ಲದಿದ್ದರೆ ಮುಖ್ಯವಾದ ಫೈಲ್ ಡಿಲೀಟ್ ಆಗಿ ಬಿಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್‌ನಿಂದ ಫೋಟೋಗಳು ಮತ್ತು ವಿಡಿಯೋಗಳು ಅಳಿಸಿದಾಗ ಸಮಸ್ಯೆ ಉಂಟಾಗುತ್ತದೆ. ಈಗ ಈ ಡೇಟಾವನ್ನು ಮರಳಿ ಪಡೆಯುವುದು ಹೇಗೆ? ಎಂದು ಯೋಚಿಸುತ್ತೀರಿ. ಇದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಿಮ್ಮ ಫೋನ್​ನಲ್ಲಿ ಡಿಲೀಟ್ ಆದ ಫೋಟೋಗಳು ಮತ್ತು ವಿಡಿಯೋಗಳನ್ನು ಹೇಗೆ ಮರಳಿ ಪಡೆಯಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

ಇದಕ್ಕಾಗಿ ನೀವು ಈ ಸುಲಭ ಹಂತಗಳನ್ನು ಅನುಸರಿಸಬೇಕು, ನಂತರ ನಿಮ್ಮ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳು ಪುನಃ ನಿಮಗೆ ಸಿಗುತ್ತದೆ.

10,000 ರೂ. ಒಳಗಿನ ಸೂಪರ್ ಸ್ಮಾರ್ಟ್​ಫೋನ್ಸ್: ಈ ಆಫರ್ ಮಿಸ್ ಮಾಡ್ಬೇಡಿ

ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್​ನಿಂದ DiskDigger ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಿ. ನಂತರ ಈ ಅಪ್ಲಿಕೇಶನ್ ತೆರೆಯಿರಿ. ಇಲ್ಲಿ ನಿಮಗೆ ಎರಡು ಆಯ್ಕೆಗಳನ್ನ ತೋರಿಸಲಾಗುತ್ತದೆ, ಅದರಲ್ಲಿ ಮೊದಲ ಆಯ್ಕೆಯು ಫೋಟೋ ಮತ್ತು ಎರಡನೇ ಆಯ್ಕೆಯಲ್ಲಿ ನೀವು ವಿಡಿಯೋ ಕಾಣುತ್ತೀರಿ. ಇಲ್ಲಿ ಎಲ್ಲಾ ಫೋಟೋಗಳು ಮತ್ತು ವಿಡಿಯೋಗಳನ್ನು ನಿಮ್ಮ ಡಿಸ್​ಪ್ಲೇ ಮೇಲೆ ತೋರಿಸಲಾಗುತ್ತದೆ. ಇದರಲ್ಲಿ ನೀವು ಕೆಲವು ದಿನಗಳ ಹಿಂದೆ ಡಿಲೀಟ್ ಮಾಡಿದ ಡೇಟಾವನ್ನು ಮಾತ್ರ ಮರಳಿ ಪಡೆಯಬಹುದು ಎಂಬುದನ್ನು ನೆನಪಿನಲ್ಲಿಡಿ. ನೀವು ವರ್ಷಗಳ ಹಿಂದೆ ಏನನ್ನಾದರೂ ಡಿಲೀಟ್ ಮಾಡಿದ್ದರೆ, ಅದನ್ನು ರಿಕವರಿ ಮಾಡಲು ಸಾಧ್ಯವಿಲ್ಲ.

ಈ ರೀತಿಯ ಫೋಟೋಗಳು ಮತ್ತು ವೀಡಿಯೊಗಳನ್ನು ಮರುಪಡೆಯಿರಿ.

ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 3.5 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇಲ್ಲಿಯವರೆಗೆ, 100 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಪ್ಲಾಟ್‌ಫಾರ್ಮ್‌ನಿಂದ ಈ ಅಪ್ಲಿಕೇಶನ್ ಅನ್ನು ಇನ್​ಸ್ಟಾಲ್ ಮಾಡಿದ್ದಾರೆ. ನೀವು ಈ ಅಪ್ಲಿಕೇಶನ್ ಅನ್ನು ಬಳಸಲು ಬಯಸಿದರೆ ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್‌ಲೋಡ್ ಮಾಡಬಹುದು. ಅಪ್ಲಿಕೇಶನ್‌ನ ವಿಮರ್ಶೆ ಮತ್ತು ರೇಟಿಂಗ್ ಅನ್ನು ಒಮ್ಮೆ ಪರಿಶೀಲಿಸಿ. ಈ ಅಪ್ಲಿಕೇಶನ್ ನಿಮ್ಮ ಒಟ್ಟಾರೆ ಫೋಟೋಗಳು ಮತ್ತು ವಿಡಿಯೋಗಳಿಗೆ ಆ್ಯಕ್ಸಸ್ ಕೇಳುತ್ತದೆ.

ಏಸಸ್​ನಿಂದ ಬಂತು ಹೊಸ ಬಲಿಷ್ಠ ಸ್ಮಾರ್ಟ್​ಫೋನ್ ಝೆನ್​ಫೋನ್ 11 ಆಲ್ಟ್ರಾ: ಬೆಲೆ ಎಷ್ಟು?

ಫೋನ್‌ನಲ್ಲಿನ ಸ್ಟೋರೇಜ್ ಸಮಸ್ಯೆಗೆ ಪರಿಹಾರ

ನೀವು ಫೋನ್ ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನೀವು ಇದನ್ನು ಸುಲಭವಾಗಿ ಸರಿಪಡಿಸಬಹುದು. ಇದಕ್ಕಾಗಿ ನೀವು ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಬೇಕು. ಇಲ್ಲಿ ಆಂಡ್ರಾಯ್ಡ್ ಬಳಕೆದಾರರು ಫ್ರೀ ಆ್ಯಪ್ ಸ್ಪೇಸ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಫೋನ್‌ನಲ್ಲಿ ಬಳಕೆಯಾಗದ ಅಪ್ಲಿಕೇಶನ್‌ಗಳು ಮತ್ತು ಫೈಲ್‌ಗಳನ್ನು ಅಳಿಸಿ. ಇದು ದೀರ್ಘಕಾಲದವರೆಗೆ ಬಳಸದೆ ಇರುವ ಆ್ಯಪ್‌ಗಳನ್ನು ಒಳಗೊಂಡಿರುತ್ತದೆ. ಹಾಗೆಯೆ ಫೋನ್‌ನಲ್ಲಿ ಡಿಫಾಲ್ಟ್ ಆಗಿ ಬರುವ ಅನಗತ್ಯ ಅಪ್ಲಿಕೇಶನ್‌ಗಳನ್ನು ಸಹ ತೆಗೆದುಹಾಕಿ.

ಇದನ್ನು ಮಾಡಿದ ನಂತರ, ಫೋನ್‌ನ ಶೇಖರಣಾ ಆಯ್ಕೆಗೆ ಹೋಗಿ, ಇಲ್ಲಿ ಅನಗತ್ಯ ಫೈಲ್‌ಗಳು, ಹಾಡುಗಳು ಮತ್ತು ವಿವಿಧ ವಿಭಾಗಗಳಲ್ಲಿ ಕಂಡುಬರುವ ವಿಡಿಯೋಗಳಂತಹ ಡೇಟಾ ಅಳಿಸಿ. ಹೀಗೆ ಮಾಡುವುದರಿಂದ ನಿಮ್ಮ ಫೋನ್‌ನಲ್ಲಿ ಸಾಕಷ್ಟು ಸ್ಟೋರೇಜ್ ಸಿಗುತ್ತದೆ. ಅನೇಕ ಬಾರಿ ದೀರ್ಘ ವಿಡಿಯೋಗಳು ಮತ್ತು ಫೋಟೋಗಳು ಫೋನ್‌ನಲ್ಲಿ ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ