Instagram Reels: ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಅನ್ನು 2X ವೇಗದಲ್ಲಿ ನೋಡೋದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

Tech Tips: ಇನ್‌ಸ್ಟಾಗ್ರಾಮ್‌ನಲ್ಲಿ ಬಂದಿರುವ ವೈಶಿಷ್ಟ್ಯವು ಈಗಾಗಲೇ ಟಿಕ್‌ಟಾಕ್‌ನಲ್ಲಿದೆ. ಕಂಪನಿಯು ಈಗಾಗಲೇ ಟಿಕ್‌ಟಾಕ್‌ನಂತಹ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ ಕೂಡ, ಇದರಲ್ಲಿ ರೀಮಿಕ್ಸ್ ಟೂಲ್ ಕೂಡ ಸೇರಿದೆ. ಅದೇ ಸಮಯದಲ್ಲಿ, 2x ವೇಗದ ವೈಶಿಷ್ಟ್ಯವನ್ನು ವಿಶ್ವಾದ್ಯಂತ ಹೊರತರಲಾಗಿದೆ. ಈ ಹೊಸ ವೈಶಿಷ್ಟ್ಯ ಸಾಕಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿದೆ.

Instagram Reels: ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಅನ್ನು 2X ವೇಗದಲ್ಲಿ ನೋಡೋದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Instagram Reels 2x Speed

Updated on: Apr 04, 2025 | 2:15 PM

ಬೆಂಗಳೂರು (ಏ. 01): ಇನ್‌ಸ್ಟಾಗ್ರಾಮ್‌ನಲ್ಲಿ(Instagram)  ಹೊಸ ವೈಶಿಷ್ಟ್ಯಗಳು ಬರುತ್ತಲೇ ಇರುತ್ತವೆ, ಆದರೆ ಈಗ ನೂತನವಾಗಿ ಬಂದಿರುವ ವೈಶಿಷ್ಟ್ಯವು ರೀಲ್ಸ್ ಅನ್ನು ತ್ವರಿತವಾಗಿ ವೀಕ್ಷಿಸಲು ಸಹಾಯ ಮಾಡುತ್ತದೆ. ಹಲವು ಬಾರಿ ನಮ್ಮ ಫೀಡ್‌ನಲ್ಲಿ ಕೆಲವು ರೀಲ್‌ಗಳು ಬರುತ್ತವೆ, ಅದನ್ನು ನಾವು ನೋಡಲು ಬಯಸುವುದಿಲ್ಲ. ಹೆಚ್ಚಿನ ಜನರು ಅಂತಹ ರೀಲ್‌ಗಳನ್ನು ಬಿಟ್ಟು ಮತ್ತೊಂದು ರೀಲ್ ನೋಡಲು ಪ್ರಾರಂಭಿಸುತ್ತಾರೆ. ಆದರೀಗ  ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ವೈಶಿಷ್ಟ್ಯ ಬಂದಿದೆ, ಇದರ ಸಹಾಯದಿಂದ ನೀವು ಯಾವುದೇ ರೀಲ್ ಅನ್ನು 2X ವೇಗದಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ. ನೀವು ರೀಲ್ ಅನ್ನು ವೇಗವಾಗಿ ವೀಕ್ಷಿಸಲು ಬಯಸಿದಾಗ ಇದು ಉಪಯುಕ್ತವಾಗಿರುತ್ತದೆ. ಇದನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ನಾವು ಹೇಳುತ್ತೇವೆ.

ಮಾಧ್ಯಮ ವರದಿಗಳ ಪ್ರಕಾರ, ಜನರ ಬೇಡಿಕೆಯ ನಂತರ ಈ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ ಮತ್ತು ಇದು ಟಿಕ್‌ಟಾಕ್‌ನಿಂದ ಪ್ರೇರಿತವಾಗಿದೆ ಎಂದು ತೋರುತ್ತದೆ. ಮುಂದಿನ ದಿನಗಳಲ್ಲಿ, ಇನ್‌ಸ್ಟಾ ರೀಲ್‌ಗಳು 3 ನಿಮಿಷಗಳವರೆಗೆ ಇರಬಹುದು ಎಂದು ಹೇಳಲಾಗುತ್ತಿದೆ, ಅಂತಹ ಪರಿಸ್ಥಿತಿಯಲ್ಲಿ ಹೊಸ ವೈಶಿಷ್ಟ್ಯವು ರೀಲ್‌ಗಳನ್ನು ತ್ವರಿತವಾಗಿ ಮುಗಿಸಲು ಉಪಯುಕ್ತವಾಗಿದೆ.

ಈ ವೈಶಿಷ್ಟ್ಯವು ಈಗಾಗಲೇ ಟಿಕ್‌ಟಾಕ್‌ನಲ್ಲಿ ಲಭ್ಯವಿದೆ:

ಇನ್‌ಸ್ಟಾಗ್ರಾಮ್‌ನಲ್ಲಿ ಬಂದಿರುವ ವೈಶಿಷ್ಟ್ಯವು ಈಗಾಗಲೇ ಟಿಕ್‌ಟಾಕ್‌ನಲ್ಲಿದೆ. ಕಂಪನಿಯು ಈಗಾಗಲೇ ಟಿಕ್‌ಟಾಕ್‌ನಂತಹ ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಿದೆ ಕೂಡ, ಇದರಲ್ಲಿ ರೀಮಿಕ್ಸ್ ಟೂಲ್ ಕೂಡ ಸೇರಿದೆ. ಅದೇ ಸಮಯದಲ್ಲಿ, 2x ವೇಗದ ವೈಶಿಷ್ಟ್ಯವನ್ನು ವಿಶ್ವಾದ್ಯಂತ ಹೊರತರಲಾಗಿದೆ. ಈ ಹೊಸ ವೈಶಿಷ್ಟ್ಯ ಸಾಕಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿದೆ. ಆದರೆ, ರೀಲ್‌ಗಳು 2X ವೇಗದಲ್ಲಿ ಚಲಿಸಿದಾಗ, ಅದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮೆದುಳು ಕೂಡ 2X ವೇಗದಲ್ಲಿ ಕೆಲಸ ಮಾಡಿಸಬೇಕು.

ಇದನ್ನೂ ಓದಿ
ಭಾರತದಲ್ಲಿ ಬರೋಬ್ಬರಿ 9.7 ಮಿಲಿಯನ್ ವಾಟ್ಸ್ಆ್ಯಪ್ ಖಾತೆ ನಿಷೇಧ
AC ಯಿಂದ ಶಬ್ದ ಬರುತ್ತಿದೆಯೇ?: ಹಾಗಾದರೆ ಈ ರೀತಿ ಮಾಡಿ, ಕೂಡಲೇ ಸರಿಯಾಗುತ್ತೆ
5500mAh ಬ್ಯಾಟರಿ, ಆಕರ್ಷಕ ಕ್ಯಾಮೆರಾ: ಕಡಿಮೆ ಬೆಲೆಗೆ ಹೊಸ ಫೋನ್ ರಿಲೀಸ್
ಹೊಸ ಮೊಬೈಲ್: ಏಪ್ರಿಲ್​ನಲ್ಲಿ ಬರಲಿದೆ ಆಕರ್ಷಕ ಸ್ಮಾರ್ಟ್​ಫೋನ್ಸ್

WhatsApp Ban: ಭಾರತದಲ್ಲಿ ಬರೋಬ್ಬರಿ 9.7 ಮಿಲಿಯನ್ ವಾಟ್ಸ್ಆ್ಯಪ್ ಖಾತೆ ನಿಷೇಧ: ಮೆಟಾದಿಂದ ದೊಡ್ಡ ಕ್ರಮ

2x ವೇಗದಲ್ಲಿ ಇನ್‌ಸ್ಟಾ ರೀಲ್‌ಗಳನ್ನು ವೀಕ್ಷಿಸುವುದು ಹೇಗೆ?:

  • ಈ ವೈಶಿಷ್ಟ್ಯವನ್ನು ವಿಶ್ವಾದ್ಯಂತ ಇನ್‌ಸ್ಟಾ ಬಳಕೆದಾರರಿಗಾಗಿ ಬಿಡುಗಡೆ ಮಾಡಲಾಗಿದೆ. ನಿಮ್ಮ ಇನ್​ಸ್ಟಾದಲ್ಲಿ ಈ ವೈಶಿಷ್ಟ್ಯ ಇಲ್ಲದಿದ್ದಲ್ಲಿ ನೀವು ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಬೇಕಾಗುತ್ತದೆ.
  • ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು 2X ವೇಗದಲ್ಲಿ ವೀಕ್ಷಿಸಲು, ಇನ್‌ಸ್ಟಾ ಅಪ್ಲಿಕೇಶನ್‌ಗೆ ಹೋಗಿ ಮತ್ತು ರೀಲ್ಸ್ ವಿಭಾಗದ ಮೇಲೆ ಕ್ಲಿಕ್ ಮಾಡಿ.
  • ನೀವು ನೋಡಲು ಬಯಸುವ ಯಾವುದೇ ರೀಲ್ ಅನ್ನು ಪ್ಲೇ ಮಾಡಿ.
  • ರೀಲ್‌ಗಳನ್ನು 2X ವೇಗದಲ್ಲಿ ವೀಕ್ಷಿಸಲು ನೀವು ಡಿಸ್​ಪ್ಲೇ ಬಲ ಅಥವಾ ಎಡ ಭಾಗವನ್ನು ಒತ್ತಿ ಹಿಡಿಯಬೇಕು.
  • ನಂತರ ರೀಲ್ 2x ಪ್ಲೇಬ್ಯಾಕ್‌ನಲ್ಲಿ ಪ್ಲೇ ಆಗಲು ಪ್ರಾರಂಭಿಸುತ್ತದೆ. ನೀವು ಡಿಸ್​ಪ್ಲೇಯಿಂದ ನಿಮ್ಮ ಬೆರಳನ್ನು ತೆಗೆದ ತಕ್ಷಣ, ಅದು ಸಾಮಾನ್ಯ ವೇಗಕ್ಕೆ ಮರಳುತ್ತದೆ.

ಜನರ ಬೇಡಿಕೆಯ ಮೇರೆಗೆ ಹೊಸ ವೈಶಿಷ್ಟ್ಯ:

ವರದಿಗಳ ಪ್ರಕಾರ, ಜನರ ಬೇಡಿಕೆಯ ಮೇರೆಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ ಎಂದು ಮೆಟಾ ಹೇಳಿದೆ. ಕಂಪನಿಯ ಪ್ರಕಾರ, ಕಮ್ಯೂನಿಟಿ ಪ್ರತಿಕ್ರಿಯೆಯ ನಂತರ ಈ ವೈಶಿಷ್ಟ್ಯವನ್ನು ಪರಿಚಯಿಸಲಾಯಿತು. ಈಗ ಜನರು ರೀಲ್‌ಗಳನ್ನು ಬೇಗನೆ ವೀಕ್ಷಿಸಲು ಸಾಧ್ಯವಾಗುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ರೀಲ್‌ಗಳನ್ನು ವೀಕ್ಷಿಸಲು ಬಯಸುವವರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಟಿಕ್‌ಟಾಕ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿರುವುದರಿಂದ ಮತ್ತು ಜನರು ಹೆಚ್ಚಾಗಿ ಇನ್‌ಸ್ಟಾಗ್ರಾಮ್ ಅನ್ನು ಶಾರ್ಟ್ ವಿಡಿಯೋ ವೇದಿಕೆಯಾಗಿ ಬಳಸುವುದರಿಂದ ಭಾರತದಲ್ಲಿಯೂ ಜನರು ಈ ವೈಶಿಷ್ಟ್ಯವನ್ನು ಇಷ್ಟಪಡಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ