ಟೆಕ್ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಆ್ಯಪಲ್ (Apple) ಕಂಪನಿ ಪ್ರತಿ ವರ್ಷ ಐಫೋನ್ ನೂತನ ಸರಣಿಯನ್ನು ಬಿಡುಗಡೆ ಮಾಡುವುದು ವಾಡಿಕೆಯಾಗಿದೆ. ಇದೀಗ ತನ್ನ ಬಹುನಿರೀಕ್ಷಿತ ಐಫೋನ್ 14 ಸರಣಿಯನ್ನು (iPhone 14 Series) ಅನಾವರಣ ಮಾಡಿದ್ದು, ಇದರಲ್ಲಿ ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ ಮತ್ತು ಐಫೋನ್ 14 ಪ್ರೊ ಮ್ಯಾಕ್ಸ್ ಹೀಗೆ ನಾಲ್ಕು ನೂತನ ಆಕರ್ಷಕ ಫೋನ್ಗಳಿವೆ. ಹಿಂದಿನ ಸರಣಿಗಳಿಗೆ ಹೋಲಿಸಿದರೆ ಈ ಬಾರಿ ಕೆಲವೊಂದು ನೂತನ ಫೀಚರ್ಗಳು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಕಳೆದ ವರ್ಷ ಬಿಡುಗಡೆ ಆದ ಐಫೋನ್ 13 (iPhone 13) ಹಾಗೂ ಬುಧವಾರ ರಿಲೀಸ್ ಆದ ಐಫೋನ್ 14 ನಡುವೆ ಯಾವುದು ಬೆಸ್ಟ್?, ಯಾವ ಫೀಚರ್ಸ್ನಲ್ಲಿ ಬದಲಾವಣೆ ಇದೆ ಎಂಬುದನ್ನು ನೋಡೋಣ.
ಐಫೋನ್ 13 ಸ್ಮಾರ್ಟ್ಫೋನ್ ಐಫೋನ್ 12 ನ ಮುಂದಿನ ಆವೃತ್ತಿ. ಇದು 6.1 ಇಂಚಿನ ಡಿಸ್ ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್, 1200 ನಿಟ್ಸ್ ಬ್ರೈಟ್‌ನೆಸ್ ನಿಂದ ಕೂಡಿದೆ. ಹಾಗೆಯೇ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅಳವಡಿಸಲಾಗಿತ್ತು. ಇದೀಗ ನೂತನ ಐಫೋನ್ 14 ಕೂಡ ಸೂಪರ್ ರೆಟಿನಾ 6.1 ಇಂಚಿನ XDR OLED ಡಿಸ್‌ಪ್ಲೇ ಹೊಂದಿದ್ದು, 1200nits ಬ್ರೈಟ್ನಸ್ ಸಪೋರ್ಟ್ ಪಡೆದುಕೊಂಡಿದೆ. A15 ಬಯೋನಿಕ್ ಚಿಪ್ಸೆಟ್ನಿಂದ ಕಾರ್ಯನಿರ್ವಹಿಸುತ್ತದೆ. ಡಿಸ್ ಪ್ಲೇ ವಿಚಾರದಲ್ಲಿ ಎರಡೂ ಮಾಡೆಲ್ಗಳು ಸಾಮಾನ್ಯವಾಗಿ ಒಂದೇ ರೀತಿಯಿದೆ.
ಕ್ಯಾಮರಾ ವಿಚಾರಕ್ಕೆ ಬರುವುದಾದರೆ, ಐಫೋನ್ 13 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಐಫೋನ್ 14 ನಲ್ಲಿ ಕ್ಯಾಮೆರಾ 12 ಮೆಗಾ ಪಿಕ್ಸೆಲ್ನಲ್ಲಿ ಇದ್ದರೂ ದೊಡ್ಡ ಸೆನ್ಸಾರ್ ಮತ್ತು ದೊಡ್ಡ ಪಿಕ್ಸೆಲ್ಸ್ ನೀಡಲಾಗಿದೆ. ಅಲ್ಲದೆ ಟ್ರೂ ಡೆಪ್ತ್ ಕ್ಯಾಮೆರಾ ಅಳವಡಿಸಲಾಗಿದೆ. ಆಲ್ಟ್ರಾ ವೈಡ್ ಕ್ಯಾಮೆರಾದಲ್ಲಿ ಕೂಡ ಹೆಚ್ಚಿನ ಜಾಗವನ್ನು ಕವರ್ ಮಾಡುತ್ತದೆ. ಮುಖ್ಯವಾಗಿ ಕಡಿಮೆ ಬೆಳಕು ಇರುವ ಪ್ರದೇಶದಲ್ಲಿ ಐಫೋನ್ 13 ಗಿಂತ 14 ಅತ್ಯುತ್ತಮ ಫೋಟೋ ಸೆರೆ ಹಿಡಿಯುತ್ತದೆ.
ಐಫೋನ್ 14ರ ಮುಖ್ಯ ಫೀಚರ್ ಎಂದರೆ ಸೆಟಲೈಟ್ ಕನೆಟ್ಕಿವಿಟಿ. ಇದು ಐಫೋನ್ 13 ನಲ್ಲಿ ಇಲ್ಲ. ಬ್ಯಾಟರಿ ಶಕ್ತಿ ಕೂಡ ಕೊಂಚ ಹೆಚ್ಚಿದೆ. ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿದೆ. ಐಫೋನ್ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು ಇ–ಸಿಮ್ ಆಯ್ಕೆಯನ್ನು ನೀಡಲಾಗಿದೆ.
ಐಫೋನ್ 13 ಬೆಲೆ:
128GB: 69,900 ರೂ.
– 256GB: 79,900 ರೂ.
– 512GB: 1,02,756 ರೂ.
ಐಫೋನ್ 14 ಬೆಲೆ:
– 128GB: 79,999 ರೂ.
– 256GB: 89,999 ರೂ.
– 512GB: 1,09,900 ರೂ.
Published On - 1:04 pm, Thu, 8 September 22