iPhone 15: ಆ್ಯಪಲ್ ಐಫೋನ್​ನಲ್ಲಿ ಬರುತ್ತಿದೆ ಟೈಪ್-ಸಿ ಚಾರ್ಜಿಂಗ್

|

Updated on: Mar 25, 2023 | 4:11 PM

ಟೈಪ್-ಸಿ ಪೋರ್ಟ್​ಗಳನ್ನೇ ಬಳಸಬೇಕು ಎಂದು ಈಗಾಗಲೇ ಹಲವು ಸರ್ಕಾರಗಳು ಎಲ್ಲ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳಿಗೆ ಸೂಚಿಸಿವೆ. ಹೀಗಾಗಿ, ಆ್ಯಪಲ್ ಕೂಡ ಮುಂದಿನ ಸರಣಿಯ ಐಫೋನ್​ನಲ್ಲಿ ಲೈಟನಿಂಗ್ ಚಾರ್ಜಿಂಗ್ ಪೋರ್ಟ್ ಬದಲು, ಯುಎಸ್​ಬಿ-ಟೈಪ್ ಸಿ ಪೋರ್ಟ್​ಗಳನ್ನು ಬಳಸಲು ಮುಂದಾಗಿದೆ. ಹೆಚ್ಚಿನ ವಿವರ ವಿಡಿಯೊದಲ್ಲಿದೆ.

ಆ್ಯಪಲ್ ಕಂಪನಿಯ ಐಫೋನ್​ಗಳಲ್ಲಿ ಲೈಟನಿಂಗ್ ಪೋರ್ಟ್ ಇರುವುದು ಸಾಮಾನ್ಯ. ಅಲ್ಲದೆ, ಆ್ಯಪಲ್ ಇತರ ಮಾದರಿಯ ಪೋರ್ಟ್​​ಗಳನ್ನು ತನ್ನ ಉತ್ಪನ್ನಗಳಲ್ಲಿ ಬಳಸುವುದಿಲ್ಲ. ಆದರೆ, ಬಹುತೇಕ ಎಲ್ಲ ಬ್ರ್ಯಾಂಡ್​ಗಳು ಈಗ ಸ್ಮಾರ್ಟ್​ಫೋನ್, ಗ್ಯಾಜೆಟ್​ಗಳಲ್ಲಿ ಯುಎಸ್​ಬಿ ಟೈಪ್- ಸಿ ಪೋರ್ಟ್​ಗಳನ್ನು ಬಳಸುತ್ತಿವೆ.

Published on: Mar 25, 2023 04:11 PM