ಇತ್ತೀಚಿಗಷ್ಟೆ ತನ್ನ ಐಕ್ಯೂ ನಿಯೋ 7 (iQoo Neo 7) ಸರಣಿಯನ್ನು ಪರಿಚಯಿಸಿ ಯಶಸ್ಸು ಸಾಧಿಸಿದ್ದ ಕಂಪನಿ ಇದೀಗ ಅದೇ ಸರಣಿಯಲ್ಲಿ ಹೊಸದಾಗಿ ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ (iQoo Neo 7 Racing Edition) ಫೋನ್ ಅನಾವರಣ ಮಾಡಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಇದೀಗ ಹೊಸ ಫೋನ್ನೊಂದಿಗೆ ಮತ್ತೆ ಬಂದಿದೆ. ಇತ್ತೀಚಿಗಷ್ಟೆ ತನ್ನ ಐಕ್ಯೂ ನಿಯೋ 7 (iQoo Neo 7) ಸರಣಿಯನ್ನು ಪರಿಚಯಿಸಿ ಯಶಸ್ಸು ಸಾಧಿಸಿದ್ದ ಕಂಪನಿ ಇದೀಗ ಅದೇ ಸರಣಿಯಲ್ಲಿ ಹೊಸದಾಗಿ ಐಕ್ಯೂನಿಯೋ 7 ರೇಸಿಂಗ್ ಎಡಿಷನ್ (iQoo Neo 7 Racing Edition) ಫೋನ್ ಅನಾವರಣ ಮಾಡಿದೆ. ಇದುಕೂಡ ಸಾಕಷ್ಟು ಬಲಿಷ್ಠವಾಗಿದ್ದು, ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್, ಅತ್ಯುತ್ತಮ ಬ್ಯಾಟರಿ, ಫಾಸ್ಟ್ ಚಾರ್ಜರ್, ಉತ್ತಮ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ.
ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ ಭಾರತಕ್ಕೆ ಇನ್ನಷ್ಟೆ ಬರಬೇಕಿದೆ. ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆ ಆಗಿರುವ ಈ ಫೋನಿನ 8GB + 128GB ರೂಪಾಂತರದ ಆಯ್ಕೆಯ ಬೆಲೆ RMB 2,799, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 33,305ರೂ. ಎನ್ನಬಹುದು.
ಈ ಸ್ಮಾರ್ಟ್‌ಫೋನ್ 6.78 ಇಂಚಿನ FHD+ E5 ಅಮೋಲೆಡ್ ಪಂಚ್-ಹೋಲ್ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 120Hz ರಿಫ್ರೆಶ್ ರೇಟ್ ಮತ್ತು ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.
ಇದನ್ನೂ ಓದಿ
WhatsApp: ಹೊಸ ವರ್ಷಕ್ಕೆ ಮೆಟಾದಿಂದ ಬಿಗ್ ಶಾಕ್: ಈ ಆಂಡ್ರಾಯ್ಡ್-ಐಫೋನ್ನಲ್ಲಿ ವಾಟ್ಸ್ಆ್ಯಪ್ ಬಂದ್
Type C Charger ಶೀಘ್ರದಲ್ಲೇ ಭಾರತದಲ್ಲಿ ಕಡ್ಡಾಯವಾಗಲಿದೆ ಯುಎಸ್‌ಬಿ ಟೈಪ್-ಸಿ ಚಾರ್ಜರ್; ಸರ್ಕಾರದ ಆದೇಶದಲ್ಲೇನಿದೆ?
Reliance Jio 5G in Mysore: ಹೊಸ ವರ್ಷಕ್ಕೆ ಬಂಪರ್ ಕೊಡುಗೆ: ಮೈಸೂರು ಸೇರಿ 11 ನಗರಗಳಲ್ಲಿ ಜಿಯೋ ಟ್ರೂ 5G ಸೇವೆ ಪ್ರಾರಂಭ
Elon Musk: ಸರಿಯಾಯಿತು ಕೆಟ್ಟು ಹೋಗಿದ್ದ ಟ್ವಿಟರ್: ಎಲಾನ್ ಮಸ್ಕ್ ನೀಡಿದ ಕಾರಣವೇನು ನೋಡಿ
ಬಲಿಷ್ಠವಾದ ಸ್ನಾಪ್‌ಡ್ರಾಗನ್ 8+ Gen 1SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರದ ಮೇಲೆ OriginOS 3 ನಲ್ಲಿ ರನ್ ಆಗುತ್ತದೆ.
ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸ್ಯಾಮ್‌ಸಂಗ್ GN5 ಸೆನ್ಸಾರ್ನಿಂದ ಕೂಡಿದೆ.
ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ ಮೂರನೇ ಕ್ಯಾಮೆರಾ 2ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ.
ಇನ್ನು 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಇದಕ್ಕೆ ತಕ್ಕಂತೆ 120W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. 0-50% ಚಾರ್ಜ್ ಕೇವಲ 9 ನಿಮಿಷಗಳಲ್ಲಿ ಆಗುತ್ತದೆ ಎಂದು ಕಂಪನಿ ಹೇಳಿದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ ಆಕ್ಸಿಲೆರೋ ಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಗ್ಯಾವಿಟಿ ಸೆನ್ಸಾರ್ ಅನ್ನು ನೀಡಲಾಗಿದೆ.