Reliance Jio 5G: ಮೈಸೂರು ಬಳಿಕ ಮತ್ತೆರಡು ನಗರಗಳಲ್ಲಿ ಜಿಯೋ ಟ್ರೂ 5G ಸೇವೆ ಆರಂಭ
ಮೊನ್ನೆಯಷ್ಟೆ ಮೈಸೂರು ಸೇರಿದಂತೆ ಇತರೆ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಲಾಗಿತ್ತು. ಇದೀಗ ಮತ್ತೆರಡು ನಗರಗಳಲ್ಲಿ ಜಿಯೋ 5ಜಿ ಲಭ್ಯವಾಗುತ್ತಿದೆ.
ಭಾರತದಲ್ಲಿ ಈಗಾಗಲೇ 5ಜಿ ಸೇವೆಯನ್ನು (5G Service) ಆರಂಭ ಮಾಡಲಾಗಿದ್ದು ಲಕ್ಷಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ಏರ್ಟೆಲ್ ಹಾಗೂ ರಿಲಯನ್ಸ್ ಜಿಯೋದಂತಹ (Reliance Jio) ಪ್ರಮುಖ ಟೆಲಿಕಾಂ ಸಂಸ್ಥೆಗಳು 5ಜಿ ಸೇವೆ ಪ್ರಾಯೋಗಿಕ ಪ್ರಯೋಗವನ್ನು ಆರಂಭಿಸಿದೆ. ಮೊನ್ನೆಯಷ್ಟೆ ಮೈಸೂರು ಸೇರಿದಂತೆ ಇತರೆ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಲಾಗಿತ್ತು. ಈ ಮೂಲಕ ರಾಜ್ಯದಲ್ಲಿ ಬೆಂಗಳೂರಿನ ನಂತರ ಬಹುನಿರೀಕ್ಷಿತ 5ಜಿ ಸೇವೆಗೆ ಚಾಲನೆ ದೊರೆತ ರಾಜ್ಯದ ಎರಡನೇ ನಗರ ಎಂಬ ಹೆಗ್ಗಳಿಕೆ ಮೈಸೂರಿಗೆ ದೊರೆತಿಯಿತು. ಇದೀಗ ಮತ್ತೆರಡು ನಗರಗಳಲ್ಲಿ ಜಿಯೋ 5ಜಿ ಲಭ್ಯವಾಗುತ್ತಿದೆ.
ಲಖನೌ, ಮೈಸೂರು, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಯಲ್ಲಿ ಮೊನ್ನೆಯಷ್ಟೆ ಜಿಯೋ ಟ್ರೂ 5ಜಿ ಸೇವೆ ಆರಂಭವಾಗಿದೆ. ಇದೀಗ ಇಂಧೋರ್ ಮತ್ತು ಬೋಪಾಲ್ನಲ್ಲಿ ಜಿಯೋ ಬಳಕೆದಾರರು 5G ಆನಂದ ಪಡೆಯುತ್ತಿದ್ದಾರೆ. ಆದರೆ, ಸಂಪೂರ್ಣವಾಗಿ 5ಜಿ ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲವಂತೆ. ಕರೆ ಮಾಡಲು ತೊಂದರೆ ಆಗುತ್ತಿದೆ ಎಂದು ಕೆಲವರು ದೂರಿದ್ದಾರೆ.
Google Pixel 6a: 38,899 ರೂ. ಡಿಸ್ಕೌಂಟ್: ಕೇವಲ 5,100 ರೂ. ಗೆ ಖರೀದಿಸಿ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್ಫೋನ್
5ಜಿಯಲ್ಲಿ 100MHz ಅತೀ ಕಡಿಮೆ ಬ್ಯಾಂಡ್ ಆಗಿದ್ದು, 2.3GHz ಮಧ್ಯಮ ಬ್ಯಾಂಡ್ ಆಗಿದೆ. ಅದಕ್ಕಿಂತ ಅಧಿಕ ಬ್ಯಾಂಡ್‌ಗಳು ಕೂಡಾ ಇದೆ. ಮಧ್ಯಮ ಬ್ಯಾಂಡ್‌ನಲ್ಲಿಯೇ ಉತ್ತಮ ನೆಟ್‌ವರ್ಕ್ ಲಭ್ಯವಾಗಲಿದೆ. 5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್‌ಗಿಂತಲೂ ಸ್ಪೀಡ್ ಆಗಿರುತ್ತದೆ. ನೀವು ಯಾವುದೇ ಸಿನಿಮಾ, ವಿಡಿಯೋ, ಆಪ್ ಡೌನ್‌ಲೋಡ್ ಅನ್ನು ಶೀಘ್ರವಾಗಿ ಮಾಡಲು ಸಾಧ್ಯವಾಗಲಿದೆ. ಇದು ಪ್ರತಿ ಸೆಕೆಂಡಿಗೆ 10 ಜಿಬಿ ವೇಗದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಭಾರತದಲ್ಲಿ ಪ್ರಸ್ತುತವಿರುವ 4ಜಿ ಡೌನ್‌ಲೋಡ್ ಸ್ಪೀಡ್‌ಗಿಂತ ನೂರು ಪಟ್ಟು ಅಧಿಕ ವೇಗವನ್ನು 5ಜಿ ನೆಟ್‌ವರ್ಕ್ ಹೊಂದಿರಲಿದೆ.
5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಹೊಸ 5G ಸಿಮ್ ಖರೀದಿಸಬೇಕಾಗಿಲ್ಲ ಎಂದು ಜಿಯೋ ಈ ಹಿಂದೆ ತನ್ನ ಬಳಕೆದಾರರಿಗೆ ಭರವಸೆ ನೀಡಿದೆ. ಸದ್ಯ ಬಳಕೆಯಲ್ಲಿರುವ ಜಿಯೋ 4G ಸಿಮ್, ನೂತನ 5G ಸಂಪರ್ಕವನ್ನು ಸಪೋರ್ಟ್ ಮಾಡಲಿದೆ. ಜಿಯೋ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್ ಆಫರ್‌ನ ಆಹ್ವಾನವನ್ನು ಕಳುಹಿಸುತ್ತದೆ. ಈ ನಿಟ್ಟಿನಲ್ಲಿ ನೀವೇನಾದರೂ ಜಿಯೋ 5G ಸಪೋರ್ಟ್ ಇರುವ ನಗರಗಳಲ್ಲಿ ಇದ್ದರೆ, ಮೈ ಜಿಯೋ (MyJio) ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್ ಆಫರ್ ಪಡೆಯಬಹುದು.
ಜಿಯೋ ಟ್ರೂ 5G ಸೇವೆ ಇರುವ ನಗರಗಳ ಪಟ್ಟಿ ಇಲ್ಲಿದೆ:
ದೆಹಲಿ, ಬೆಂಗಳೂರು, ಮುಂಬೈ, ವಾರಣಾಸಿ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ನಾಥದ್ವಾರ, ಪುಣೆ, ಗುರುಗ್ರಾಮ, ನೋಯ್ಡಾ, ಘಾಜಿಯಾಬಾದ್, ಫರಿದಾಬಾದ್, ಗುಜರಾತ್‌ನ 33 ಜಿಲ್ಲಾ ಕೇಂದ್ರಗಳು, ಲಖನೌ, ಇಂಧೋರ್, ಮೈಸೂರು, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಕ್ಪುರ್, ಖರಾರ್, ದೇರಾಬಸ್ಸಿನಲ್ಲಿ ಜಿಯೋ ಟ್ರೂ 5ಜಿ ಸೇವೆ ಲಭ್ಯವಾಗುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ