iQoo Neo 7: 50MP ಕ್ಯಾಮೆರಾ, 120W ಫಾಸ್ಟ್ ಚಾರ್ಜರ್: ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ ಸ್ಮಾರ್ಟ್‌ಫೋನ್ ಬಿಡುಗಡೆ
ಇತ್ತೀಚಿಗಷ್ಟೆ ತನ್ನ ಐಕ್ಯೂ ನಿಯೋ 7 (iQoo Neo 7) ಸರಣಿಯನ್ನು ಪರಿಚಯಿಸಿ ಯಶಸ್ಸು ಸಾಧಿಸಿದ್ದ ಕಂಪನಿ ಇದೀಗ ಅದೇ ಸರಣಿಯಲ್ಲಿ ಹೊಸದಾಗಿ ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ (iQoo Neo 7 Racing Edition) ಫೋನ್ ಅನಾವರಣ ಮಾಡಿದೆ.
ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಇದೀಗ ಹೊಸ ಫೋನ್ನೊಂದಿಗೆ ಮತ್ತೆ ಬಂದಿದೆ. ಇತ್ತೀಚಿಗಷ್ಟೆ ತನ್ನ ಐಕ್ಯೂ ನಿಯೋ 7 (iQoo Neo 7) ಸರಣಿಯನ್ನು ಪರಿಚಯಿಸಿ ಯಶಸ್ಸು ಸಾಧಿಸಿದ್ದ ಕಂಪನಿ ಇದೀಗ ಅದೇ ಸರಣಿಯಲ್ಲಿ ಹೊಸದಾಗಿ ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ (iQoo Neo 7 Racing Edition) ಫೋನ್ ಅನಾವರಣ ಮಾಡಿದೆ. ಇದುಕೂಡ ಸಾಕಷ್ಟು ಬಲಿಷ್ಠವಾಗಿದ್ದು, ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್, ಅತ್ಯುತ್ತಮ ಬ್ಯಾಟರಿ, ಫಾಸ್ಟ್ ಚಾರ್ಜರ್, ಉತ್ತಮ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಫೋನಿನ ಬೆಲೆ, ಸಂಪೂರ್ಣ ಫೀಚರ್ಸ್ ಬಗೆಗಿನ ಮಾಹಿತಿ ಇಲ್ಲಿದೆ.
- ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ ಭಾರತಕ್ಕೆ ಇನ್ನಷ್ಟೆ ಬರಬೇಕಿದೆ. ಸದ್ಯಕ್ಕೆ ಚೀನಾದಲ್ಲಿ ಬಿಡುಗಡೆ ಆಗಿರುವ ಈ ಫೋನಿನ 8GB + 128GB ರೂಪಾಂತರದ ಆಯ್ಕೆಯ ಬೆಲೆ RMB 2,799, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 33,305ರೂ. ಎನ್ನಬಹುದು.
- ಈ ಸ್ಮಾರ್ಟ್‌ಫೋನ್ 6.78 ಇಂಚಿನ FHD+ E5 ಅಮೋಲೆಡ್ ಪಂಚ್-ಹೋಲ್ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ 120Hz ರಿಫ್ರೆಶ್ ರೇಟ್ ಮತ್ತು ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.
- ಬಲಿಷ್ಠವಾದ ಸ್ನಾಪ್‌ಡ್ರಾಗನ್ 8+ Gen 1SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರದ ಮೇಲೆ OriginOS 3 ನಲ್ಲಿ ರನ್ ಆಗುತ್ತದೆ.
- ಐಕ್ಯೂ ನಿಯೋ 7 ರೇಸಿಂಗ್ ಎಡಿಷನ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50MP ಸ್ಯಾಮ್‌ಸಂಗ್ GN5 ಸೆನ್ಸಾರ್ನಿಂದ ಕೂಡಿದೆ.
- ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ ಮೂರನೇ ಕ್ಯಾಮೆರಾ 2ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿದೆ.
- ಇನ್ನು 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
- ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಇದಕ್ಕೆ ತಕ್ಕಂತೆ 120W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. 0-50% ಚಾರ್ಜ್ ಕೇವಲ 9 ನಿಮಿಷಗಳಲ್ಲಿ ಆಗುತ್ತದೆ ಎಂದು ಕಂಪನಿ ಹೇಳಿದೆ.
- ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ ಆಕ್ಸಿಲೆರೋ ಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್, ಗ್ಯಾವಿಟಿ ಸೆನ್ಸಾರ್ ಅನ್ನು ನೀಡಲಾಗಿದೆ.
ಇದನ್ನೂ ಓದಿ
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Fri, 30 December 22